ಯಾದಗಿರಿ ನಗರದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಟಾಕ್ಸ್ ಪೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಮಾತನಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗುರ, ವಿವಿಧ ಇಲಾಖೆಗಳ ಅಽಕಾರಿಗಳಾದ ತಹಸಿಲ್ದಾರ ಸುರೇಶ ಅಂಕಲಗಿ, ಮಂಗಳಾ, ಬಸವರಾಜ ಶರಬೈ, ಮಹಾದೇವ, ಶಶಿಧರ ಹಿರೇಮಠ ಸೇರಿದಂತೆಯೇ ಇತರರಿದ್ದರು.
ಈಗಾಗಲೇ ಮಳೆಗಾಲ ಆರಂಭವಾಗಿದ್ದು, ನಗರ, ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಸಂಬAಽಸಿದ ಅಽಕಾರಿಗಳಿಗೆ ಸೂಚನೆ ನಿಡಿದರು.
ಇಲ್ಲಿನ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಟಾಸ್ಕ್ -ÉÇÃರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ವಡಗೇರಾ, ಶಹಾಪುರ ಮತ್ತು ಯಾದಗಿರಿ ತಾಲೂಕುಗಳ ನೂರಾರು ಹಳ್ಳಿ ಮತ್ತು ತಾಂಡಾಗಳು ತಮ್ಮ ಮತಕ್ಷೇತ್ರಗಳ ವ್ಯಾಪ್ತಿಗೆ ಬರುತ್ತಿದ್ದು, ಕೊಳವೆ ಬಾವಿಗಳ ಸ್ಥಿತಿಗತಿ ಮತ್ತು ದುರಸ್ತಿ, ಆರ್‌ಒ ಪ್ಲಾಂಟ್‌ಗಳ ರಿಪೇರಿಗಳಿದ್ದರೇ ಹೊಸ ಕೊಳವೆಬಾವಿ ಬೇಕಾಗಿದ್ದರೆ ಮತ್ತು ಖಾಸಗಿ ಕೊಳವೆಬಾವಿ ಮೂಲಕ ನೀರು ಪಡೆಯುವುದು ಸೇರಿ ಏನೆಲ್ಲ ಅಗತ್ಯವಿದೆಯೋ ಅದೆಲ್ಲವೂ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಕುಡಿಯುವ ನೀರಿಗಾಗಿ ಒಂದು ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕೈಗೊಳ್ಳಬೇಕಾದ ಕೆಲಸಗಳ ಬಗ್ಗೆ ಅಂದಾಜು ವೆಚ್ಚ ಸಿದ್ದಪಡಿಸಿ, ಕೂಡಲೇ ಆ ಕೆಲಸಗಳಿಗೆ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ಪಿಡಿಒಗಳಿದ್ದು, ಗ್ರಾಮದ ಸ್ವಚ್ಛತೆ ಕೆಲಸ ಮಾಡಿಸಬೇಕು. ಮಳೆ ಆರಂಭವಾಗುತ್ತಲೇ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗುತ್ತದೆ. ಇದರಿಂದ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೀಗಾಗಿ ಚರಂಡಿ ಶುಚಿಗೊಳಿಸಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ತಾಪಂ ಕಾರ್ಯನಿರ್ವಾಹಕ ಅಽಕಾರಿಗಳು ಸಂಬAಧಪಟ್ಟ ಪಿಡಿಒಗಳಿಗೆ ಕೂಡಲೇ ಸೂಚನೆ ನೀಡಬೇಕು ಎಂದು ತಿಳಿಸಿದರು.
ನಗರದ ೩೧ವಾರ್ಡ್ಗಳಲ್ಲೂ ಶುದ್ಧಕುಡಿಯುವ ನೀರು ಸರಬರಾಜಿಗೆ ಕ್ರಮ ಕೈಗೊಳ್ಳುವಂತೆ ನಗರಸಭೆ ಪೌರಾಯುಕ್ತ ಮತ್ತು ನೀರು ಸರಬರಾಜು ಮಂಡಳಿ ಅಽಕಾರಿಗಳಿಗೆ ಸೂಚಿಸಿದರು. ನಗರದ ಅನೇಕ ಕಡೆ ಇರುವ ಮುಖ್ಯ ರಸ್ತೆಗಳಲ್ಲಿ ತಗ್ಗು ಬಿದ್ದಿದ್ದು, ಮಳೆ ನೀರು ನಿಂತರೆ ಜನರ ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತದೆ. ಅದಕ್ಕಾಗಿ ಕೂಡಲೇ ತಗ್ಗು ಮುಚ್ಚುವ ಕೆಲಸ ಮಾಡಿ, ಚರಂಡಿಗಳು ನಿತ್ಯವೂ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ, ಯಾದಗಿರಿ ತಹಸೀಲ್ದಾರ್ ಸುರೇಶ ಅಂಕಲಗಿ, ವಡಗೇರಾ ತಹಸೀಲ್ದಾರ್ ಮಂಗಳಾ, ಶಹಾಪುರ ತಾಪಂ ಅಽಕಾರಿ ಬಸವರಾಜ ಶರಬೈ, ಯಾದಗಿರಿ ತಾಪಂ ಇಒ ಮಹಾದೇವ, ವಡಗೇರಾ ತಾಪಂ ಅಽಕಾರಿ ಶಶಿಧರ ಹಿರೇಮಠ, ಜೆಸ್ಕಾಂ ಎಇಇ ಮಾರ್ಕಂಡೇಶ್ವರ, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್ ಇತರರಿದ್ದರು.
ವಿದ್ಯುತ್ ಸಮಸ್ಯೆ ಅಗತ್ಯ ಕ್ರಮ ಕೈಗೊಳ್ಳಿ
ಮಳೆ ಬರುತ್ತಲೇ ಕರೆಂಟ್ ಹೋಗುತ್ತೆ. ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಜಿಲ್ಲೆಯ ಸಾಕಷ್ಟು ಹಳ್ಳಿಗಳಲ್ಲಿ ಈ ಸಮಸ್ಯೆ ಇದೆ ಎಂಬ ದೂರು ಬಂದಿವೆ. ಕಾರಣ ಜೆಸ್ಕಾಂ ಅಽಕಾರಿ ಮತ್ತು ಸಿಬ್ಬಂದಿ ಎಲ್ಲ ಕಡೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಶಾಸಕರು ತಾಕೀತು ಮಾಡಿದರು.