ಮದುವೆಯಾಗದಿದ್ದಕ್ಕೆ ಆತ್ಮಹತ್ಯೆ

Suicide for not getting married
Suicide for not getting married
Published on
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಪ್ರದಿಪ್​ (39) ಮದುವೆಯಾಗದ ಜಿಗುಪ್ಸೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೈಂಟರ್​ ಕೆಲಸ ಮಾಡುತ್ತಿದ್ದ ಈತಮದ್ಯವಸನಿಯಾಗಿದ್ದ. ಹಲವು ತಿಂಗಳಿಂದಲೂ ಮಾನಸಿಕ ಖಿನ್ನತೆಗೊಳಗಾಗಿದ್ದು ಕೆಲಸದ ಜಾಗದ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಬೀಗ ಹೊಡೆದು ಒಳ ಪ್ರವೇಶಿಸಿದಾಗ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.
ನಂದಿ ಗಿರಿಧಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net