ಸಿಕ್ಕ ಅವಕಾಶ ಸದ್ಬಳಸಿಕೊಳ್ಳಿ

Take advantage of the opportunity.
Take advantage of the opportunity.
Published on
ಹುಳಿಯಾರು: ಮಹಿಳೆಯರಿಗೆ ಸಿಕ್ಕ ಅವಕಾಶ ಸಬ್ಬಳಕೆ ವಾಡಿಕೊಳ್ಳುವ ಮನಸ್ಸಿರಬೇಕು ಎಂದು ಹುಳಿಯಾರು ಕೆಂಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಿ.ಕೆ.ಶಶಿಭೂಷಣ್ ಹೇಳಿದರು.
ಹುಳಿಯಾರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸವಾರೋಪ ಸವಾರಂಭದಲ್ಲಿ ವಾತನಾಡಿ, ಮಹಿಳೆಯರು ಶಿಕ್ಷಣ, ವಿಜ್ಞಾನ, ಸಂಶೋಧನೆ, ವೈದ್ಯಕೀಯ, ಸೇನೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ವಾಡುತ್ತಿದ್ದಾರೆ. ವಿದ್ಯಾರ್ಥಿಗಳು ಇಂತಹ ಸಾಧಕಿಯರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ವಿದ್ಯಾರ್ಥಿ ಸಮಯ ವ್ಯಯಿಸದೆ ಹೆಚ್ಚಿನ ಶ್ರಮವಹಿಸಿ ವಿದ್ಯಾಭ್ಯಸ ಮಾಡಿದರೆ ಗುರಿ ತಲುಪಲು ಸಾಧ್ಯ ಎಂದರು.
ಪ್ರಾಂಶುಪಾಲೆ ಶೈಲಜಾ ವಾತನಾಡಿ, ಮಹಿಳೆಯರು ಎಲ್ಲ ವಿಭಾಗದಲ್ಲೂ ಸಾಧಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅನೇಕ ಅವಕಾಶಗಳಿವೆ. ಆದರೆ ಉತ್ತಮ ಆಯ್ಕೆ ನಿಮಗೆ ಬಿಟ್ಟಿದ್ದು. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಕಾಲೇಜಿಗೆ ಕೀರ್ತಿ ತನ್ನಿ ಎಂದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 500ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೃಷ್ಣಮೂರ್ತಿ, ಉಪನ್ಯಾಸಕರಾದ ವಿ.ಎಚ್.ರೇವಣ್ಣ, ಡಿ.ಎಂ.ವೀರಯ್ಯ, ಆರ್.ದೇವೇಂದ್ರ, ನಂದವಾಡಗಿ, ಡಿಶ್ ಬಾಬು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net