ಮುಜರಾಯಿ ಇಲಾಖೆ ಮಾನಸ ಸರೋವರ ಯಾತ್ರೆ ಮಾಡಿದವರಿಗೆ 30 ಸಾವಿರ ರೂ. ಹಾಗೂ ಚಾರ್ಧಾಮ್ (ಗಂಗೋತ್ರಿ, ಯಮುನೋತ್ರಿ, ಕೇದಾರ, ಬದರಿನಾಥ) ಯಾತ್ರೆ ಮಾಡಿದವರಿಗೆ 20 ಸಾವಿರ ರೂ. ಸಹಾಯಧನವನ್ನು ಬಹಳ ವರ್ಷಗಳಿಂದ ನೀಡುತ್ತಿದ್ದು ಕಾಶಿ ಯಾತ್ರೆ ಮಾಡಿ ಬಂದವರಿಗೆ 5 ಸಾವಿರ ರೂ. ಸಹಾಯಧನ ನೀಡುವ ಪರಿಪಾಠವನ್ನು ಆರಂಭಿಸಿದೆ. 2025ರಲ್ಲಿ ಕಾಶಿ ಯಾತ್ರೆ ಮಾಡಿದ 8,197 ಮಂದಿ, ಮಾನಸ ಸರೋವರ ಯಾತ್ರೆ ಮಾಡಿದ 812 ಮಂದಿ ಹಾಗೂ ಚಾರ್ಧಾಮ್ ಯಾತ್ರೆ ಮಾಡಿದ 4,241 ಮಂದಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ವೈಷ್ಣೋದೇವಿ ಯಾತ್ರೆಗೂ ಈ ಸೌಲಭ್ಯ ದೊರೆಯಲಿದೆ.