ಮುಳಬಾಗಿಲು: ಚೀಕೂರು ಗ್ರಾಮದ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಮೃತದೇಹ ಪತ್ತೆಯಾಗಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತಿ ನೀಡಿದ ದೂರಿನ ಮೇರೆಗೆ ನಂಗಲಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.
ಕಳೆದ 35 ವರ್ಷದ ಹಿಂದೆ ಮಲ್ಲೇಕುಪ್ಪದ ಸೋಮಶೇಖರರೆಡ್ಡಿ ಎಂಬುವವರೊಂದಿಗೆ ವಿವಾಹವಾಗಿತ್ತು.
ತವರು ಮನೆಯಲ್ಲಿ ಅಣ್ಣ ಸುಬ್ರಮಣಿರೆಡ್ಡಿ ಹಾಗೂ ತಮ್ಮ ಬಾಲಚಂದ್ರ ರೆಡ್ಡಿ ಅವರು ಸುಬ್ಬಲ್ಮಮ್ಮ ಹೆಸರಲ್ಲಿ ಚೆಕ್ಗಳನ್ನು ಭದ್ರತೆಯಾಗಿ ಪಡೆದು ಸಾಲ ಮಾಡಿದ್ದರು. ಆ ಹಣ ಹಿಂದಿರುಗಿಸುವಂತೆ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ನೀಡುವಂತೆ ಹಲವು ಬಾರಿ ಸಹೋರದರರಲ್ಲಿ ಕೇಳುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ಹಣ ಪಡೆದುಕೊಳ್ಳಲು ಜು.28ರಂದು ಸುಬ್ಬಲ್ಮಮ್ಮ ಅವರು ಚೀಕೂರಿನಲ್ಲಿರುವ ತವರು ಮನೆಗೆ ತೆರಳಿದ್ದರು. ಬಳಿಕ ಶನಿವಾರ ಬೆಳಗ್ಗೆ ಗ್ರಾಮದ ಸಮೀಪದ ಜಮೀನಿನಲ್ಲಿರುವ ಮಾವಿನ ಮರಕ್ಕೆ ಬಟ್ಟೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ತವರು ಮನೆಯಲ್ಲಿ ಸಹೋದರರಿಂದ ಕಿರುಕುಳವಾಗುತ್ತಿತ್ತು ಹಾಗೂ ಆ ಕಾರಣದಿಂದಲೇ ಈ ಟನೆ ಸಂಭವಿಸಿರಬಹುದು ಎಂಬ ಅನುಮಾನವನ್ನು ಪತಿ ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ.