ಸಮಯ ವ್ಯರ್ಥ ಮಾಡದೆ ಅಧ್ಯಯನ ಮಾಡಿ / ANEKAL

ಆನೇಕಲ್​ ತಾಲೂಕಿನ ಚಂದಾಪುರದಲ್ಲಿ ರಾಜ್ಯ ಮಗ್ಗದವರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಮಗ್ಗದ ಸಂಘದ ಸಂಸ್ಥಾಪಕ ಅಧ್ಯಕ್ಷ ಸರ್ಜಾಪುರ ಯೋಗೇಶ್​, ಪ್ರಧಾನ ಕಾರ್ಯದರ್ಶಿ ಗಣಗಲೂರು ರಾಜಣ್ಣ, ತಿಮ್ಮಸಂದ್ರ ರಮೇಶ್​, ಜಿಗಣಿ ಸಂಪಂಗಿರಾಜು ಇತರರು ಇದ್ದರು.
ಆನೇಕಲ್​ ತಾಲೂಕಿನ ಚಂದಾಪುರದಲ್ಲಿ ರಾಜ್ಯ ಮಗ್ಗದವರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಮಗ್ಗದ ಸಂಘದ ಸಂಸ್ಥಾಪಕ ಅಧ್ಯಕ್ಷ ಸರ್ಜಾಪುರ ಯೋಗೇಶ್​, ಪ್ರಧಾನ ಕಾರ್ಯದರ್ಶಿ ಗಣಗಲೂರು ರಾಜಣ್ಣ, ತಿಮ್ಮಸಂದ್ರ ರಮೇಶ್​, ಜಿಗಣಿ ಸಂಪಂಗಿರಾಜು ಇತರರು ಇದ್ದರು.
Published on
ಆನೇಕಲ್​ : ಅಂಬೇಡ್ಕರ್​ ಅವರನ್ನು ಅನುಸರಿಸುವ ಶೋಷಿತ ಸಮಾಜದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನ ಮಾಡುವ ಮೂಲಕ ಉನ್ನತ ಹುದ್ದೆ ಪಡೆದು ಸಾಧನೆ ಮಾಡಬೇಕು ಎಂದು ಅಕ್ಕ ಐಎಎಸ್​ ಆಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್​ ಕರೆ ನೀಡಿದರು.
ತಾಲೂಕಿನ ಚಂದಾಪುರದಲ್ಲಿ ರಾಜ್ಯ ಮಗ್ಗದವರ ಸಂಘದಿಂದ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಅಭ್ಯಾಸ ಮಾಡಿದರೆ ಮಾತ್ರ ಸಾಧನೆ ಮಾಡಬಹುದು ಎಂದರು.
ಜಾನಪದ ಅಕಾಡಮಿ ಅಧ್ಯಕ್ಷ ಶಿವಪ್ರಸಾದ್​ ಮಾತನಾಡಿ, ಸಂವಿದಾನದಿಂದ ಪ್ರತಿಯೊಬ್ಬರೂ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದು, ಅಂಬೇಡ್ಕರ್​ ಅವರನ್ನು ಒಂದು ಸಮಾಜಕ್ಕೆ ಸೀಮಿತ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಕರ್ನಾಟಕ ಮಗ್ಗದ ಸಂಘದ ಅಧ್ಯಕ್ಷ ದಯಾನಂದ ಮಾತನಾಡಿ, ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಪಿಯುಸಿ ನಂತರ ಮುಂದೆ ವಿದ್ಯಾರ್ಥಿಗಳು ಏನು ಮಾಡಬೇಕು ಎಂಬ ಮಾರ್ಗದರ್ಶನ ನೀಡು ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷ ರಾಮಸಾಗರ ವೆಂಕಟಸ್ವಾಮಿ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶೈಕ್ಷಣಿಕ ಪರಿಕರ ವಿತರಿಸಲಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಓದುವ ಸಮಯದಲ್ಲಿ ಪ್ರಾಮಾಣಿಕವಾಗಿ ಓದಿ ದೊಡ್ಡ ಅಧಿಕಾರಿಯಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹೇಳಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ, ಪೆನ್​, ಬ್ಯಾಗ್​, ನೋಟ್​ ಪುಸ್ತಕಗಳು ನೀಡಿ ಸನ್ಮಾನಿಸಲಾಯಿತು.
ಶಿವಕುಮಾರ್​, ಕಲ್ಲುಬಾಳು ರಮೇಶ್​, ಈರಣ್ಣ, ಮುಖಂಡರಾದ ಬಳ್ಳೂರು ಮುನಿವೀರಪ್ಪ, ಕೂಗೂರು ಮುನಿಯಪ್ಪ, ಚಂದ್ರಪ್ಪ, ಮಾರಪ್ಪ, ಮೈಕೋ ನಾಗರಾಜು, ದ್ಯಾವಸಂದ್ರ ಮುನಿರಾಜು, ರುದ್ರಪ್ಪ, ಮಂಜುನಾಥ್​, ಮೆಣಸಿಗಾನಹಳ್ಳಿ ಮುನಿರಾಜು, ಸುಮತಿ, ರವಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net