ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿ Friendly Gathering
ತುರುವೇಕೆರೆ Friendly Gathering ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸ್ನೇಹ ಟ್ರಸ್ಟ್ ನಿರ್ದೇಶಕರಾದ ನಟರಾಜು, ಉಮೇಶ್, ಶಶಿಧರ್, ರಾಜೀವ್ ಇದ್ದರು.
ತುರುವೇಕೆರೆ: ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿದರೇ ಉತ್ತಮ ಕ್ಷೇತ್ರದ ಆಯ್ಕೆ Friendly Gathering ಮಾಡಿಕೊಳ್ಳಬಹುದು ಎಂದು ಸ್ನೇಹ ಮಿಲನ ಟ್ರಸ್ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್ ತಿಳಿಸಿದರು.
ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಟ್ರಸ್ಟ್ನಿಂದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡವರು ಹಾಗೂ ಪಾಲಕರನ್ನು ಕಳೆದುಕೊಂಡ 50 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದ ಅವರು, ಹಿಂದೆ ನಾವು ಮನಚ್ಚೆಯಿಂದ ಕಷ್ಟಪಟ್ಟು ಓದಿದ ಹಿನ್ನೆಲೆಯಲ್ಲಿ ಒಬ್ಬೊಬ್ಬರೂ ಉತ್ತಮ ಹುದ್ದೆ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ಪಡೆದು ಬಡ ಮಕ್ಕಳ ಪರ ನಿಲ್ಲಿ ಎಂದರು.
ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಡಾ.ಪ್ರಸನ್ನ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪಿಯುಸಿ ಹಂತವೇ ಜೀವನದ ಮೊದಲ ಮೆಟ್ಟಿಲು. ಪಿಯುಸಿ ನಂತರವೇ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶಗಳು ತೆರೆದಿರುತ್ತವೆ ಎಂದರು.
ಖಜಾಂಚಿ ಯೋಗಾನಂದ್ ಮಾತನಾಡಿ, ಕಲಾ, ವಾಣಿಜ್ಯ, ವಿಜ್ಞಾನ ವಿಭಾಗ ಎಂಬ ಬೇಧ ಭಾವ ಮಾಡದೇ ನಿಮಗಿಷ್ಟದ ವಿಷಯದಡಿ ಸಾಧಿಸಿ ಎಂದರು.
ದ್ವೀತಿಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ 4 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.