- ಚಿಕ್ಕೋಡಿ ಈಜುಕೊಳಕ್ಕೆ ಬೇಕಿದೆ ಸೌಕರ್ಯ
- ಮೂಲಸೌಕರ್ಯ ವಿಲ್ಲದೇ ಪ್ರಾರಂಭಿಸಿರುವ ಈಜುಕೊಳ
- ಸುರಕ್ಷಿತ ಬೇಕಿದೆ ಆದ್ಯತೆ
ಈಜುಗೊಳಕ್ಕೆ ಬೇಕಿದೆ ಅಗತ್ಯ ಸೌಕರ್ಯ
| ಸುರಕ್ಷತೆ ಕ್ರಮ ವಹಿಸಿಲು ಆಗ್ರಹ |
ಆನಂದ ಭಮ್ಮನ್ನವರ ಚಿಕ್ಕೋಡಿ:
ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪಟ್ಟಣದ ಹರಿನಗರದಲ್ಲಿ ೧.೧೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಈಜುಗೊಳಕ್ಕೆ ಮೂಲ ಸೌಕರ್ಯ ಒದಗಿಸಬೇಕಿದೆ.
ಕಳೆದ ಎರಡು ತಿಂಗಳ ಹಿಂದಷ್ಟೆ ಲೋಕಾರ್ಪಣೆಗೊಂಡಿರುವ ಪಾಲಿಕೆ ಈಜುಗೊಳವು ಕಾಮಗಾರಿ ಕಳೆದ ಹಲವು ತಿಂಗಳ ಬಳಿಕ ಈಚೆಗೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ನಿತ್ಯ 40-50 ಜನರು ಭೇಟಿ ನೀಡುತ್ತಿದ್ದಾರೆ, ಒಬ್ಬರಿಗೆ 45 ನಿಮಿಷಕ್ಕೆ 60 ರೂ. ಆದರೆ ಅಗತ್ಯ ಸೌಕರ್ಯಗಳಿಲ್ಲದೆ ಈಜುಗೊಳದ ಬಳಕೆಗೆ ಸಾರ್ವಜನಿಕರು ಹಿಂದೇಟು ಹಾಕಿದ್ದಾರೆ.
ಚಿಕ್ಕೋಡಿ ಪಟ್ಟಣದಲ್ಲಿರುವ ಏಕೈಕ ಈಜುಗೋಳದಲ್ಲಿ ಇರಬೇಕಾದ ಅಗತ್ಯ ಸುರಕ್ಷತಾ ಕ್ರಮಗಳನ್ನು ವಹಿಸುವುದು ಚಿಕ್ಕ ಮಕ್ಕಳಿಗೆ ಈಜು ಕಲಿಯಲು ಕಳುಹಿಸಲು ಪಾಲಕರು ಚಿಂತೆ ಮಾಡಿದ್ದಾರೆ. ಈಜು ತರಬೇತುದಾರರನ್ನು ನೇಮಿಸಲಾಗಿದೆ.ಆದರೆ ಈಜು ಕಲಿಯುವವರಿಗೆ ಬೇಕಾದ ಸುರಕ್ಷತೆ ಜಾಕೆಟ್, ಟ್ಯೂಬ್‌ಗಳು ಇಲ್ಲಿ ಇರುವುದಿಲ್ಲ. ಈಜು ಕಲಿಯುವವರೇ ತರಬೇಕಿದೆ. ಇದು ಈಜು ಕಲಿಯುವವರಿಗೆ ಬೇಸರ ತರಿಸಿದೆ.
ಈಜುಗೊಳವನ್ನು ನಿರ್ವಹಣೆ ಮಾಡಲು ಖಾಸಗಿ ಸಂಸ್ಥೆಗೆ ಮೂರು ವರ್ಷಕ್ಕೆ ಟೆಂಡರ್ ನೀಡಲಾಗಿದೆ. ಇವರು ಕಳೆದ ಎರಡು ತಿಂಗಳ ಈಜು ತರಬೇತಿ ನೀಡುವ ಕಾರ್ಯ ಮಾಡುತ್ತಿದ್ದರು. ಈಗ ಏಕಾಏಕಿ ಈಜು ತರಬೇತಿ ನೀಡುವುದನ್ನು ಬಂದ್ ಮಾಡಿದ್ದಾರೆ. ಇದು ಈಜು ತರಬೇತಿ ಪಡೆಯುತ್ತಿರುವವರಿಗೆ ಹಾಗೂ ಈಜು ಕಲಿಯಬೇಕು ಎಂದುಕೊಂಡವರಿಗೆ ನಿರಾಸೆ ಮೂಡಿಸಿದೆ. ಈಜು ತರಬೇತಿ ನಿಂತು ಹೋಗಿದ್ದು, ಕೇವಲ ಈಜು ಬಲ್ಲವರಿಗೆ ಮಾತ್ರ ಎಂಬ ಆಟವಾಗಿದೆ.
ಪಟ್ಟಣದಲ್ಲಿ ಲಕ್ಷಾಂತರ ರೂ. ನಿರ್ಮಿಸಿರುವ ಈ ವೆಚ್ಚಕ್ಕೆ ಅಗತ್ಯ ಸೌಕರ್ಯ ಒದಗಿಸಬೇಕಾಗಿದೆ. ನಿರಂತರ ತರಬೇತಿ ಶಿಬಿರ, ಈಜು ಕಲಿಯುವವರಿಗೆ ಬೇಕಾದ ಸುರಕ್ಷತಾ ಸಲಕರಣೆ ವ್ಯವಸ್ಥೆ, ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ಸಮಯ ನಿಗದಿ ಪಡಿಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ. ತರಬೇತಿ ಇಲ್ಲದೇ ಇದ್ದರೆ ಏನು ಪ್ರಯೋಜನ ಎಂಬ ಮಾತು ಕೇಳಿ ಬಂದಿದೆ.