

ಪ್ರಮುಖ ಮುಖ್ಯಾಂಶಗಳು
ಕೊಳ್ಳೇಗಾಲ:
ತಾಲೂಕಿನ ಕುಂತೂರು ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಯೂನಿಟ್-3 ರಲ್ಲಿ ಕಟಾವು ಮಾಡಿದ ಕಬ್ಬನ್ನು ಸಕಾಲಕ್ಕೆ ಅರೆಯದ ಪರಿಣಾಮ ಕಬ್ಬಿನ ತೂಕ ಹಾಗೂ ಇಳುವರಿ ಕಡಿಮೆಯಾಗಿ ನಷ್ಟ ಉಂಟಾಗುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಕಬ್ಬು ಕಟಾವು ಬಳಿಕ ಹಸಿ ಸೋಗಿನಲ್ಲಿ ಕಬ್ಬನ್ನು ಕಟ್ಟಿ ಬ್ಯಾಡಿಂಗ್ ಮಾಡುವುದರಿಂದ ಕಾರ್ಖಾನೆ ವತಿಯಿಂದ ತೂಕದಲ್ಲಿ ತೊಂಡೆ ಮತ್ತು ಸೋಗು (ಶೇ.7ರಷ್ಟು ವೇಸ್ಟೇಜ್) ಕಳೆಯುತ್ತಾರೆ. ಇದರಿಂದ ಕನಿಷ್ಠ 1 ಟನ್ ಕಬ್ಬಿಗೆ 10 ಕೆಜಿ ಕಬ್ಬು ವ್ಯರ್ಥವಾಗುತ್ತದೆ. ಅದಲ್ಲದೆ, ಕಬ್ಬು ಕಟಾವು ಮಾಡಿಕೊಂಡ ಬಳಿಕ ಸಕಾಲಕ್ಕೆ ಅರೆಯದೆ ಆರೇಳು ದಿನವಾದರೂ ಲಾರಿಯಲ್ಲಿಯೇ ಫ್ಯಾಕ್ಟರಿ ಮುಂದೆ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಕಬ್ಬು ಒಣಗಿ ಟನ್‌ಗಟ್ಟಲೇ ಕಬ್ಬಿನ ತೂಕ ಕಡಿಮೆಯಾಗುತ್ತದೆ. ಈ ನಷ್ಟವನ್ನು ಕಟ್ಟಿ ಕೊಡಿ ಎಂದು ಕಾರ್ಖಾನೆ ಅಧಿಕಾರಿಗಳನ್ನು ರೈತರು ಪ್ರಶ್ನೆ ಮಾಡುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸಬೇಕು ಎಂಬುದು ರೈತರ ಆಗ್ರಹ.