ಪ್ರಾಂಶುಪಾಲ ಎನ್.ಮಹದೇವಸ್ವಾಮಿ ಮಾತನಾಡಿ, ಇದೊಂದು ಒಳ್ಳೆಯ ಸತ್ ಸಂಪ್ರದಾಯದ ಕಾರ್ಯಕ್ರಮ. ಹಿರಿಯರು ಕಿರಿಯ ವಿದ್ಯಾರ್ಥಿಗಳಿಗೆ ಹೊಸ ವಾತಾವರಣಕ್ಕೆ ಬಂದಾಗ ಅವರಲ್ಲಿ ಇರುವ ಆತಂಕ, ಭಯವನ್ನು ನಿವಾರಿಸಿ, ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸುವ ಜತೆಗೆ ಆತ್ಮೀಯತೆ ಬೆಳೆಯಲು ಸಾಧ್ಯವಾಗುತ್ತದೆ. ನೀವು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಂಡು ಸತ್ಪ್ರಜೆಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಿ, ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಿಕೊಂಡು ನಿಮ್ಮ ಜೀವನದ ಗುರಿ ಮುಟ್ಟಬೇಕೆಂದು ತಿಳಿಸಿದರು.