ಜೆಡಿಎಸ್​ನಿಂದ ಸ್ವೆಟರ್​ ವಿತರಣೆ

sweater-distribution-by-jds
sweater-distribution-by-jds
Published on
kumaraswami ಶಿರಾ: ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತ ತಾಲೂಕು ಜೆಡಿಎಸ್​ನಿಂದ ಪೌರಕಾರ್ಮಿಕರಿಗೆ ಮಂಗಳವಾರ ಸ್ವೆಟರ್​ ವಿತರಿಸಲಾಯಿತು.
ತಾಲೂಕು ಜೆಡಿಎಸ್​ ಅಧ್ಯಕ್ಷ ಸತ್ಯಪ್ರಕಾಶ್​ ಮಾತನಾಡಿ, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾವಿರಾರು ಕೋಟಿ ರೈತರ ಸಾಲ ಮನ್ನ ಮಾಡಿ, ರೈತರ ಬೆನ್ನೆಲುಬಾಗಿದ್ದರು. ಅವರು ಸದ್ಯ ಕೇಂದ್ರ ಸಚಿವರಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಸದಸ್ಯ ಆರ್​.ರಾಮು ಮಾತನಾಡಿ, ಎಚ್​.ಡಿ.ಕುಮಾರಸ್ವಾಮಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಪೌರಕಾರ್ಮಿಕರಿಗೆ ಸ್ವೆಟರ್​ ನೀಡಲಾಗುತ್ತಿದೆ. ಸಾರಾಯಿ ನಿಷೇಧ ಮಾಡಿ ಜನಕಂಡ ಮೆಚ್ಚಿನ ಮುಖ್ಯಮಂತ್ರಿ ಆಗಿದ್ದಾರೆ. ಅವರ ಸೇವೆ ನಾಡಿಗೆ ಮತ್ತೊಮ್ಮೆ ಸಿಗಲಿ ಎಂದರು.
ನಗರಸಭೆ ಮಾಜಿ ಸದಸ್ಯ ಆರ್​.ರಾಘವೇಂದ್ರ, ಜೆಡಿಎಸ್​ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರೆಹಮತ್​ ಉಲ್ಲಾ ಖಾನ್​, ಪೌರಾಯುಕ್ತ ರುದ್ರೇಶ್​, ಜೆಡಿಎಸ್​ ಮಹಿಳಾ ಘಟಕದ ಅಧ್ಯಕ್ಷ, ರೇಣುಕಮ್ಮ, ಯುವ ಜನತಾದಳ ಅಧ್ಯಕ್ಷ ಪುನೀತ್​ ಗೌಡ, ನಗರ ಯುವ ಘಟಕದ ಶ್ರೀರಂಗ, ದಯಾನಂದ್​, ನಿಸರ್ಗ ಸುರೇಶ್​ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net