ಯಶಸ್ಸಿಗೆ ಬೇಕು ಕಠಿಣ ಪರಿಶ್ರಮ

ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ಶೀಲವಂತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಡಾ. ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು, ಸಮಾಜದ ಅಧ್ಯಕ್ಷ ಸೂರ್ಯಕಾಂತ ಶೀಲವಂತ, ಸಿದ್ದಪ್ಪ ಶೀಲವಂತ, ಉಮೇಶ ಶೀಲವಂತ ಇತರರಿದ್ದರು.
ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ಶೀಲವಂತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಡಾ. ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು, ಸಮಾಜದ ಅಧ್ಯಕ್ಷ ಸೂರ್ಯಕಾಂತ ಶೀಲವಂತ, ಸಿದ್ದಪ್ಪ ಶೀಲವಂತ, ಉಮೇಶ ಶೀಲವಂತ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಅಭಿನವ ಶ್ರೀ ನುಡಿ
  • ಕಲ್ಯಾಣದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಬಸವಕಲ್ಯಾಣ: ಕಷ್ಟಪಟ್ಟು ಅಭ್ಯಾಸ ಮಾಡಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮದ ಮೂಲಕ ಜೀವನದಲ್ಲಿ ಯಶಸ್ವು ಕಾಣಲು ಸಾಧ್ಯವಾಗುತ್ತದೆ ಎಂದು ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ನಗರದ ಶ್ರೀ ಸದ್ಗುರು ಸದಾನಂದ ಸ್ವಾಮಿ ಮಠದ ಪರಿಸರದಲ್ಲಿ ಶನಿವಾರ ಶೀಲವಂತ ಅಕ್ಕಸಾಲಿಗ ಸಮಾಜ ಸಂ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್​ ವತಿಯಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಸಾಧನೆ ಮಾಡಿದರಿಗೆ ಸನ್ಮಾನಿಸಿ, ಪೋತ್ಸಾಹಿಸುವದು ಅವಶ್ಯಕ ಎಂದರು.
ಸಮಾಜದ ಅಧ್ಯಕ್ಷ ಸೂರ್ಯಕಾಂತ ಶೀಲವಂತ ಮಾತನಾಡಿ, ಪ್ರತಿವರ್ಷವೂ ಸಮಾಜದ ಪ್ರತಿಭಾವಂತರನ್ನು ಸನ್ಮಾನಿಸಿ, ಪ್ರೋತಾಹಿಸಲಾಗುತ್ತಿದೆ. ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭ್ಯಾಸ ಮಾಡಿ ಜೀವನದಲ್ಲಿ ಉನ್ನತ ಸ್ಥಾನ ಪಡೆದು ಸಮಾಜಕ್ಕೆ ಗೌರವ ತರಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಸಿದ್ದಪ್ಪ ಶೀಲವಂತ, ಉಮೇಶ ಶೀಲವಂತ, ಮಹೇಶ ಶೀಲವಂತ, ಈಶ್ವರ, ಶೀಲವಂತ, ಶಶಿಕಾಂತ ಶೀಲವಂತ, ಗಂಗಾಧರ ಅಂಬಲಗೆ, ಧನರಾಜ ಅಂಬಲಗೆ, ಸತೀಶ ಶೀಲವಂತ, ಮಹಿಳಾ ಟಕದ ಅಧ್ಯೆ ಉರ್ಮಿಳಾ ರವಿ, ಅರ್ಚನಾ ಪ್ರಭು ಇದ್ದರು. ಕಾರ್ಯದರ್ಶಿ ಪ್ರಭು ಸ್ವಾಗತಿಸಿ ನಿರೂಪಣೆ ಮಾಡಿದರು. ಸಹ ಕಾರ್ಯದರ್ಶಿ ಅರುಣ ಚಂದನಕೆರೆ ವಂದಿಸಿದರು.
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಗಣೇಶ ಪ್ರಭು, ಸಾ ಸತೀಶ ಮತ್ತು ದ್ವೀತಿಯ ಪಿಯುಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ವಿಜಯಲ್ಮ ಗಂಗಾಧರ, ವೈಭವಿ ರವಿ ಹಾಗೂ ಅಭಿಷೇಕ ಶಶಿಕಾಂತ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net