ಸರ್ವಜ್ಞ ಜಯಂತಿಗೆ ತಹಸೀಲ್ದಾರ್ ಗೈರು

Tahsildar absent for Sarvajna Jayanti
Tahsildar absent for Sarvajna Jayanti
Published on
ಚಿಕ್ಕನಾಯಕನಹಳ್ಳಿ: ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸರ್ವಜ್ಞ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ತಹಸೀಲ್ದಾರ್ ಮಮತಾ ಗೈರಾಗಿದ್ದು, ಕುಂಬಾರ ಸಮುದಾಯದವರಿಗೆ ಬೇಸರ ಮೂಡಿಸಿತ್ತು.
ಈ ಕುರಿತು ಮಾತನಾಡಿದ ಕುಂಬಾರ ಸಮುದಾಯದ ಮುಖಂಡ ಪಾಪನಕೊಣದ ಮೋಹನ್‌ಕುಮಾರ್, ವರ್ಷಕ್ಕೊಮ್ಮೆ ನಡೆಯುವ ಶ್ರೀ ಸರ್ವಜ್ಞ ಜಯಂತಿಯನ್ನು ಸರಳವಾಗಿ ಆಚರಿಸುತ್ತಿದ್ದು, ಅದಕ್ಕೂ ತಹಸೀಲ್ದಾರ್ ಗೈರಾಗಿದ್ದು, ನಮಗೆ ಬೇಸರ ತಂದಿದೆ. ಸಮುದಾಯಕ್ಕೆ ಸರ್ಕಾರದಿಂದ ನಮಗೆ ಇದುವರೆಗೆ ಯಾವುದೇ ಸೌಲಭ್ಯಗಳು ದೊರೆಯದೆ ಇದ್ದು, ಸಮುದಾಯವನ್ನು ಕಡೆಗಾಣಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
20 ಸಿಎನ್ ಹಳ್ಳಿ ೆಟೋ
ಚಿಕ್ಕನಾಯಕನಹಳ್ಳಿ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಸರ್ವಜ್ಞ ಜಯಂತಿ ಆಚರಿಸಲಾಯಿತು. ಶಾಸಕ ಸಿ.ಬಿ.ಸುರೇಶ್‌ಬಾಬು, ಕುಂಬಾರ ಸಮುದಾಯದ ಮುಖಂಡರಾದ ಶಿವಶಂಕರ್, ಮಧುಶ್ರೀ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net