ಡಾ.ಮನಮೋಹನ್ ಸಿಂಗ್ ವಿವಿಯಿಂದ ತಗಡೂರು ಸುಜಾತಗೆ ಪಿಎಚ್‌ಡಿ ಪದವಿ

sujata
sujata
Published on

ಪ್ರಮುಖ ಮುಖ್ಯಾಂಶಗಳು

  • 1918 ರ ಸ್ಪ್ಯಾನಿಷ್ ಜ್ವರ ಮತ್ತು 2019 ರ ಕೋವಿಡ್- 19
  • ಡಾ.ಮನಮೋಹನ್ ಸಿಂಗ್ ವಿವಿ ಪ್ರೊ.ಜ್ಯೋತಿ ವೆಂಕಟೇಶ್ ಅವರ ಮಾರ್ಗದರ್ಶನ
ಬೆಂಗಳೂರು:
ಬೆಂಗಳೂರು ಕೇಂದ್ರದ ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾಲಯದ ಜಾಗತಿಕ ಭಾಷೆಗಳ ಕೇಂದ್ರದ ಪ್ರೆಂಚ್ ಭಾಷೆಯ ಉಪನ್ಯಾಸಕಿಯಾದ ತಗಡೂರು ಹಾಲಪ್ಪಗೌಡ ಸುಜಾತ (ಟಿ.ಪಿ.ಸುಜಾತ ಸ್ವಾಮಿ) ಅವರಿಗೆ ಪಿಎಚ್‌ಡಿ ನೀಡಲಾಗಿದೆ.
ಎರಡು ಮಹಾ ಸಾಂಕ್ರಾಮಿಕ ರೋಗಗಳಾದ 1918 ರ ಸ್ಪ್ಯಾನಿಷ್ ಜ್ವರ ಮತ್ತು 2019 ರ ಕೋವಿಡ್- 19 ರ ಸಂದರ್ಭದಲ್ಲಿ ರಾಷ್ಟ್ರದ ಮುಖ್ಯಸ್ಥರ ಪಾತ್ರದ ಹೋಲಿಕೆ ಕುರಿತು ಡಾ.ಮನಮೋಹನ್ ಸಿಂಗ್ ವಿವಿ ಪ್ರೊ.ಜ್ಯೋತಿ ವೆಂಕಟೇಶ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದು, ಈ ಪ್ರಬಂಧಕ್ಕೆ ಪಿಎಚ್‌ಡಿ ದೊರೆತಿದೆ.
ತಗಡೂರು ಹಾಲಪ್ಪಗೌಡ ಮತ್ತು ರತ್ನಮ್ಮ ಅವರ ಸುಪುತ್ರಿಯಾಗಿರುವ ಟಿ.ಪಿ.ಸುಜಾತ ಅವರು ಹೈಕೋರ್ಟ್ ವಕೀಲರಾದ ಕುಮಾರಸ್ವಾಮಿ ಸ್ವಾಮಿ ಅವರ ಪತ್ನಿ.

-ಪ್ರೆಂಚ್ ಭಾಷೆಯಲ್ಲಿಯೇ ಅಧ್ಯಯನ, ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪಡೆದಿರುವ ಟಿ.ಪಿ.ಸುಜಾತ ಅವರನ್ನು ತಗಡೂರು, ಮಾರನಗೆರೆ ಗ್ರಾಮಸ್ಥರು ಸೇರಿದಂತೆ ಸಂಘ ಸಂಸ್ಥೆಗಳು ಅಭಿನಂದಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net