ಭುವಿಯಲ್ಲಿ ಸಿಕ್ಕ ಸೂರ್ಯನಾರಾಯಣ

 ಕಮಲಾಪುರ ತಾಲೂಕಿನ ಹೊಳಕುಂದಾ(ಬಿ) ಗ್ರಾಮದಲ್ಲಿ ದೊರೆತಿರುವ ಶ್ರೀ ಸೂರ್ಯನಾರಾಯಣ ದೇವರ ಪುರಾತನ ಶಿಲಾಮೂರ್ತಿ.
ಕಮಲಾಪುರ ತಾಲೂಕಿನ ಹೊಳಕುಂದಾ(ಬಿ) ಗ್ರಾಮದಲ್ಲಿ ದೊರೆತಿರುವ ಶ್ರೀ ಸೂರ್ಯನಾರಾಯಣ ದೇವರ ಪುರಾತನ ಶಿಲಾಮೂರ್ತಿ.
Published on

ಪ್ರಮುಖ ಮುಖ್ಯಾಂಶಗಳು

  • ಹೊಳಕುಂದಾ(ಬಿ)ದಲ್ಲಿ ಸಿಸಿ ರಸ್ತೆ ನಿರ್ಮಿಸುವ ವೇಳೆ ಕಂಡ ಶಿಲಾಮೂರ್ತಿ
  • ಹೆಚ್ಚಿನ ಸಂಶೋಧನಕ್ಕೆ ಒತ್ತಾಯ
ಕಲಬುರಗಿ: ಕಮಲಾಪುರ ತಾಲೂಕಿನ ಹೊಳಕುಂದಾ(ಬಿ) ಗ್ರಾಮದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನ ಆವರಣದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಶುಕ್ರವಾರ ಭೂಮಿ ಅಗೆಯುವ ವೇಳೆ ಅಪರೂಪದ ಶ್ರೀ ಸೂರ್ಯನಾರಾಯಣ ದೇವರ ಪುರಾತನ ಶಿಲಾಮೂರ್ತಿ ಪತ್ತೆಯಾಗಿದ್ದು, ಊರಲ್ಲಿ ಸಂತಸ ಜತೆ ಕುತೂಹಲ ಮೂಡಿಸಿದೆ.
ಮಹಾಗಾಂವ್​ನಿಂದ 7-8 ಕಿಮೀ ದೂರದ ಹೊಳಕುಂದಾ(ಬಿ)ದಲ್ಲಿ ರಾಷ್ಟ್ರಕೂಟರ ಕಾಲದ ದೇವಸ್ಥಾನವಿದೆ. ಆದರೆ ನಿರ್ವಹಣೆ ಕೊರತೆಯಿಂದ ಮುಳ್ಳುಕಂಟಿಗಳಲ್ಲಿ ಮುಚ್ಚಿ ಹೋಗಿತ್ತು. 11 ವರ್ಷ ಹಿಂದೆ ಗ್ರಾಮಸ್ಥರು, ವಿವಿಧ ತಂಡಗಳು ಹಾಗೂ ಯುವಕರ ಸಹಕಾರದಿಂದ ದೇವಸ್ಥಾನ ಸ್ವಚ್ಛಗೊಳಿಸಿ ಹಳೇ ವೈಭವ ತರಲಾಗಿದೆ.
ಶುಕ್ರವಾರ ದೇವಸ್ಥಾನ ಆವರಣದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಸುತ್ತಿದ್ದಾಗ ಭೂಮಿಯೊಳಗೆ ಕಲ್ಲಿನ ಶಿಲ್ಪ ಕಾಣಿಸಿದ್ದು, ಎಚ್ಚರಿಕೆಯಿಂದ ಹೊರತೆಗೆದಾಗ ಸಂಪೂರ್ಣ ಸೂರ್ಯನಾರಾಯಣ ಮೂರ್ತಿ ಪತ್ತೆಯಾಗಿದೆ. ಸುಮಾರು 2.1 ಅಡಿ ಎತ್ತರದ ಈ ಮೂರ್ತಿಯನ್ನು ಕಪ್ಪು ಶಿಲೆಯಲ್ಲಿ ಅತ್ಯಂತ ನಾಜೂಕಾಗಿ ಕೆತ್ತಲಾಗಿದೆ. ಮೂರ್ತಿಯು ಸಮಭಂಗದಲ್ಲಿ ನಿಂತಿದ್ದು, ತಲೆ ಮೇಲೆ ಅಲಂಕೃತ ಕಿರೀಟ, ಕಿವಿಗಳಲ್ಲಿ ಮಕರ ಕುಂಡಲ, ಕೊರಳಲ್ಲಿ ಬಹುಪದರ ಮಾಲೆಗಳು, ಯೋಪವೀತ, ಉದರಬಂಧ ಹಾಗೂ ಸೊಂಟದ ಅಲಂಕಾರಗಳು ಗಮನ ಸೆಳೆಯುತ್ತವೆ.
ಸೂರ್ಯನಾರಾಯಣನ ಪ್ರಮುಖ ಗುರುತಾದಂತೆ ಎರಡೂ ಕೈಗಳಲ್ಲಿ ಕಮಲ ಹೂವು ಹಿಡಿದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಮೂರ್ತಿ ಹಿಂಭಾಗದಲ್ಲಿ ಪ್ರಭಾವಳಿ (ಪ್ರಕಾಶ ವಲಯ) ಕೆತ್ತಲಾಗಿದ್ದು, ಅದು ಸೂರ್ಯದೇವರ ತೇಜಸ್ಸಿನ ಸಂಕೇತವಾಗಿದೆ. ಕೆಳಭಾಗದಲ್ಲಿ ಸಂಧ್ಯಾದೇವಿ ಮತ್ತು ಛಾಯಾದೇವಿಯರ ಸುಂದರ ಶಿಲ್ಪಗಳಿದ್ದು, ಅಡಿಪಾಯದಲ್ಲಿ ಸಪ್ತ ಅಶ್ವಗಳ ಮೇಲೆ ಸೂರ್ಯದೇವರು ನಿಂತಿರುವಂತೆ ಕೆತ್ತನೆ ಮಾಡಿರುವುದು ಶಿಲ್ಪದ ಅಪರೂಪದ ವೈಶಿಷ್ಟ$್ಯ. ಸೂರ್ಯನ ರಥವನ್ನು ಏಳು ಕುದುರೆಗಳು ಎಳೆಯುತ್ತವೆ ಎಂಬ ಪುರಾಣದ ಉಲ್ಲೆಖವನ್ನು ಈ ಶಿಲಾಮೂರ್ತಿ ಪ್ರತಿಬಿಂಬಿಸುತ್ತದೆ.

