ವಿದ್ಯಾರ್ಥಿಗಳು ಆಸೆ ಆಕಾಂಕ್ಷಿಗಳಿಗೆ ಬಲಿಯಾಗದಿರಿ

Students, don't fall prey to ambition.
Students, don't fall prey to ambition.
Published on
ದೊಡ್ಡೇರಿ: ವಿದ್ಯೆಯು ಸಾಧಕನ ಸ್ವತ್ತು, ಸೋವಾರಿಯ ಸ್ವತ್ತಲ್ಲ. ಪುಸ್ತಕವು ಸರಸ್ವತಿಯಾಗಿದೆ ಮತ್ತು ಜ್ಞಾನ, ಶಿಕ್ಷಣ, ಮತ್ತು ಸಾಹಿತ್ಯದ ಸಂಕೇತವಾಗಿದೆ ಎಂದು ವಕೀಲ ಎಂ.ಶಿವಣ್ಣ ತಿಳಿಸಿದರು.
ಹೋಬಳಿಯ ದಂಡಿನದಿಬ್ಬ ಗ್ರಾಮದ ಪ್ರಾರ್ಥನಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಬಸವೇಶ್ವರ ವಿದ್ಯಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಶ್ರೀ ವ್ನಿೇಶ್ವರ ಪ್ರತಿಮೆ ಹಾಗೂ ಸರಸ್ವತಿ ವಿಗ್ರಹಗಳ ಪ್ರತಿಷ್ಠಾಪನ, ಪ್ರಾರ್ಥನಾ ಪಬ್ಲಿಕ್ ಸ್ಕೂಲ್ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಪುಸ್ತಕವನ್ನು ಹಿಡಿದು ತಲೆತಗ್ಗಿಸಿ ಓದಿದರೆ ಮುಂದಿನ ದಿನಗಳಲ್ಲಿ ಸವಾಜದಲ್ಲಿ ತಲೆಯೆತ್ತಿ ಗುರುತಿಸುವಂತೆ ವಾಡುತ್ತದೆ ಎಂದರು.
ವಿದ್ಯಾರ್ಥಿಗಳು ಯಾವುದೇ ಆಸೆ ಆಕಾಂಕ್ಷಿಗಳಿಗೆ ಬಲಿಯಾಗದೆ, ಗುರು-ಹಿರಿಯರ ವಾರ್ಗದರ್ಶನದಲ್ಲಿ ಬೆಳೆದಾಗ ಒಳ್ಳೆಯ ಗೌರವ ಸಿಗುತ್ತದೆ ಎಂದರು.
ವಕೀಲರಾದ ಶಿವನಂದಪ್ಪ, ಜಿ.ಕೃಷ್ಣಮೂರ್ತಿ, ಶಾಲಾ ಆಡಳಿತಾಧಿಕಾರಿ ಶಶಿಧರ್, ಮುಖ್ಯಶಿಕ್ಷಕಿ ಭಾಗ್ಯಮ್ಮ, ದೇವರಾಜು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net