ಕನ್ನಾಳ-ಸಂಕನಾಳ ರಸ್ತೆ ದುರಸ್ತಿಗೆ ಕ್ರಮವಹಿಸಿ

ಹೂವಿನಹಿಪ್ಪರಗಿ ಸಮೀಪದ ಕನ್ನಾಳದಿಂದ ಸಂಕನಾಳ ಗ್ರಾಮಕ್ಕೆ ಹೋಗುವ ರಸ್ತೆ ದುರಸ್ತಿ ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಬಸವನಬಾಗೇವಾಡಿ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಿದರು. ಉಮೇಶ ವಾಲಿಕಾರ, ಅರವಿಂದ ಹೂಗಾರ, ಹಣಂತರಾಯ ಕಲಬುರ್ಕಿ ಇತರರಿದ್ದರು.
ಹೂವಿನಹಿಪ್ಪರಗಿ ಸಮೀಪದ ಕನ್ನಾಳದಿಂದ ಸಂಕನಾಳ ಗ್ರಾಮಕ್ಕೆ ಹೋಗುವ ರಸ್ತೆ ದುರಸ್ತಿ ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಬಸವನಬಾಗೇವಾಡಿ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಿದರು. ಉಮೇಶ ವಾಲಿಕಾರ, ಅರವಿಂದ ಹೂಗಾರ, ಹಣಂತರಾಯ ಕಲಬುರ್ಕಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಖಂಡ ಕರ್ನಾಟಕ ರೈತ ಸಂಘದಿಂದ ಆಗ್ರಹ
  • ಬಸವನಬಾಗೇವಾಡಿ ಪಂಚಾಯತ್ ರಾಜ್ ಇಲಾಖೆ ಸಹಾಯಕ ಅಭಿಯಂತರರಿಗೆ ಮನವಿ
ಹೂವಿನಹಿಪ್ಪರಗಿ: ಸಮೀಪದ ಕನ್ನಾಳದಿಂದ ಸಂಕನಾಳ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಪ್ರಯಾಣಿಕರು ಈ ರಸ್ತೆಯಲ್ಲಿ ಸಾಗಲು ಹರಸಾಹಸ ಮಾಡಬೇಕಿದೆ, ಕೂಡಲೇ ಈ ರಸ್ತೆ ದುರಸ್ತಿ ಮಾಡಬೇಕೆಂದು ಅಖಂಡ ಕರ್ನಾಟಕ ರೈತ ಸಂಘ ಬುಧವಾರ ಬಸವನಬಾಗೇವಾಡಿ ಪಂಚಾಯತ್ ರಾಜ್ ಇಲಾಖೆ ಸಹಾಯಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಅಧ್ಯಕ್ಷ ಉಮೇಶ ವಾಲಿಕಾರ ಮಾತನಾಡಿ, ಕನ್ನಾಳ -ಸಂಕನಾಳ ಹಾಗೂ ಬಸವನಬಾಗೇವಾಡಿಗೆ ಹೋಗುವ ರಸ್ತೆಯನ್ನು 10-15 ವರ್ಷಗಳ ಹಿಂದೆ ದುರಸ್ತಿ ಮಾಡಲಾಗಿತ್ತು, ಇದೀಗ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ಮಾರ್ಗವಾಗಿ ಹೋಗುವ ವೇಳೆ ಅನೇಕ ದುರ್ಘಟನೆಗಳು ಸಂಭವಿಸುತ್ತಿವೆ. ಬಸವನಬಾಗೇವಾಡಿ ತಾಲೂಕು ಆಸ್ಪತ್ರೆಗೆ ಗರ್ಭಿಣಿಯರನ್ನು ಕರೆದುಕೂಂಡು ಹೋಗುವಾಗ ಮಾರ್ಗ ಮಧ್ಯೆ ಹೆರಿಗೆಯಾದ ಪ್ರಸಂಗ ನಡೆದಿವೆ. ದ್ವಿಚಕ್ರ ವಾಹನ ಸವಾರರು ಬಿದ್ದು ಕೈ ಕಾಲು ಮುರಿದು ಕೊಂಡಿದ್ದಾರೆ. ಶಾಲಾ ಮಕ್ಕಳು ಶಾಲೆಗೆ ಹೋಗುವಾಗ ಸೈಕಲ್ ಹಾಕಿಕೊಂಡು ಬಿದ್ದು ಗಾಯಗೊಂಡಿದ್ದಾರೆ. ಶಾಸಕರು, ಅಧಿಕಾರಿಗಳು ತಕ್ಷಣ ಈ ರಸ್ತೆ ಪರಿಶೀಲಿಸಿ ರಸ್ತೆ ದುರಸ್ತಿ ಮಾಡಬೇಕೆಂದು ಆಗ್ರಹಿಸಿದರು.

ಅರವಿಂದ ಹೂಗಾರ, ಯಮನಗೌಡ ಹೂಸಗೌಡರ, ಪರಶುರಾಮ ಮುತ್ತಗಿ, ಆನಂದ ನಾಗರೆಡ್ಡಿ, ಸದಯ್ಯ ತೆಗ್ಗಿನಮಠ, ಮಲ್ಲಿಕಾರ್ಜನ ಬಿರಾದಾರ, ಇಬ್ರಾಹಿಂ ಮಕಾನದಾರ, ರಾಜು ವಡವಡಗಿ, ಸಾಹೇಬಗೌಡ ಹೂಸೂರ, ಸಿದ್ಧಯ್ಯ ಹಿರೇಮಠ, ಬಾಬುಸ್ವಾಮಿ ಹಿರೆಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net