ನಿರಂತರ ಶ್ರಮದಿಂದ ಯಶಸ್ಸು ಪ್ರಾಪ್ತಿ

Success is achieved through continuous effort.
Success is achieved through continuous effort.
Published on
ಗುಬ್ಬಿ: ಸಮಾಜದಲ್ಲಿ ಮನುಷ್ಯ ಉನ್ನತಿ ಪಡೆಯಲು ನಿರಂತರ ಶ್ರಮ ಜೀವಿಯಾಗಿ ದುಡಿಯಬೇಕು. ಆಗ ಯಶಸ್ಸು, ಐಶ್ವರ್ಯ ತಾನಾಗಿಯೇ ಬರುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.
ತಾಲೂಕಿನ ನಿಟ್ಟೂರು ಹೋಬಳಿ ಬಾಗೂರು ಗೇಟ್​ ಬಳಿಯ ಬಾಲಾಜಿ ಬಡಾವಣೆಯಲ್ಲಿ ಆಯೋಜಿಸಿದ್ದ ಇಷ್ಟಲಿಂಗ ಪೂಜೆ, ಧರ್ಮ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ಬೌದ್ಧಿಕ ಬದುಕು ಪರಿಪೂರ್ಣ ಆಗಲು ಧರ್ಮಗುರುಗಳ ಆಶೀರ್ವಾದ ಪಡೆಯುವುದು ಮುಖ್ಯ ಎಂದರು.
ಕೌಟುಂಬಿಕ ಎಂಬುದು ಛಿದ್ರವಾಗಿ ಹೆತ್ತ ತಂದೆ&ತಾಯಿಯನ್ನು ರ್ನಿಲಕ್ಷ$್ಯ ಮಾಡುವ ಈ ಕಾಲದಲ್ಲಿ ಸಂಧ್ಯಾ ಕಾಲದಲ್ಲಿ ಅವರ ಆರೈಕೆ ಮಾಡುವುದು ಎಲ್ಲರಿಗೂ ದಕ್ಕುವ ಅವಕಾಶ ಅಲ್ಲ. ತಂದೆ&ತಾಯಿಯ ಬಯಕೆಯನ್ನು ಅರಿತು ಧಾರ್ಮಿಕ ಕಾರ್ಯಕ್ರಮ ಆಯೋಜಿಸಿ ಅವರ ಇಷ್ಟಲಿಂಗ ಪೂಜೆ ಜತೆಗೆ ಗುರುಭಕ್ತಿ, ಧರ್ಮನಿಷ್ಠೆ ಮೆರೆದ ವರ್ತಕ ಸಚಿನ್​ ಅವರ ಸೇವೆ ಸಾರ್ಥಕವಾದದ್ದು, ಸಾಮಾಜಿಕವಾಗಿ ಇಷ್ಟಲಿಂಗ ಪೂಜೆ ಹಾಗೂ ಧರ್ಮ ಜನಜಾಗೃತಿ ಕಾರ್ಯಕ್ರಮ ಇಂದಿನ ಯುವಕರಿಗೆ ಮಾದರಿಯಾಗಿದೆ. ಕಾಯಕವೇ ಕೈಲಾಸ ಎಂಬ ಬಸವಣ್ಣ ತತ್ವ ಅಳವಡಿಸಿಕೊಂಡ ಯುವಕರ ಧರ್ಮಕಾರ್ಯ ನಿರಂತರವಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.
ದೊಡ್ಡಗುಣಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಧರ್ಮ ಪಾಲನೆಯ ಒಂದು ಭಾಗವಾಗಿ ಜಾಗೃತಿ ಕಾರ್ಯಕ್ರಮ ಆಯೋಜನೆ ಒಂದೇ ವೇದಿಕೆಗೆ ನಲವತ್ತು ಗುರುಗಳ ಆಗಮನಕ್ಕೆ ನಾಂದಿ ಹಾಡಿದೆ. ಶ್ರದ್ಧೆ ಭಕ್ತಿ ಕಡಿಮೆಯಾಗುತ್ತಿರುವ ಕಾಲದಲ್ಲಿ ಸಚಿನ್​ ಅವರ ಸೇವಾ ಕಾರ್ಯ ಶ್ಲಾಘನೀಯ ಎಂದರು.
