ನೌಕರರು, ಕಾರ್ಮಿಕರಿಗೆ ಅಧ್ಯಯನ ಪ್ರವಾಸ

ಹನೂರಿನಲ್ಲಿ ಘನತ್ಯಾಜ್ಯ ವೈಜ್ಞಾನಿಕ ನಿರ್ವಹಣೆ ಸಂಬಂಧ ಅರಿವನ್ನು ಹೊಂದಲು ಪೌರ ಕಾರ್ಮಿಕರು ಹಾಗೂ ನೌಕರರು ಅಧ್ಯಯನ ಪ್ರವಾಸಕ್ಕೆ ಹೊರಟರು. ಮಹೇಶ್‌ಕುಮಾರ್, ನಾಗರಾಜು, ಪ್ರಕಾಶ್ ಇತರರು ಇದ್ದರು.
ಹನೂರಿನಲ್ಲಿ ಘನತ್ಯಾಜ್ಯ ವೈಜ್ಞಾನಿಕ ನಿರ್ವಹಣೆ ಸಂಬಂಧ ಅರಿವನ್ನು ಹೊಂದಲು ಪೌರ ಕಾರ್ಮಿಕರು ಹಾಗೂ ನೌಕರರು ಅಧ್ಯಯನ ಪ್ರವಾಸಕ್ಕೆ ಹೊರಟರು. ಮಹೇಶ್‌ಕುಮಾರ್, ನಾಗರಾಜು, ಪ್ರಕಾಶ್ ಇತರರು ಇದ್ದರು.
Published on
ಹನೂರು: ಘನತ್ಯಾಜ್ಯ ವೈಜ್ಞ್ಞಾನಿಕ ನಿರ್ವಹಣೆ ಹಾಗೂ ನೀರಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಅರಿವು ಮೂಡಿಸಲು ಪಟ್ಟಣ ಪಂಚಾಯಿತಿ ವತಿಯಿಂದ ಕೈಗೊಂಡಿರುವ 2 ದಿನದ ಅಧ್ಯಯನ ಪ್ರವಾಸಕ್ಕೆ ಶನಿವಾರ ಪೌರ ಕಾರ್ಮಿಕರು, ನೌಕರರು ತೆರಳಿದರು.

ಸ್ವಚ್ಛ ಭಾರತ್ 2.0 ಯೋಜನೆಯಡಿ ಮಾಹಿತಿ ಶಿಕ್ಷಣ ಸಂವಹನ ಹಾಗೂ ಸಾಮರ್ಥ್ಯಾಭಿವೃದ್ಧಿ ಚಟುವಟಿಕೆಗಳ ಅನುಷ್ಠಾನ ಕಾರ್ಯಕ್ರಮದಡಿ ಕೈಗೊಂಡಿರುವ ಪ್ರವಾಸಕ್ಕೆ ಪಪಂ ಮುಖ್ಯಾಧಿಕಾರಿ ಎಂ.ಪಿ ಮಹೇಶ್‌ಕುಮಾರ್ ಚಾಲನೆ ನೀಡಿದರು.

ಈ ವೇಳೆ ಅವರು ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ. ಘನತ್ಯಾಜ್ಯ ವೈಜ್ಞಾನಿಕವಾಗಿ ವಿಲೇವಾರಿಯಾಗಬೇಕಿದೆ. ಪ್ಲಾಸ್ಟಿಕ್‌ಮುಕ್ತವಾಗಿಸಲು ಕಾಗದದ ವಸ್ತುಗಳನ್ನು ಬಳಕೆ ಮಾಡಬೇಕಿದೆ. ಕಲುಷಿತ ನೀರಿನ ಸಂಸ್ಕರಣೆ, ನೈರ್ಮಲ್ಯದ ಬಗ್ಗೆ ಪೌರ ಕಾರ್ಮಿಕರು ಹಾಗೂ ನೌಕರರು ತಿಳಿವಳಿಕೆ ಹೊಂದಬೇಕಿದೆ. ಹಾಗಾಗಿ, ಮೈಸೂರು ಹಾಗೂ ಉಡುಪಿಯಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ 2 ದಿನದ ಪ್ರವಾಸವನ್ನು ಕೈಗೊಳ್ಳಲಾಗಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಅಲ್ಲಿನ ವಿಧಾನವನ್ನು ಹನೂರಿನಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ಪಟ್ಟಣದ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಹೀಗಾದಾಗ ಅಧ್ಯಯನ ಪ್ರವಾಸ ಆಯೋಜನೆಗೆ ಅರ್ಥ ಬರಲಿದೆ ಎಂದರು.

ಈ ಸಂದರ್ಭದಲ್ಲಿ ಪಪಂ ಇಂಜಿನಿಯರ್ ನಾಗರಾಜು, ಆರೋಗ್ಯ ನಿರೀಕ್ಷಕ ಪ್ರಕಾಶ್ ಹಾಗೂ ಕಚೇರಿ ನೌಕರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net