ನಂತರ ಮಾತನಾಡಿದ ಅವರು, ಶಳ್ಳಗಿ ಮತ್ತು ನಾವದಗಿ ಗ್ರಾಮದಿಂದ ನಿತ್ಯ ತಾಳಿಕೋಟೆ ಪಟ್ಟಣದಲ್ಲಿನ ಶಾಲಾ ಕಾಲೇಜುಗಳಿಗೆ ನೂರಾರು ವಿದ್ಯಾರ್ಥಿಗಳು ಆಗಮಿಸುತ್ತಾರೆ. ಆದರೆ ಶಾಲೆಯ ಸಮಯ 8 ಗಂಟೆಗೆ ಒಂದು ಬಸ್ ಆಗಮಿಸುತ್ತಿದ್ದು, ಹೆಚ್ಚುವರಿ ಬಸ್ ಇಲ್ಲದ ಕಾರಣ ಪಟ್ಟಣದ ಅರ್ಧದಷ್ಟು ವಿದ್ಯಾರ್ಥಿಗಳು ಶಾಲೆಗೆ ತೆರಳಲು ತೊಂದರೆಯುಂಟಾಗುತ್ತಿದ್ದು, ಈ ವಿಷಯ ಸಾಕಷ್ಟು ಭಾರಿ ಬಸ್ ಘಟಕದ ವ್ಯವಸ್ಥಾಪಕರಿಗೆ ತಿಳಿಸಿದರೂ ಪ್ರಯೋಜನಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.