ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕೆ ಪೂರಕ

ಹುಣಶ್ಯಾಳ ಪಿಬಿ ಗ್ರಾಮದ ಎಸ್.ಪಿ. ಆಲೂರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಕಾಶ ಆಲೂರ, ಶರಣು ಆಲೂರ, ಚಂದ್ರಕಾಂತ ಅಳಗುಂಡಗಿ, ಬಿ. ಎಸ್. ಬಿರಾದಾರ, ಶ್ರೀಶೈಲ ಕೋಳೂರ, ಚಂದ್ರಶೇಖರಗೌಡ ಪಾಟೀಲ, ಚಂದಪ್ಪ ಪಾಟೀಲ ಮತ್ತಿತರರಿದ್ದರು.
ಹುಣಶ್ಯಾಳ ಪಿಬಿ ಗ್ರಾಮದ ಎಸ್.ಪಿ. ಆಲೂರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಕಾಶ ಆಲೂರ, ಶರಣು ಆಲೂರ, ಚಂದ್ರಕಾಂತ ಅಳಗುಂಡಗಿ, ಬಿ. ಎಸ್. ಬಿರಾದಾರ, ಶ್ರೀಶೈಲ ಕೋಳೂರ, ಚಂದ್ರಶೇಖರಗೌಡ ಪಾಟೀಲ, ಚಂದಪ್ಪ ಪಾಟೀಲ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ರಾಜುಗೌಡ ಪಾಟೀಲ ಹೇಳಿಕೆ
  • ಅಭಿನಂದನಾ ಸಮಾರಂಭ
  • ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಅತ್ಯಗತ್ಯ
ಹೂವಿನಹಿಪ್ಪರಗಿ: ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ನೀಡುವ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಜೀವನದಲ್ಲಿ ಜವಾಬ್ದಾರಿ ಹೆಚ್ಚಿಸಿ ಮುಂದಿನ ವಿಧ್ಯಾಭ್ಯಾಸದಲ್ಲಿ ಓದಲು ಪ್ರೋತ್ಸಾಹ ದೊರೆಯುತ್ತದೆ. ಆ ನಿಟ್ಟಿನಲ್ಲಿ ಇಂದು ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿ ಸಾಲವಾಡಗಿ ಅಭಿಪ್ರಾಯ ಪಟ್ಟರು.
ಹುಣಶ್ಯಾಳ ಪಿಬಿ ಗ್ರಾಮದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಎಸ್.ಪಿ ಆಲೂರ ಪ್ರೌಢ ಶಾಲೆಯಲ್ಲಿ ಗುರುವಾರ ಜರುಗಿದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಕ್ಕಳಲ್ಲಿ ಒಂದೊಂದು ಪ್ರತಿಭೆ ಇರುತ್ತದೆ ಅಂತಹ ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿದ್ದೆ ಆದಲ್ಲಿ ಆಗ ಮಕ್ಕಳು ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ.
ಈ ವರ್ಷ ಮಕ್ಕಳು ಉತ್ತಮ ಅಂಕಗಳನ್ನು ಪಡೆದು ಗುಣಮಟ್ಟದ ಫಲಿತಾಂಶ ತಂದಿದ್ದಾರೆ ಇಂತಹ ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ನೀಡಿದರೆ ಮುಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಅಲಕಂರಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಶಾಂತಿನಿಕೇತನ ವಿದ್ಯಾ ಸಂಸ್ಥೆ ಅಧ್ಯಕ್ಷ ಸುರೇಶ ಬಿರಾದಾರ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರ ಪಾತ್ರ ಅತೀ ಮುಖ್ಯ. ಮಕ್ಕಳು ಸಮಾಜದಲ್ಲಿ ಉತ್ತಮ ಹಾದಿಯಲ್ಲಿ ಸಾಗಲು ನೈತಿಕ ಹಾಗೂ ಮೌಲ್ಯಯುತ ಶಿಕ್ಷಣ ಅತ್ಯಗತ್ಯ, ಆ ನಿಟ್ಟಿನಲ್ಲಿ ಪೋಷಕರು ಗಮನಹರಿಸಬೇಕು. ಇಂದಿನ ಮಕ್ಕಳು ನಾಳಿನ ಪ್ರಜೆಯಾಗಬೇಕು ಎಂಬುದು ಕೇವಲ ಮಾತಿಗೆ ಸೀಮಿತವಾಗದೆ ಪ್ರತಿಯೊಬ್ಬ ಪಾಲಕರು ಮಕ್ಕಳ ಬಗ್ಗೆ ಜವಾಬ್ದಾರಿ ಹೆಚ್ಚಿರಬೇಕು ಎಂದರು.
ಹೆಚ್ಚು ಅಂಕಗಳನ್ನು ಪಡೆದ ವಿಧ್ಯಾರ್ಥಿಗಳಿಗೆ ನಗದು ರೂಪದಲ್ಲಿ ಬಹುಮಾನ ವಿತರಿಸಿದರು. ಮನಗೂಳಿ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಶಿವಾಚಾರ್ಯರು ಆರ್ಶಿವಚನ ನೀಡಿದರು.
ಎಸ್.ಪಿ. ಆಲೂರ ಶಾಲೆ ಅಧ್ಯಕ್ಷ ಪ್ರಕಾಶ ಆಲೂರ, ಪ್ರಧಾನ ಕಾರ್ಯದರ್ಶಿ ಶರಣು ಆಲೂರ, ಚಂದ್ರಕಾಂತ ಅಳಗುಂಡಗಿ, ಬಿ. ಎಸ್. ಬಿರಾದಾರ, ಶ್ರೀಶೈಲ ಕೋಳೂರ, ಚಂದ್ರಶೇಖರಗೌಡ ಪಾಟೀಲ, ಚಂದಪ್ಪ ಪಾಟೀಲ, ಮಾನಪ್ಪ ಆಲೂರ, ಸುಭಾಷ ಕರಕಂಬಿ, ಈರಣ್ಣ ಜುಗತಿ, ಎಸ್.ವೈ. ಪಾಟೀಲ, ಶಂಕ್ರಪ್ಪ ಆಲೂರ, ಮಾಜಿ ಸೈನಿಕ ಚಂದಪ್ಪ ಆಲೂರ ಸಂಗಮೇಶ ಆಲೂರ, ಜಿ.ಎಂ. ಹಳ್ಳೂರ, ಮುಖ್ಯಶಿಕ್ಷಕ ಜಿ.ಎಸ್. ಕೂಡಗಿ, ಪಿ.ಎಸ್. ಅಳ್ಳಿಚಂಡಿ, ಆರ್.ಎನ್. ಮಾಲಿಗೌಡರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net