

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಧರ್ಮದಲಾಂಛನಗಳು ಮನುಷ್ಯನಿಗೆ ಪಾವಿತ್ರ್ಯತೆಮತ್ತು ಪರಿಪಕ್ವತೆಯನ್ನುತಂದೊದಗಿಸುತ್ತವೆ.ಅಂತೆಯೇ ವಿಭೂತಿರುದ್ರಾಕ್ಷ ಮುಂತಾದ ವೀರಶೈವಲಿಂಗಾಯತ ಧರ್ಮದ ಲಾಂಛನಗಳುಅಂತಃಕರಣದ ಪವಿತ್ರತೆಯ ಮತ್ತುಪರಿಪಕ್ವತೆಯ ಕುರುಹಗಳಾಗಿರುವುದರಿಂದಗುರುವಾದವನು ಇವುಗಳನ್ನು ಸದಾಧರಿಸಿಕೊಂಡಿರಬೇಕು ಎಂದು ಶ್ರೀಶೈಲಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರುಅಭಿಪ್ರಾಯಿಸಿದ್ದಾರೆ.
ವಿಜಯನಗರದಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿರುವ ಇಷ್ಟಲಿಂಗ ಮಹಾಪೂಜೆಹಾಗೂ ಶ್ರೀಸಿದ್ಧಾಂತ ಶಿಖಾಮಣಿಆಧ್ಯಾತ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ವಿಭೂತಿಯಲ್ಲಿಅಂತರಂಗ ಮತ್ತು ಬಹಿರಂಗ ಎಂದುಎರಡು ಪ್ರಕಾರ ಇವೆ.ಪರಶಿವನ ಚಿಜ್ಜ್ಯೋತಿಯಅನುಸಂಧಾನ ಮಾಡುವುದು ಅಂತರಂಗದವಿಭೂತಿಯಾಗಿದ್ದು,ಪರಿಶುದ್ಧಗೋಮಯದಿಂದ ಶಾಸ್ತ್ರ ಪದ್ಧತಿಗೆಅನುಗುಣವಾಗಿ ನಿರ್ಮಾಣವಾದವಿಭೂತಿಯು ಬಹಿರಂಗ ವಿಭೂತಿಯಾಗಿದೆ.ಗುರುವಾದವನುಈ ಎರಡು ಪ್ರಕಾರದ ವಿಭೂತಿಗಳನ್ನುತನ್ನ ದೈನಂದಿನ ಬದುಕಿನಲ್ಲಿಅಳವಡಿಸಿಕೊಳ್ಳಬೇಕು.ರುದ್ರಾಕ್ಷಿಯಲ್ಲಿಸೋಪಾಧಿಕ ಮತ್ತು ನಿರುಪಾದಿಕವೆಂಬಎರಡು ಪ್ರಕಾರ ಉಂಟು.ಶಿವಪೂಜೆ ಮಂತಾದಸಂದರ್ಭಗಳಲ್ಲಿ ಶಾಸ್ತ್ರವಿಹಿತಸಂಖ್ಯೆಗನುಗುಣವಾಗಿ ದೇಹದ ಮೇಲೆಸೋಪಾಧಿಕ ರುದ್ರಾಕ್ಷಗಳನ್ನುಧರಿಸಿಕೊಳ್ಳುವುದರ ಜೊತೆಗೆಎಲ್ಲರಲ್ಲೂ ಶಿವ ಭಾವ ಕಾಣುತ್ತಎರಡು ಪ್ರಕಾರದ ರುದ್ರಾಕ್ಷಿಗಳನ್ನುಧರಿಸಿಕೊಳ್ಳಬೇಕು.ಹೀಗೆ ಅಷ್ಟಾವರಣ,ಪಂಚಾಚಾರ,ಷಟಸ್ಥಲಗಳಲ್ಲಿಬರುವ ಶ್ರೇಷ್ಠ ತತ್ವಗಳೆ ವೀರಶೈವಲಿಂಗಾಯತ ಧರ್ಮದ ಮೂಲ ಸಿದ್ದಾಂತವಾಗಿರುವುದರಿಂದವೀರಶೈವ, ಲಿಂಗಾಯತಬೇರೆ ಎನ್ನುವುದು ಅರ್ಥಹೀನ ಎಂದುಜಗದ್ಗುರುಗಳು ವಿವರಿಸಿದರು.
ಕಾರ್ಯಕ್ರಮದಲ್ಲಿಕೆರೂರು ಮಠದ ಡಾ.ಶಿವಕುಮಾರಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತನೀಡಿದರು.ನಾಗಲಾಪುರ,ವಿಭೂತಿಪುರ,ಶಿವಗಂಗೆ ಶ್ರೀಗಳುಹಾಗೂ ಅಭಾವೀಮ ಮಹಿಳಾ ಘಟಕದರಾಷ್ಟ್ರೀಯ ಅಧ್ಯಕ್ಷ ವೀಣಾಕಾಶಪ್ಪನವರ್,ಶಾಸಕ ಎಸ್.ಟಿ.ಸೋಮಶೇಖರ್ಅಭಾವೀಮ ಯುವ ಘಟಕದ ಅಧ್ಯಕ್ಷ ಮನೋಹರಅಬ್ಬಿಗೆರೆ ಮತ್ತಿತರರುಉಪಸ್ಥಿತರಿದ್ದರು.