ದಾರ್ಶನಿಕರ ಆದರ್ಶದಲ್ಲಿ ನಡೆದರೆ ಯಶಸ್ಸು

ಸೇಡಂನನಲ್ಲಿ ಆಯೋಜಿಸಿದ್ದ ಕನಕ ದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಅನೀಲಕುಮಾರ ಮಾಲಪಾಣಿ, ಪ್ರಭಾಕರ ಜೋಶಿ, ಮುಡಬಿ ಗುಂಡೇರಾವ್​, ಆರೋಗ್ಯಪ್ಪ ಮುಕ್ತೆದಾರ, ಶರಣು ಮಹಾಗಾಂವ್​ ಇದ್ದರು.
ಸೇಡಂನನಲ್ಲಿ ಆಯೋಜಿಸಿದ್ದ ಕನಕ ದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಅನೀಲಕುಮಾರ ಮಾಲಪಾಣಿ, ಪ್ರಭಾಕರ ಜೋಶಿ, ಮುಡಬಿ ಗುಂಡೇರಾವ್​, ಆರೋಗ್ಯಪ್ಪ ಮುಕ್ತೆದಾರ, ಶರಣು ಮಹಾಗಾಂವ್​ ಇದ್ದರು.
Published on
ಸೇಡಂ: ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ತಮ್ಮದೆ ಕೊಡುಗೆ ನೀಡಿದ ಮಹಾನ್​ ದಾರ್ಶನಿಕ ಹಾಗೂ ದಾಸ ಶ್ರೇಷ್ಠ ಕನಕದಾಸರು ನಮಗೆಲ್ಲರಿಗೂ ಸ್ಫೂರ್ತಿ ಎಂದು ಹಿರಿಯ ಪತ್ರಕರ್ತ ಪ್ರಭಾಕರ ಜೋಶಿ ಹೇಳಿದರು.
ಅರಿವಿನ ಮಂಟಪದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ಸಗರದ ಕಲಾನಿಕೇತನ ಟ್ರಸ್ಟ್​ ಸಹಯೋಗದಲ್ಲಿ ನರ್ಮದಾದೇವಿ ಗಿಲಡಾ ಮಹಿಳಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯರಿಗಾಗಿ ಶನಿವಾರ ಆಯೋಜಿಸಿದ್ದ ಕನಕ ದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಕ್ತಿ ಕವಿ ಹಾಗೂ ಸಮಾಜ ಸುಧಾರಕರಾಗಿದ್ದ ಕನಕದಾಸರು ಪ್ರಸಿದ್ಧ ಹರಿದಾಸರು. ಅವರ ಕೀರ್ತನೆ ಮತ್ತು ಸಮಾನತೆಯ ಸಂದೇಶವು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ. ಜಾತಿ ಕಾರಣಕ್ಕೆ ದೇವಸ್ಥಾನ ಪ್ರವೇಶ ನಿರಾಕಾರಿಸಿದ್ದರಿಂದ ಭಕ್ತಿಯಿಂದಲೇ ಕೃಷ್ಣನ ದರ್ಶನ ಪಡೆದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಸಾಹಿತಿ ಮುಡಬಿ ಗುಂಡೇರಾವ್​ ಮಾತನಾಡಿದರು. ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸದಸ್ಯ ಅನೀಲಕುಮಾರ ಮಾಲಪಾಣಿ ಉದ್ಘಾಟಿಸಿದರು. ಪ್ರಾಚಾರ್ಯ ಆರೋಗ್ಯಪ್ಪ ಮುಕ್ತೇದಾರ ಅಧ್ಯಕ್ಷತೆವಹಿಸಿದ್ದರು.
ಕಾರ್ಯನಿರತ ಪತ್ರಕರ್ತರ ಸಂದ ತಾಲೂಕು ಅಧ್ಯಕ್ಷ ಶರಣು ಮಹಾಗಾಂವ್​, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಉಪನ್ಯಾಸಕರಾದ ಡಾ.ಶರಣಪ್ಪ, ಕಾಮಾ ಮಠಪತಿ, ಶಾರದಾ, ಅಂಬಿಕಾ, ಅರ್ಚನಾ, ಶಾಂತಕುಮಾರ ಇತರರಿದ್ದರು. ಬಸವರಾಜ ಸಿಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ರೇಣುಕಾ, ರಾಧಿಕಾ ಪ್ರಾರ್ಥಿಸಿದರು. ಆರತಿ ಕಡಗಂಚಿ ಸ್ವಾಗತಿಸಿದರು. ರಾಜೇಶ್ವರಿ ನಿರೂಪಣೆ ಮಾಡಿದರು. ಲಕ್ಷಿ$್ಮ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net