ಸರ್ಕಾರಿ ಶಾಲೆ ಮಕ್ಕಳಿಗೆ ಸ್ವೆಟರ್ ವಿತರಣೆ

ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ  ವಿದ್ಯಾರ್ಥಿಗಳಿಗೆ ಸೋಮವಾರ ಉಚಿತವಾಗಿ ಸ್ವೆಟರ್‌ಗಳನ್ನು ವಿತರಿಸಲಾಯಿತು.
ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ಉಚಿತವಾಗಿ ಸ್ವೆಟರ್‌ಗಳನ್ನು ವಿತರಿಸಲಾಯಿತು.
Published on
ಕೊಳ್ಳೇಗಾಲ: ತಾಲೂಕಿನ ಮಧುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗೌರಿ ಬಿದನೂರು ಮೂಲದ ಉದ್ಯಮಿ ಹಾಗೂ ಉಪ್ಪಾರ ಜನಾಂಗದ ಮುಖಂಡ ನಾಗರಾಜು ಅವರು ನೀಡಿರುವ ಉಚಿತ ಸ್ವೆಟರ್‌ಗಳನ್ನು ವಿತರಿಸಲಾಯಿತು.

ಸ್ವೆಟರ್ ವಿತರಿಸಿದ ಕೊಳ್ಳೇಗಾಲ ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಎಸ್.ರಮೇಶ್ ಮಾತನಾಡಿ, ಹನೂರು ಕ್ಷೇತ್ರದ ಒಡೆಯರಪಾಳ್ಯ, ಗುಂಡಿಮಾಳ, ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಚಳಿಗಾಲದಲ್ಲಿ ಉಚಿತವಾಗಿ ನೀಡಿದರೆ ಒಳಿತಾಗುತ್ತದೆ ಎಂಬ ಅಭಿಪ್ರಾಯವನ್ನು ಮಧುವನಹಳ್ಳಿ ಗ್ರಾಮದ ಉಪ್ಪಾರ ಸಮುದಾಯದ ಮುಖಂಡರಾದ ಬಿ.ಕೃಷ್ಣಪ್ಪ, ಮಹದೇವಸ್ವಾಮಿ(ಭಟ್ಟ), ಪ್ರಸಾದ್, ಸಿದ್ದೇಶ್, ನಟೇಶ್ ಅವರನ್ನೊಳಗೊಂಡ ತಂಡ ಗೌರಿಬಿದನೂರಿನ ಸಮುದಾಯದ ಉದ್ಯಮಿ ನಾಗರಾಜು ಅವರಿಗೆ ತಿಳಿಸಿ ಮನವಿ ಮಾಡಿದ್ದೇವು. ಇದಕ್ಕೆ ಸ್ಪಂದಿಸಿದ ಉದ್ಯಮಿ ನಾಗರಾಜು ಅವರು, ಕಾಡಂಚಿನ ಶಾಲೆಗಳ ಎಲ್ಲ ಮಕ್ಕಳಿಗೆ ವಿತರಿಸಲು 4000 ಸಾವಿರ ಸ್ವೆಟರ್‌ಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ಉಪ್ಪಾರ್ ಮಾತನಾಡಿ, ನಾವು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅಷ್ಟೇನು ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಆದರೀಗ ಸರ್ಕರದಿಂದ ಬಿಸಿಯೂಟ, ಶೂ, ಸಮವಸ್ತ್ರ ಸೇರಿದಂತೆ ಹತ್ತಾರು ಸೌಲಭ್ಯಗಳು ಸಿಗುತ್ತಿದ್ದು, ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.

ಮಧುವನಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪ, ಮಧುವನಹಳ್ಳಿ ಮಾಜಿ ಪ್ರಧಾನ್ ಪ್ರಭಾಕರ್, ಮಾಜಿ ಅಧ್ಯಕ್ಷ ಶಿವಮೂರ್ತಿ, ಉಪಾಧ್ಯಕ್ಷೆ ಪುಟ್ಟಲಿಂಗಮ್ಮ, ಸದಸ್ಯರಾದ ರಾಚಪ್ಪ, ಮಲ್ಲೇಶ್, ಉಪ್ಪಾರ ಜನಾಂಗದ ಗಡಿ ಯಜಮಾನ ತಾಂಡಶೆಟ್ಟಿ, ಹಟ್ಟಿ ಯಜಮಾನ ಮಸಣಶೆಟ್ಟಿ, ದೊಡ್ಡ ಯಜಮಾನ ಮಾದೇಶ್, ಯಜಮಾನ ಚಿಕ್ಕನಂಜಶೆಟ್ಟಿ, ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಮಹಾಲಿಂಗ, ದೈಹಿಕ ಶಿಕ್ಷಣ ಶಿಕ್ಷಕಿ ಮಂಗಳಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net