ಕೆಎಲ್‌ಇ ವೈದ್ಯರಿಂದ ಯಶಸ್ವಿ ಶಸಚಿಕಿತ್ಸೆ

ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮೆಡಿಸಿನ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ
ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮೆಡಿಸಿನ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ
Published on
ಬೆಳಗಾವಿ: ಯಳ್ಳೂರ ರಸ್ತೆಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಶಸಚಿಕಿತ್ಸಕರ ತಂಡ 25 ವರ್ಷಗಳಿಂದ ಇನ್ಸಿಷನಲ್ ಹೆರ್ನಿಯಾದಿಂದ ಬಳಲುತ್ತಿದ್ದ 51 ವರ್ಷದ ಮಹಿಳೆಗೆ ಶಸಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರೋಗಿ ಅಧಿಕ ರಕ್ತದೊತ್ತಡ, ಮಧುಮೇಹ, ಹೈಪೋಥೈರಾಯ್ಡಿಸಮ್, ಸ್ಥೂಲಕಾಯ ಹಾಗೂ ರಕ್ತಹೀನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಹಿಂದೆ ಅವರಿಗೆ ಮೂರು ಬಾರಿ ಸಿಸೇರಿಯನ್ ಶಸಚಿಕಿತ್ಸೆ ನಡೆದಿತ್ತು. 25 ವರ್ಷಗಳಲ್ಲಿ ಉಂಟಾಗಿದ್ದ ಬೃಹತ್ ಇನ್ಸಿಷನಲ್ ಹೆರ್ನಿಯಾದ ಪರಿಣಾಮ ಸಣ್ಣ ಕರುಳಿನ ಬಹುತೇಕ ಭಾಗವು ಹೆರ್ನಿಯಾ ಚೀಲದೊಳಗೆ ಜಾರಿದ್ದು, ಹೊಟ್ಟೆಯ ಭಾಗವು ಅಸಹಜವಾಗಿ ಉಬ್ಬಿ ಕೆಳಗೆ ತೂಗುವ ಸ್ಥಿತಿಗೆ ತಲುಪಿತ್ತು.
ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಮೆಡಿಸಿನ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ರೋಗಿ ಮತ್ತು ಕುಟುಂಬ ಸದಸ್ಯರಿಗೆ ಶಸಚಿಕಿತ್ಸೆ ಅಪಾಯಗಳು ಹಾಗೂ ಚಿಕಿತ್ಸೆಯ ಸಂಪೂರ್ಣ ಮಾಹಿತಿ ವಿವರಿಸಿ ಸಮಾಲೋಚನೆ ನಡೆಸಿದ ಬಳಿಕ ಶಸಚಿಕಿತ್ಸೆ ಕೈಗೆತ್ತಿಕೊಳ್ಳಲಾಗಿದೆ. ಡಾ.ಸಾಬು ಸಾತಿಹಾಳ, ಡಾ.ಸ್ಟಾಲಿನ್ ಹೆಗರೆ, ಡಾ.ಶ್ರೀನಿವಾಸ ನೇತೃತ್ವದಲ್ಲಿ ಯಶಸ್ವಿಯಾಗಿ ಶಸಚಿಕಿತ್ಸೆ ನೆರವೇರಿತು.
ರೋಗಿಗೆ 15 ದಿನಗಳ ಕಾಲ ಐಸಿಯು ಹಾಗೂ ವಾರ್ಡ್‌ನಲ್ಲಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಯಿತು. ರೋಗಿ ಚೇತರಿಸಿಕೊಂಡು ಆರೋಗ್ಯದಿಂದ ಮನೆಗೆ ಮರಳಿದ್ದಾರೆ.
ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ಆಸ್ಪತ್ರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎನ್., ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ವೈದ್ಯರ ತಂಡಕ್ಕೆ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net