ನೆಲಮಂಗಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಸಿರಿ ಸಂಭ್ರಮದಲ್ಲಿ ಶಾಸಕ ಎನ್.ಶ್ರೀನಿವಾಸ್, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಮೋಹನ್ಕುಮಾರ್, ಚಿತ್ರನಟ ಡಿಂಗ್ರಿನರೇಶ್, ಚಂದನವಾಹಿನಿ ನಿರೂಪಕ ದೊಡ್ಡಿಶಿವರಾಮ್, ನಗರಸಭೆ ಅಧ್ಯಕ್ಷ ಎನ್.ಗಣೇಶ್, ಉಪನ್ಯಾಸಕಿ ಧನಲಕ್ಷ್ಮೀ ಇದ್ದರು.
ನೆಲಮಂಗಲ : ಗ್ರಾಮೀಣ ಭಾಗದ ಜಾನಪದ ಕಲೆ ಬದುಕಿಗೆ ಪೂರಕ. ಅದನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿಂಚನ ಕಲಾ ಕೇಂದ್ರ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಜಾನಪದ ಸಿರಿ ಸಂಭ್ರಮದಲ್ಲಿ ಮಾತನಾಡಿದ ಅವರು, ಹಳ್ಳಿಯ ಸೊಗಡು ಹಾಗೂ ಬದುಕು ವಾಸ್ತವವಾಗಿ ಸರಳ ಜೀವನವಾಗಿದೆ. ಗ್ರಾಮೀಣ ಭಾಗದ ಅನಕ್ಷರಸ್ಥರು ನಾಟಿ, ಕೃಷಿ ಮಾಡುವಾಗ ಅನುಭವಕ್ಕೆ ತಕ್ಕಂತೆ ಪದ ಕಟ್ಟಿಕೊಂಡಿದ್ದ ಜಾನಪದ ಇಂದು ವಿಶ್ವಾದ್ಯಂತ ಪ್ರಚಲಿತವಾಗಿದೆ. ಪ್ರಸ್ತುತ ಸರ್ಕಾರ ಆಧುನಿಕವಾಗಿ ಜಾನಪದಕ್ಕೆ ಒತ್ತು ನೀಡುತ್ತಿದೆ.
ಜಾನಪದದಲ್ಲಿ ಸಂತಸ, ಆನಂದ ಹಾಗೂ ಉಲ್ಲಾಸದ ಜತೆಗೆ ಮೌಲ್ಯಗಳಿದ್ದು, ಜಾನಪದ ಬಿಟ್ಟು ಜೀವನವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಮಕ್ಕಳಲ್ಲಿರುವ ಜಾನಪದ ಕಲೆಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆ ನಿರ್ಮಿಸಬೇಕು. ಜಾನಪದ ಕಲೆಗಳ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಹಾಗೂ ತರಬೇತಿ ಪಡೆದುಕೊಂಡು ಪ್ರದರ್ಶನ ನೀಡಬೇಕು ಎಂದರು.
ಸಾಂಸತಿಕ ಕಾರ್ಯಕ್ರಮ : ಜಾನಪದ ಸಿರಿ ಸಂಭ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಜಾನಪದ ನೃತ್ಯ, ಜಾನಪದ ಗೀತಗಾಯನ ನೆರವೇರಿಸಿಕೊಟ್ಟರು. ನಗರಸಭೆ ಉಪಾಧ್ಯಕ್ಷ ಆನಂದ್, ಸದಸ್ಯ ಸಿ.ಪ್ರದಿಪ್, ರಂಗಶಿಕ್ಷಣ ಕೇಂದ್ರ ವ್ಯವಸ್ಥಾಪಕ ನಿರ್ದೇಶಕಿ ಮಂಜುಳಾ ಸಿದ್ದರಾಜು, ಕಸಾಪ ಅಧ್ಯಕ್ಷ ಪ್ರಕಾಶ್ಮೂರ್ತಿ, ನಗರಾಧ್ಯಕ್ಷ ಮಲ್ಲೇಶ್, ಸಿಂಚನಾ ಕಲಾಕೇಂದ್ರ ಟ್ರಸ್ಟ್ ಅಧ್ಯಕ್ಷ ಸಿದ್ದಯ್ಯ,ಹನುಮಂತರಾಜು, ಕಲಾವಿದರಾದ ಪವನ್ಕುಮಾರ್, ಚೇತನ್ಕುಮಾರ್, ನವೀನ್, ಸರಸ್ವತಿ ಇದ್ದರು.
ಕಲೆ, ಕಲಾವಿದರ ಉಳಿವಿಗೆ ಪ್ರೋತ್ಸಾಹ ಅಗತ್ಯ. ಪಾರಂಪರಿಕ ಸಂಸತಿ ನಾಶವಾಗಲು ಬಿಡಬಾರದು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಜಾನಪದ ಕಲೆ ಪರಿಚಯಿಸಬೇಕಿದೆ. ಸಮಾಜಕ್ಕೆ ಉತ್ತಮ ಸಂದೇಶ ಸಾರಲು ಸಹಕಾರಿಯಾಗಿದೆ.
— > ಡಾ.ಹುಲಿಕುಂಟೆಮೂರ್ತಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