ಊರಿನ ಐತಿಹಾಸಿಕ ಹಿನ್ನೆಲೆ

ಹೊಳಕುಂದಾ(ಬಿ) ಗ್ರಾಮ ಐತಿಹಾಸಿಕ ಪರಂಪರೆ ಹೊಂದಿದ ಪ್ರದೇಶ. ಸುಮಾರು 12ನೇ ಶತಮಾನದ ತ್ರಿಕೂಟ ಶೈಲಿಯ ಶಿವ ಪಂಚಾಯತನ ದೇವಾಲಯ ಇಂದಿಗೂ ಅಸ್ತಿತ್ವದಲ್ಲಿದ್ದು, ದೇಗುಲ ಎದುರು ಪುರಾತನ ಪುಷ್ಕರಣಿ ಇದೆ. ಸೂರ್ಯನಾರಾಯಣ ಮೂರ್ತಿ ಸಿಕ್ಕಿರುವುದು ಊರಿನ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪ್ರದೇಶದಲ್ಲಿ ಹಿಂದೆ ಧಾರ್ಮಿಕ ಕೇಂದ್ರ ಇದ್ದಿರುವ ಸಾಧ್ಯತೆ ಇದೆ. ಭೂಮಿಯೊಳಗೆ ಇನ್ನಷ್ಟು ಶಿಲ್ಪ, ಶಾಸನ ಅಥವಾ ದೇವಾಲಯದ ಅವಶೇಷಗಳು ಅಡಗಿರುವ ಸಾಧ್ಯತೆ ಇದೆ ಎಂದು ಇತಿಹಾಸಕಾರರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಸಮಗ್ರ ಅಧ್ಯಯನಕ್ಕೆ ಆಗ್ರಹ