ಸಿದ್ದರಬೆಟ್ಟ ಮಠದ ಶ್ರೀ ವೀರಭದ್ರ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸತಿಯಲ್ಲಿ ಸಂವತ್ಸರ ಲೆಕ್ಕದ ಆಚರಣೆ ಪ್ರಾಮುಖ್ಯತೆ ಪಡೆದಿದೆ. ಮನುಷ್ಯನ ಆಯಸ್ಸು 120 ವರ್ಷ ಎಂಬ ಮಾತು ಧಾರ್ಮಿಕ ಕ್ಷೇತ್ರದಲ್ಲಿದೆ. ಈ ಆಯಸ್ಸಿನ ಅರ್ಧಭಾಗ 60 ವರ್ಷ ಮನುಷ್ಯನ ಕುಗ್ಗುವಿಕೆ ತೋರುತ್ತದೆ. ಈ ಸಮಯ ಆಧ್ಯಾತ್ಮಿಕತೆಯತ್ತ ವಾಲಬೇಕು ಎಂಬ ನಿಟ್ಟಿನಲ್ಲಿ ಷಷ್ಠಿ ಪೂರ್ತಿ ಕಾರ್ಯಕ್ರಮ ನಡೆಯುತ್ತದೆ ಎಂದು ವಿವರಿಸಿದರು.
ಎಲೆರಾಂಪುರ ಮಠದ ಶ್ರೀ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಗುರಿಯ ಹಿಂದೆ ಗುರು ಇರಬೇಕು ಎಂಬ ಮಾತು ಅಕ್ಷರಶ@ ಸತ್ಯ. ಎಲ್ಲ ವರ್ಗದ ಜನರೊಂದಿಗೆ ಇಷ್ಟಲಿಂಗ ಪೂಜೆ ಆಯೋಜಿಸಿದ ವರ್ತಕ ಸಚಿನ್​ ನಡೆ ಯುವಕರಿಗೆ ದಾರಿ ಎಂದರು.
ಎರಡು ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಬಾಳೆಹೊನ್ನೂರು ರಂಭಾಪುರಿ ಶ್ರೀಗಳ ಸಾರೋಟ್​ ಮೆರವಣಿಗೆ ವಿವಿಧ ಕಲಾ ಮೇಳದೊಂದಿಗೆ ಅದ್ದೂರಿಯಾಗಿ ನಡೆಯಿತು. ಮಂಗಳವಾರ ಮುಂಜಾನೆ ಇಷ್ಟಲಿಂಗ ಪೂಜೆ ಶ್ರೀಗಳು ನೆರವೇರಿಸಿದರು.
ಚನ್ನಗಿರಿ ಮಠದ ಶ್ರೀ ಕೇದಾರಲಿಂಗ ಶಿವಶಾಂತ ವೀರ ಸ್ವಾಮೀಜಿ, ಸಂಗೊಳ್ಳಿ ಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಹೊನ್ನುಡಿಕೆ ಮಠದ ಶ್ರೀ ಬಸವ ರಾಜೇಂದ್ರ ಸ್ವಾಮೀಜಿ, ಮುಖಂಡರಾದ ಎಸ್​.ಡಿ.ದಿಲೀಪ್​ ಕುಮಾರ್​, ಪಿ.ಬಿ.ಚಂದ್ರಶೇಖರಬಾಬು, ಎನ್​.ಸಿ.ಪ್ರಕಾಶ್​, ಜೆಡಿಎಸ್​ ಮುಖಂಡ ಬಿ.ಎಸ್​.ನಾಗರಾಜು, ಬೆಣಚಿಗೆರೆ ರುದೇಶ್​, ಜಿಪಂ ಮಾಜಿ ಸದಸ್ಯೆ ಡಾ.ನವ್ಯಬಾಬು, ತೆವಡೇಹಳ್ಳಿಯ ಸದಾಶಿವಯ್ಯ, ಪ್ರಸನ್ನಕುಮಾರ್​, ದಕ್ಷಿಣಾಮೂರ್ತಿ, ಲಯನ್ಸ್​ ಕ್ಲಬ್​ ಅಧ್ಯಕ್ಷ ಕುಮಾರಸ್ವಾಮಿ, ಚಂದ್ರಶೇಖರ, ಉಷಾ, ವರ್ತಕ ಸಚಿನ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net