ನಗರದ ಅಭಿಲಾಶ್ ಚಲನಚಿತ್ರ ಮಂದಿರದಲ್ಲಿ ವಿಶ್ವಸಿರಿ ಸೇವಾ ಟ್ರಸ್ಟ್ನಿಂದ ಹಮ್ಮಿಕೊಂಡಿದ್ದ ದ್ವೀತಿಯ ಪಿಯುಸಿ ಪ್ರತಿಭಾ ಪುರಸ್ಕಾರದಲ್ಲಿ ಮಾತನಾಡಿ, ನಾವು ಕಂಪ್ಯೂಟರ್, ಎಐ ಯುಗದಲ್ಲಿದ್ದೇವೆ. ಕ್ರಿಯಾಶೀಲತೆಗೆ ಇಲ್ಲಿ ಬೆಲೆ, ಬೇಡಿಕೆ ಹೆಚ್ಚು. ಆದ್ದರಿಂದ ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ನಿತ್ಯ ನವೀಕರಣಗೊಳ್ಳಬೇಕು. ತಮ್ಮ ಇಚ್ಚೆಯ ಕ್ಷೇತ್ರಗಳಲ್ಲಿ ಕ್ರಿಯಾಶೀಲತೆ ಬೆಳೆಸಿಕೊಂಡು ಸಾಧನೆ ಹಾದಿಯಲ್ಲಿ ಸಾಗಿದಾಗ ಯಶಸ್ಸು ಲಭಿಸುತ್ತದೆ ಎಂದು ಹೇಳಿದರು.