ಗುಂಡ್ಲುಪೇಟೆ: ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ 5 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪುರಸಭೆ ಮುಖ್ಯಾಧಿಕಾರಿ ಶರವಣ ಅಧಿಕಾರಿಗಳ ಜತೆಗೂಡಿ ಪರಿಶೀಲಿಸಿದರು.
ಪಟ್ಟಣದ ಕೆಇಬಿ ರಸ್ತೆಯಲ್ಲಿ ಚರಂಡಿ ನಿರ್ಮಾಣ, ಡಾಂಬರೀಕರಣ ರಸ್ತೆ, ರಾಜಕಾಲುವೆ, ಮಳೆನೀರು ಚರಂಡಿ, ಪಾದಚಾರಿ ಮಾರ್ಗ ಮತ್ತು ರೇಲಿಂಗ್ಸ್ ಒಳಗೊಂಡಂತೆ ನಾಲ್ಕು ಪ್ರಮುಖ ಕಾಮಗಾರಿಗಳನ್ನು ಪರಿಶೀಲಿಸಿದರು.
ಸಾರ್ವಜನಿಕರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಾಮಗಾರಿಯಲ್ಲಿ ಯಾವುದೇ ಹಂತದಲ್ಲೂ ಗುಣಮಟ್ಟದ ಕೊರತೆಯಾಗಬಾರದು ಹಾಗೂ ನಿಗದಿಪಡಿಸಿದ ಸಮಯದೊಳಗಾಗಿ ಸಂಪೂರ್ಣ ಕೆಲಸವನ್ನು ಮುಗಿಸಬೇಕು ಎಂದು ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಅಧಿಕಾರಿಗಳಿಗೆ ಶರವಣ ಸೂಚನೆ ನೀಡಿದರು.
ಪುರಸಭೆ ಇಂಜಿನಿಯರ್ ಮಂಜುನಾಥ್, ಕೆ.ಆರ್.ಐ.ಡಿ.ಎಲ್ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಇದ್ದರು.