ಬನಹಟ್ಟಿಯಲ್ಲಿ ನೇಕಾರ ಕುಲಶಾಸ ಅಧ್ಯಯನ

ಬನಹಟ್ಟಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ನಡೆದ ನೇಕಾರ ಕುಲಶಾಸ ಅಧ್ಯಯನ ಕುರಿತು ಡಾ. ಟಿ.ಟಿ. ಬಸನಗೌಡ ಮಾಹಿತಿ ಒದಗಿಸಿದರು. ಶಂಕರ ಜುಂಜಪ್ಪನವರ, ಮಲ್ಲಿನಾಥ ಕಕಮರಿ, ಶ್ರೀಶೈಲ ದಬಾಡಿ, ಡಾ. ಪಂಡಿತಪ್ಪ ಪಟ್ಟಣ ಇತರರಿದ್ದರು.
ಬನಹಟ್ಟಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ನಡೆದ ನೇಕಾರ ಕುಲಶಾಸ ಅಧ್ಯಯನ ಕುರಿತು ಡಾ. ಟಿ.ಟಿ. ಬಸನಗೌಡ ಮಾಹಿತಿ ಒದಗಿಸಿದರು. ಶಂಕರ ಜುಂಜಪ್ಪನವರ, ಮಲ್ಲಿನಾಥ ಕಕಮರಿ, ಶ್ರೀಶೈಲ ದಬಾಡಿ, ಡಾ. ಪಂಡಿತಪ್ಪ ಪಟ್ಟಣ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಟಿ.ಟಿ. ಬಸನಗೌಡ ಹೇಳಿಕೆ
  • ಜನಾಂಗದ ಪರಂಪರೆ ಬೆಳವಣಿಗೆಗೆ ಪೂರಕ
ರಬಕವಿ/ಬನಹಟ್ಟಿ: ನೇಕಾರ ಕುಲಶಾಸ ಅಧ್ಯಯನಕ್ಕೆ ರಾಜ್ಯ ಸರ್ಕಾರದ ಸಮಗ್ರ ಮಾಹಿತಿಯನ್ವಯ ಶುಕ್ರವಾರ ಬನಹಟ್ಟಿಯಲ್ಲಿ ವಿಶೇಷ ಮಾಹಿತಿ ನೀಡುವಲ್ಲಿ ಸಭೆ ಯಶಸ್ವಿಯಾಯಿತು.
ಕವಿವಿ ಮಾನವಶಾಸ ವಿಭಾಗದ ಮುಖ್ಯಸ್ಥ ಡಾ. ಟಿ.ಟಿ. ಬಸನಗೌಡ ಮಾತನಾಡಿ, ನೇಕಾರ, ಹಟಗಾರ, ತೊಗಟವೀರ ಕ್ಷತ್ರೀಯ, ಸೆಗುಂದರ್, ಕುರುಹಿನಶೆಟ್ಟಿ, ಸ್ವಕುಳಸಾಳಿ, ಪದ್ಮಸಾಲಿ, ಶೆಟ್ಟಿಗಾರ, ಪಟ್ಟಸಾಲಿ, ಜೇಡರ ಹೀಗೆ 10 ಉಪ ಪಂಗಡ ಹಾಗೂ ನೇಕಾರ ಕುಲಶಾಸೀಯ ಅಧ್ಯಯನ ನಡೆಯುತ್ತಿದೆ ಎಂದು ತಿಳಿಸಿದರು.
ನೇಕಾರ ಜನಾಂಗದ ಉಳಿವು ಮತ್ತು ಪರಂಪರೆ ಬೆಳವಣಿಗೆಗೆ ಕುಲಶಾಸ ಅಧ್ಯಯನ ಪೂರಕವಾಗಿದೆ. ರಾಜ್ಯದಲ್ಲಿನ ಪ್ರತಿಯೊಂದು ಉಪ ಪಂಗಡಗಳ ಈಗಿನ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸಿದ್ಧಪಡಿಸಿದ ವರದಿಯನ್ನು ಕೇಂದ್ರ ಸರ್ಕಾರ ಅನುಷ್ಠಾನ ತರಲಿದೆ. ಮುಂದಿನ ಪೀಳಿಗೆಯ ರಕ್ಷಣೆಗಾಗಿ ಈ ಕಾರ್ಯ ಯಶಸ್ವಿಯಾಗಲಿದೆ ಎಂದರು.
ನೇಕಾರ ಮುಖಂಡ ಶಂಕರ ಜುಂಜಪ್ಪನವರ ಮಾತನಾಡಿ, ಸರ್ಕಾರದಿಂದ ನೇಕಾರ ಜನಾಂಗಕ್ಕೆ ನಿರ್ದಿಷ್ಟ ಪ್ರಯೋಜನ ದೊರಕುವಲ್ಲಿ ವಿಲವಾಗಿದೆ. ಅದರಲ್ಲೂ ರಬಕವಿ-ಬನಹಟ್ಟಿ ತಾಲೂಕಿನ ನೇಕಾರ ಸಮುದಾಯ ಯೋಜನೆಗಳಿಂದ ಸಂಪೂರ್ಣ ದೂರ ಉಳಿದಿದ್ದು, ಕುಲಶಾಸ ಅಧ್ಯಯನ ಮೂಲಕವಾದರೂ ನೈಜ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬೇಕು, ಚೆಲ್ಲುವಂತಾದರೆ ನಮಗೆ ಸಂತೋಷವಿದೆ ಎಂದರು.
ಹಿರಿಯರಾದ ಶ್ರೀಶೈಲ ದಭಾಡಿ, ಡಾ. ಪಂಡಿತಪ್ಪ ಪಟ್ಟಣ, ಶಿವಕುಮಾರ ಜುಂಜಪ್ಪನವರ, ಸುರೇಶ ಭದ್ರನ್ನವರ, ರಾಜಶೇಖರ ಮಾಲಾಪುರ, ಬಿ.ಡಿ. ಅಂಕದ, ಸುರೇಶ ಕೋಲಾರ, ಬಸವರಾಜ ಭದ್ರನ್ನವರ, ರಾಮಣ್ಣ ಭದ್ರನ್ನವರ, ಬಸಪ್ಪ ಕೊಣ್ಣೂರ, ಸುರೇಶ ಬೀಳಗಿ, ವೈ.ಟಿ. ಯಾಳಗಿ, ಮಲ್ಲಿನಾಥ ಕಕಮರಿ, ಚನಬಸಪ್ಪ ವಿಜಾಪುರ ಸೇರಿ ಕುಲಶಾಸ ವಿಭಾಗ ತಂಡದ 8 ಜನ ಸದಸ್ಯರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net