

ದೇವನಹಳ್ಳಿ:
ಆರೋಗ್ಯ ಇಲಾಖೆಯ ಸ್ವಲ್ಪ ಜಾಗವನ್ನು ಅಗ್ನಿಶಾಮಕ ಠಾಣೆಗೆ ನೀಡಲಾಗಿದೆ. ತಾಲೂಕು ಪತ್ರಕರ್ತರ ಸಂಘದ ಕಚೇರಿಯೂ ಆರೋಗ್ಯ ಇಲಾಖೆ ಜಾಗದಲ್ಲೇ ಕಾರ್ಯನಿರ್ವಹಿಸುತ್ತಿದೆ. ಜಾಗ ಬಳಕೆಯಾಗುತ್ತಿಲ್ಲ ಎಂದು ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, ಸಂಕ್ಕೆ ಜಾಗದ ಮಂಜೂರಾತಿಗಾಗಿ ಪತ್ರಕರ್ತ ಸಂವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಬಹುದು ಎಂದು ತಹಸೀಲ್ದಾರ್ ಎಂ.ಅನಿಲ್ ಸಲಹೆ ನೀಡಿದರು.
ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರಿಗೆ ಸಂಘದಿಂದ ಗುರುತಿನ ಚೀಟಿ ವಿತರಿಸಿ ಮಾತನಾಡಿದ ಅವರು, ಜಿಲ್ಲಾ ಸಂಘಕ್ಕೆ ವಿಜಯಪುರ ರಸ್ತೆಯಲ್ಲಿ 5 ಗುಂಟೆ ಜಾಗ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆ ಜಾಗವನ್ನು ಶೀಘ್ರ ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಈಗಿರುವ ಪತ್ರಕರ್ತರ ಭವನ ಆರೋಗ್ಯ ಇಲಾಖೆಯದ್ದು. 30 ವರ್ಷಗಳಿಂದ ಇದೇ ಜಾಗದಲ್ಲಿ ಸಂಘವಿದೆ. ತಾಲೂಕು ಸಂಘಕ್ಕೆ ಈ ಜಾಗವನ್ನು, ವಿಜಯಪುರ ರಸ್ತೆಯಲ್ಲಿ 5 ಗುಂಟೆ ಜಾಗವನ್ನು ಜಿಲ್ಲಾಸಂಘಕ್ಕೆ ಮಂಜೂರು ಮಾಡಬೇಕು ಎಂದು ತಹಸೀಲ್ದಾರ್ಗೆ ಮನವಿ ಮಾಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಯ್ಯ, ಸಂಘದ ರಾಜ್ಯ ಸಮಿತಿ ಸದಸ್ಯ ಮಂಜುನಾಥ್, ಜಿಲ್ಲಾ ಖಜಾಂಚಿ ಮುನಿರಾಜು, ಉಪಾಧ್ಯಕ್ಷ ಕೃಷ್ಣಾನಾಯಕ್, ಮುನಿವೀರಣ್ಣ, ಎಸ್.ಬಿ.ರಫಿಉಲ್ಲಾ, ಕಾರ್ಯದರ್ಶಿ ನಾಗರಾಜ್, ಸತೀಶ್, ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.