ಉತ್ತರ ಕರ್ನಾಟಕದಲ್ಲಿ ಸೂರ್ಯನಾರಾಯಣ ದೇವರಿಗೆ ಸಂಬಂಧಿಸಿದ ಶಿಲ್ಪಗಳು ವಿರಳ. ಅಪರೂಪದ ಶಿಲ್ಪವೊಂದು ಹೊಳಕುಂದಾ (ಬಿ)ದಲ್ಲಿ ಪತ್ತೆಯಾಗಿರುವುದು ಪುರಾತತ್ವ ಮತ್ತು ಇತಿಹಾಸ ದೃಷ್ಟಿಯಿಂದ ಮಹತ್ವದ ಬೆಳವಣಿಗೆ. ಮೂರ್ತಿಯ ನಿಖರ ಕಾಲಟ್ಟ, ಶಿಲ್ಪಶೈಲಿ ಹಾಗೂ ಐತಿಹಾಸಿಕ ಮಹತ್ವ ದೃಢೀಕರಿಸಲು ಕರ್ನಾಟಕ ರಾಜ್ಯ ಪುರಾತತ್ವ ಇಲಾಖೆ ಮತ್ತು ಭಾರತೀಯ ಪುರಾತತ್ವ ಸರ್ವೇಣಾ ಇಲಾಖೆ ತರು ಸ್ಥಳಕ್ಕೆ ಭೇಟಿ ನೀಡಿ ವೈಾನಿಕ ಅಧ್ಯಯನ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
"

ಹೊಳಕುಂದಾ(ಬಿ)ದಲ್ಲಿದ್ದ ಪುರಾತನ ದೇವಸ್ಥಾನ ಮುಳ್ಳು&ಕಂಟಿ ಮಧ್ಯೆ ಮುಚ್ಚಿ ಹೋಗಿತ್ತು. ಎಲ್ಲರ ಸಹಕಾರದಿಂದ ಸ್ವಚ್ಛತೆ ಕಾರ್ಯ ಕೈಗೊಂಡು ದೇವಸ್ಥಾನಕ್ಕೆ ಹೊಸ ರೂಪ ನೀಡಲಾಗಿದೆ. ಪ್ರತಿ ಬಾರಿ ಯಾವುದಾರೂ ಕಾಮಗಾರಿ ಮಾಡುವಾಗ ಐತಿಹಾಸಿಕ ಕುರುಹುಗಳು ಸಿಗುತ್ತಿವೆ. ಈ ಹಿಂದೆ ಸುಂದರ ಕೆತ್ತನೆಯ ಕಂಬಗಳು, ಹಣೆಪಟ್ಟಿ ದೊರೆತಿವೆ. ಇದೀಗ ಸೂರ್ಯನಾರಾಯಣನ ಮೂರ್ತಿ ಸಿಕ್ಕಿದೆ. ಎಲ್ಲವನ್ನು ಸಂರಕ್ಷಿಸಿ ಇಡಲಾಗಿದೆ. ಇತಿಹಾಸ ತಜ್ಞರು ಭೇಟಿ ನೀಡಿ ಸಂಶೋಧನೆ ಮಾಡಿ ಜಗತ್ತಿಗೆ ಮಂದಿರದ ಪ್ರಾಮುಖ್ಯ ತಿಳಿಸಬೇಕು.

— > ಬಲಭೀಮ ಕುಲಕರ್ಣಿ ಅಧ್ಯಕ್ಷ, ವಿಠ್ಠಲ&ರುಕ್ಮಿಣಿ ದೇವಸ್ಥಾನ ಸಮಿತಿ ಹೊಳಕುಂದಾ(ಬಿ)

"

ಮೂರ್ತಿಯ ಶಿಲ್ಪಶೈಲಿ, ಅಲಂಕಾರ ಗಮನಿಸಿದರೆ ಇದು ರಾಷ್ಟ್ರಕೂಟರ ಕಾಲಟ್ಟಕ್ಕೆ ಸೇರಿದ ಸೂರ್ಯನಾರಾಯಣನ ಅಪರೂಪದ ಶಿಲ್ಪವಾಗಿರುವ ಸಾಧ್ಯತೆ ಇದೆ. ಪುರಾತತ್ವ ಇಲಾಖೆಯ ವೈಾನಿಕ ಪರಿಶೀಲನೆ ಬಳಿಕ ನಿಖರ ಕಾಲಟ್ಟ ದೃಢಪಡಿಸಬಹುದು.

— > ಡಿ.ಎನ್​. ಅಕ್ಕಿ ಹಿರಿಯ ಸಂಶೋಧಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net