_1780760425366.webp?w=480&auto=format%2Ccompress&fit=max)
_1780760425366.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ವಿದ್ಯಾರ್ಥಿಗಳುಜೀವನದಲ್ಲಿ ಉನ್ನತ ಸಾಧನೆ ಮಾಡಲುಮೂರು ಅಂಶಗಳನ್ನು ಪಾಲಿಸಬೇಕು.ಗುರಿ,ಸಮಯ ಮತ್ತು ಸಂಬಂಧಇವುಗಳನ್ನು ಅಳವಡಿಸಿಕೊಳ್ಳಬೇಕುಎಂದು ನ್ಯೂ ಇಂಡಿಯಾ ಗ್ರೂಪ್ಅಧ್ಯಕ್ಷ ಹಾಗೂ ಆರ್‌ಐಟಿ ಹಳೇವಿದ್ಯಾರ್ಥಿ ಹೇಮಾನ್ಶು ದೇಸಾಯಿಹೇಳಿದರು.
ರಾಮಯ್ಯಎಂಜಿನಿಯರಿಂಗ್ ಮಹಾವಿದ್ಯಾಲಯ(ಆರ್‌ಐಟಿ)ಆಯೋಜಿಸಿದ್ದವಿದ್ಯಾರ್ಥಿಗಳ ಬೀಳ್ಕೊಡುಗೆಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪದವಿಪಡೆದು ಶಿಕ್ಷಣ ಸಂಸ್ಥೆಯಿಂದಹೊರಬರುವ ವಿದ್ಯಾರ್ಥಿಗಳ ನಿಜವಾದಜೀವನ ಈಗ ಆರಂಭವಾಗುತ್ತದೆ.ಈ ಜೀವನದಲ್ಲಿಯಶಸ್ಸು ಗಳಿಸಬೇಕೆಂದರೆ ಪ್ರಮುಖವಾಗಿಮೂರು ಅಂಶಗಳನ್ನು ಅಳವಡಿಸಿಕೊಳ್ಳಬೇಕು.ಮೊದಲನೆಯದುಗುರಿ. ಆಗುರಿಯನ್ನು ಸಾಧಿಸುವ ಛಲವಿರಬೇಕು.ಎರಡನೆಯದು ಸಮಯ.ಗುರಿಯನ್ನುಮುಟ್ಟಲು ಸಮಯ ಪ್ರಜ್ಞೆ ಅತ್ಯವಶ್ಯಕ.ಮೂರನೆಯದು ಸಂಬಂಧ.ನಮ್ಮ ವ್ಯವಹಾರದನಡುವೆ ಬರುವ ಪ್ರತಿ ವ್ಯಕ್ತಿಗಳಜೊತೆಗಿನ ಬಾಂಧವ್ಯ ಕೂಡಾಮುಖ್ಯವಾಗುತ್ತದೆ.ನಾನು ಒಂದು ಸಣ್ಣಕಂಪನಿ ಆರಂಭಿಸಿದಾಗ ಮೊದಲಆರ್ಡರ್‌ಗಾಗಿ ಒಂದು ವರ್ಷಕಾಯಬೇಕಾಗಿತ್ತು.ಈ ವೇಳೆ ಸಾಕಷ್ಟುಜನರು ಈ ಕಂಪನಿ ಮುಚ್ಚಿ ಬೇರೆ ಕೆಲಸಹುಡುಕಿಕೊಳ್ಳುವಂತೆ ಸಲಹೆನೀಡಿದರು. ಆದರೆ,ನಾನು ನನ್ನ ಗುರಿಬಿಡಲಿಲ್ಲ.ತಾಳ್ಮೆಯಿಂದಅದೇ ಕೆಲಸದಲ್ಲಿ ತೊಡಗಿದ್ದೆ,ಇಂದು ನನ್ನವ್ಯವಹಾರ ಉನ್ನತ ಸ್ಥಾನದಲ್ಲಿದೆಎಂದು ಹೆಮಾನ್ಶು ವಿವರಿಸಿದರು.
ಬಿ.ಇ.,ಬಿ.ಆರ್ಕ್,ಎಂ.ಟೆಕ್,ಎಂ.ಆರ್ಕ್,ಎಂಬಿಎ,ಎಂಸಿಎ ಸೇರಿಒಟ್ಟು 1882ವಿದ್ಯಾರ್ಥಿಗಳುಪದವಿಯನ್ನು ಪಡೆದುಕೊಂಡರು.ಕೆಲವು ವಿದ್ಯಾರ್ಥಿಗಳಿಗೆಬೆಸ್ಟ್ ಸ್ಟೂಡೆಂಟ್ ಅವಾರ್ಡ್ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿಆರ್‌ಐಟಿ ಪ್ರಾಂಶುಪಾಲ ಡಾ.ಎನ್.ವಿ.ಆರ್.ನಾಯ್ಡು,ಗೋಕುಲ ಎಜುಕೇಶನ್ೌಂಡೇಶನ್ (ಜಿಇಎಫ್)ಉಪಾಧ್ಯಕ್ಷಎಂ.ಆರ್.ಜಾನಕಿರಾಮ್,ಸಲಹೆಗಾರ ಡಾ.ಕರಿಸಿದ್ದಪ್ಪ,ಮುಖ್ಯ ಕಾರ್ಯನಿರ್ವಾಹಕಡಾ. ಎಚ್.ವಿ.ಪಾರ್ಶ್ವನಾಥ್,ಆರ್‌ಐಟಿ ನಿರ್ದೇಶಕಎಂ.ಆರ್.ಸಂಪಂಗಿರಾಮಯ್ಯ,ಎಂ.ಆರ್.ರಾಮಯ್ಯ ಮತ್ತಿತರರುಉಪಸ್ಥಿತರಿದ್ದರು.