ವಿದ್ಯಾರ್ಥಿಗಳೇ, ಆತ್ಮವಿಶ್ವಾಸದಿಂದ ಮುಂದೆ ಸಾಗಿ / SARJAPUR

ಸರ್ಜಾಪುರದ ಎಸ್​.ವಿ.ಬಿ ಪಟೇಲ್​ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಗ್​ಬಾಸ್​ ಸ್ಪರ್ಧಿ ವರ್ತೂರ್​ ಸಂತೋಷ್​ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಎಸ್​.ವಿ.ಬಿ. ವಿದ್ಯಾಸಂಸ್ಥೆ ಖಜಾಂಚಿ ಎ.ಎನ್​.ನಾಗರಾಜ್​ ಶೆಟ್ಟಿ, ಸದಸ್ಯ ನಾರಾಯಣಸ್ವಾಮಿ, ಸಮಾಜಸೇವಕ ಎಚ್​.ಪಿ.ಶಿವಪ್ಪ ಇತರರು ಇದ್ದರು.
ಸರ್ಜಾಪುರದ ಎಸ್​.ವಿ.ಬಿ ಪಟೇಲ್​ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಗ್​ಬಾಸ್​ ಸ್ಪರ್ಧಿ ವರ್ತೂರ್​ ಸಂತೋಷ್​ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಎಸ್​.ವಿ.ಬಿ. ವಿದ್ಯಾಸಂಸ್ಥೆ ಖಜಾಂಚಿ ಎ.ಎನ್​.ನಾಗರಾಜ್​ ಶೆಟ್ಟಿ, ಸದಸ್ಯ ನಾರಾಯಣಸ್ವಾಮಿ, ಸಮಾಜಸೇವಕ ಎಚ್​.ಪಿ.ಶಿವಪ್ಪ ಇತರರು ಇದ್ದರು.
Published on
ಸರ್ಜಾಪುರ : ಡಿಜಿಟಲ್​ ಯುಗದಲ್ಲಿ ಇಂಟರ್​ನೆಟ್​ ಮೂಲಕ ವಿದ್ಯಾರ್ಥಿಗಳು ಜಗತ್ತಿನ ಯಾವುದೇ ಮೂಲೆಯ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಈ ಅವಕಾಶ ಸದುಪಯೋಗಪಡಿಸಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದು ಬಿಗ್​ಬಾಸ್​ ಸ್ಪರ್ಧಿ ಹಳ್ಳಿಕಾರ್​ ವರ್ತೂರು ಸಂತೋಷ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಎಸ್​.ವಿ.ಬಿ.ಪಟೇಲ್​ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭ, 2026-&27ನೇ ಸಾಲಿನ ಸಾಂಸತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ (ಎನ್​ಎಸ್​ಎಸ್​), ಸ್ಕೌಟ್​ ಮತ್ತು ಗೈಡ್ಸ್​, ಯೂತ್​ ರೆಡ್​ ಕ್ರಾಸ್​ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿ ಜೀವನವು ಅಂಕ ಗಳಿಕೆಗೆ ಸೀಮಿತವಾಗದೇ, ಉತ್ತಮ ವ್ಯಕ್ತಿತ್ವ, ಶಿಸ್ತು, ನೈತಿಕತೆ ಹಾಗೂ ಸಾಮಾಜಿಕ ಜವಾಬ್ದಾರಿ ರೂಪಿಸಿಕೊಳ್ಳುವ ಅಮೂಲ್ಯ ಹಂತ. ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಸ್ಪಷ್ಟ ಗುರಿ ಹೊಂದಿ, ಭವಿಷ್ಯದಲ್ಲಿ ಏನಾಗಬೇಕು ಎಂಬ ನಿರ್ಧಾರ ಮಾಡಿ ಅದಕ್ಕೆ ತಕ್ಕಂತೆ ಶ್ರಮಿಸಬೇಕು. ವಿದ್ಯೆಯೇ ವಿನಯದ ಮೂಲವಾಗಿದ್ದು, ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದರು.
ಪ್ರಾಂಶುಪಾಲ ಎನ್​.ಟಿ.ಶ್ರೀನಿವಾಸರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನದ ಓದು ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮರ್ಪಕ ಸಮಯ ನೀಡಬೇಕು. ಹೊಸ ವಿಷಯ ಕಲಿಯುವ ಕುತೂಹಲ ಬೆಳೆಸಿಕೊಂಡು ಶಿಕ್ಷಕರ ಮಾರ್ಗದರ್ಶನ ಪಡೆಯಬೇಕು. ಪಾಲಕರು ಹಾಗೂ ಸಹಪಾಠಿಗಳೊಂದಿಗೆ ಗೌರವಯುತವಾಗಿ ನಡೆದುಕೊಂಡು ಜೀವನದಲ್ಲಿ ಎದುರಾಗುವ ಸವಾಲುಗಳಿಂದ ಹಿಂಜರಿಯದೆ ಆತ್ಮವಿಶ್ವಾಸದಿಂದ ಮುಂದುವರಿದರೆ ಉತ್ತಮ ಫಲಿತಾಂಶ ಸಾಧಿಸಿ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬಹುದು ಎಂದು ತಿಳಿಸಿದರು.
ಕಾಲೇಜು ಆಡಳಿತ ಮಂಡಳಿಯಿಂದ ಕ್ರೀಡೆ, ಸಾಂಸತಿಕ ಚಟುವಟಿಕೆಗಳು ಹಾಗೂ ದ್ವೀತಿಯ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿ&ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅಖಿಲ ಭಾರತ ಸವೋರ್ದಯ ಮಂಡಳಿಯ ಶ್ರಮದಾನ ಶಿಬಿರದಲ್ಲಿ ಭಾಗವಹಿಸಿದ್ದ ಕಾಲೇಜಿನ ಎನ್​ಎಸ್​ಎಸ್​ ಸ್ವಯಂಸೇವಕರಾದ ತೇಜಸ್​ ರಾವ್​ ಯಶ್ವಂತ್​, ವಿ.ಮನೋಜ್​, ಎಸ್​.ತೇಜಸ್​ ಹಾಗೂ ದುರ್ಗಾಪ್ರಸಾದ್​ ಅವರಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ವಿದ್ಯಾರ್ಥಿ&ವಿದ್ಯಾರ್ಥಿನಿಯರು ವಿವಿಧ ಸಾಂಸತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹೊಳೆನರಸೀಪುರ ಸರ್ಕಾರಿ ಕಾನೂನು ಕಾಲೇಜಿನ ಪ್ರಾಧ್ಯಾಪಕ ಕೆ.ಪ್ರತಾಪ್​, ರಾಷ್ಟ್ರೀಯ ಯುವ ಯೋಜನೆ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಎನ್​ಎಸ್​ಎಸ್​ ಕಾರ್ಯಕ್ರಮ ಅಧಿಕಾರಿ ಬಿ.ಆರ್​.ಪ್ರೇಮಾ, ಉಪನ್ಯಾಸಕರಾದ ಕವನಾ, ಚಂದ್ರಶೇಖರ್​, ರುದ್ರಾಣಿ, ರೆಡ್ಡೆಪ್ಪ, ರಂಗನಾಥ್​, ಪ್ರತಿಭಾ, ಪ್ರೀತಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net