ಗೆದ್ದು ಬಂದ ಸರ್ವೈವರ್ ಶಿವಣ್ಣ: ಕ್ಯಾನ್ಸರ್ ವಿರುದ್ಧದ ಹೋರಾಟದ ಕಥೆ ಈಗ ತೆರೆ ಮೇಲೆ | Shivarajkumar

ಗೆದ್ದು ಬಂದ ಸರ್ವೈವರ್ ಶಿವಣ್ಣ: ಕ್ಯಾನ್ಸರ್ ವಿರುದ್ಧದ ಹೋರಾಟದ ಕಥೆ ಈಗ ತೆರೆ ಮೇಲೆ
ಗೆದ್ದು ಬಂದ ಸರ್ವೈವರ್ ಶಿವಣ್ಣ: ಕ್ಯಾನ್ಸರ್ ವಿರುದ್ಧದ ಹೋರಾಟದ ಕಥೆ ಈಗ ತೆರೆ ಮೇಲೆ
Published on
ಬೆಂಗಳೂರು: ಸ್ಯಾಂಡಲ್​ವುಡ್​​ ನಟ ಶಿವರಾಜ್ ಕುಮಾರ್ (Shivarajkumar) ತನ್ನ ಬದುಕಿನಲ್ಲಿ ಎದುರಿಸಿದ ಸವಾಲುಗಳ ಕುರಿತು ಸಾಕ್ಷ್ಯಚಿತ್ರಕ್ಕೆ ತಯಾರಿ ನಡೆದಿದೆ. ಈ ಕುರಿತಾಗಿ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಶಿವರಾಜ್​ಕುಮಾರ್​, ಹೋಗುವಾಗ ನಿಮ್ಮ ಹಾರೈಕೆಗಳನ್ನು ಹೊತ್ತು, ಅಲ್ಲಿದಾಗ ನಿಮ್ಮ ಪ್ರಾರ್ಥನೆಗಳನ್ನು ನೆನೆದು, ಮರಳಿ ಬಂದಾಗ ನಿಮ್ಮ ನಗುವಿನಲ್ಲಿ ಮೆರೆದು, ನಿಮ್ಮೆಲ್ಲರೊಂದಿಗೆ ನಾನು ಕೂಡ ಗೆದ್ದು ಬಂದು ಹೇಳಲು ಮುಂದಾಗಿರುವ ಕಥೆ #Survivor ಎಂದು ಸೋಶಿಯಲ್​​ ಮೀಡಿಯಾದಲ್ಲಿ ಬೆದುಕೊಂಡು ಒಂದು ವಿಡಿಯೋ ಶೇರ್​ ಮಾಡಿದ್ದಾರೆ. ಈ ಮೂಲಕವಾಗಿ ಸಾಕ್ಷ್ಯಚಿತ್ರಕ್ಕೆ ತಯಾರಿ ನಡೆದಿದೆ ಎನ್ನುವ ಹಿಂಟ್​ ನೀಡಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಅಮೆರಿಕದಲ್ಲಿ ಮಾರಕ ಕ್ಯಾನ್ಸರ್ ವಿರುದ್ಧ ಯಶಸ್ವಿ ಶಸ್ತ್ರಚಿಕಿತ್ಸೆ ಮುಗಿಸಿ ಮರಳಿ ಬಂದ ಶಿವಣ್ಣ, ಸಿನಿಮಾ ಹಾಗೂ ಖಾಸಗಿವಾಹಿನಿಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ತಮ್ಮ ಸರ್ವೈವರ್' ಸಾಕ್ಷ್ಯಚಿತ್ರದ ಹೃದಯಸ್ಪರ್ಶಿ ಟೀಸರ್ ಬಿಡುಗಡೆ ಮಾಡಿದ್ದಾರೆ.
ಈ ಸಾಕ್ಷ್ಯಚಿತ್ರವು ಕೇವಲ ಅವರ ಚಿಕಿತ್ಸೆಯ ಬಗ್ಗೆ ಮಾತ್ರವಲ್ಲದೆ, ಆ ಸಮಯದಲ್ಲಿ ಅವರು ಅನುಭವಿಸಿದ ಮಾನಸಿಕ ತಳಮಳ, ಅವರ ಬೆನ್ನೆಲುಬಾಗಿ ನಿಂತ ಪತ್ನಿ ಗೀತಾ ಶಿವರಾಜ್‌ಕುಮಾರ್ ಮತ್ತು ಮಗಳು ನಿವೇದಿತಾ ಅವರ ಪಾತ್ರವನ್ನು ಅನಾವರಣಗೊಳಿಸುತ್ತದೆ.
ನಿಮ್ಮ ಪ್ರೀತಿ ಹಾರೈಕೆಗೆ ನಾನು ಸದಾ ಋಣಿ. ನಾನು ಗೆದ್ದು ಬಂದ ಕಥೆ ಇದು ಎಂದು ಶಿವಣ್ಣ ತಮ್ಮ ಅಭಿಮಾನಿಗಳಿಗೆ (ಅಭಿಮಾನಿ ದೇವ್ರು) ಧನ್ಯವಾದ ಅರ್ಪಿಸಿದ್ದಾರೆ.
ಶಿವರಾಜ್ ಕುಮಾರ್ ಬದುಕಿನ ಹೋರಾಟದ ಕುರಿತು ಡಾಕ್ಯೂಮೆಂಟರಿ ರೆಡಿಯಾಗುತ್ತಿದ್ದು ಸರ್ವೈವರ್ ಹೆಸರಿನಲ್ಲಿ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಗೀತಾ ಶಿವರಾಜ್ ಕುಮಾರ್ ಮುಂದಾಗಿದ್ದಾರೆ.
2024ರ ಕೊನೆಯಲ್ಲಿ ಮೂತ್ರಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶಿವಣ್ಣ, ಆ ನೋವಿನ ನಡುವೆಯೂ 45 ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ಸೀನ್ ಚಿತ್ರೀಕರಿಸಿದ್ದರು ಎಂಬುದು ಅವರ ವೃತ್ತಿಪರತೆಗೆ ಸಾಕ್ಷಿಯಾಗಿದೆ. ಅಮೆರಿಕದ ಮಿಯಾಮಿಯಲ್ಲಿ ನಡೆದ 5 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ಅವರು ಸಂಪೂರ್ಣ ಗುಣಮುಖರಾಗಿ ಮರಳಿದ್ದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net