ಬಸವೇಶ್ವರ ಬ್ಯಾಂಕಿನಿಂದ ವಿದ್ಯಾರ್ಥಿಗಳಿಗೆ ಸತ್ಕಾರ

ಬಸವೇಶ್ವರ ಬ್ಯಾಂಕಿನ ಸಿಬ್ಬಂದಿ ಮಕ್ಕಳಿಗೆ ಸತ್ಕಾರ
ಬಸವೇಶ್ವರ ಬ್ಯಾಂಕಿನ ಸಿಬ್ಬಂದಿ ಮಕ್ಕಳಿಗೆ ಸತ್ಕಾರ
Published on

ಪ್ರಮುಖ ಮುಖ್ಯಾಂಶಗಳು

  • ನಿಪ್ಪಾಣಿಲಿ ವಿದ್ಯಾರ್ಥಿಗಳಿಗೆ ಸತ್ಕಾರ
  • ಬಸವೇಶ್ವರ ಬ್ಯಾಂಕಿನಿಂದ ಸಿಬ್ಬಂದಿ ಮಕ್ಕಳಿಗೆ ಸತ್ಕಾರ
  • ಚಿಂಚಣಿಯ ಶಿವಕುಮಾರ ದೇವರ ಸಾನಿಧ್ಯ
ಶಿಕ್ಷಕರು ವಿದ್ಯಾರ್ಥಿಗಳ ಜೀವನದ ಬೆಳಕು
| ಚಿಂಚಣಿ ಮಠದ ಶಿವಪ್ರಸಾದ ದೇವರು ಅಭಿಮತ | ಶಿಕ್ಷಕರ ದಿನಾಚರಣೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಶಿಕ್ಷಕರು ಕೇವಲ ಜ್ಞಾನ ನೀಡುವ ಶಕ್ತಿ ಮಾರ್ಗದರ್ಶಕರಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ, ಅವರ ಕನಸುಗಳಿಗೆ ಮತ್ತು ದಿಕ್ಕು ನೀಡುವ ದೀಪಸ್ತಂಭಗಳಾಗಿದ್ದಾರೆ ಎಂದು ತಾಲ್ಲೂಕಿನ ಚಿಂಚಣಿ ಅಲ್ಲಮಪ್ರಭು ಮಠದ ಶಿವಪ್ರಸಾದ ದೇವರು ಅಭಿಮತ ವ್ಯಕ್ತ ಪಡಿಸಿದರು.
ನಿಪ್ಪಾಣಿ ಪಟ್ಟಣದ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ ವತಿಯಿಂದ ಈಚೆಗೆ ಬ್ಯಾಂಕಿನಂಗಣದಲ್ಲಿ ಶಿಕ್ಷಕ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸಂಸ್ಥೆಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶಿರ್ವಚನ ನೀಡಿದ್ದಾರೆ.
ಶಿಕ್ಷಕರು ಯಾವುದೇ ಭೇದಬಾವ ಮಾಡದೆ, ಶಿಸ್ತು, ಸಂಸ್ಕಾರ ಸೇರಿದಂತೆ.ಪ್ರತಿಯೊಬ್ಬರು ಶಿಕ್ಷಕರಿಗೆ ಗೌರವ ಸಲ್ಲಿಸುತ್ತಾರೆ ಅಗತ್ಯವಾಗಿದೆ.ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಸದಸ್ಯರು ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಸಿ.ಬಿ.ಕುರಬೇಟ ಮಾತನಾಡಿ ಕಳೆದ ಐದು ವರ್ಷಗಳಿಂದ ಸಂಸ್ಥೆಯು ಸ್ಪರ್ಧೆ ನಡೆಯುತ್ತಿದೆ. ಬಸವೇಶ್ವರರ ವಿಚಾರಗಳಂತೆ ಇಡೀ ಮಾನವ ಕುಲ ಒಂದೇ ಎಂಬ ಭಾವನೆಯಿಂದ, ಮನುಷ್ಯ-ಮನುಷ್ಯರ ನಡುವೆ ಪ್ರೀತಿ, ವಿಶ್ವಾಸ, ದಯೆ ಹೆಚ್ಚಾಗಬೇಕು, ಬಡ ಜನರ ಕಲ್ಯಾಣವಾಗಬೇಕು ಎಂದು ಸಂಸ್ಥೆಯ ಧ್ಯೇಯವಾಗಿದೆ.
ಇದೇ ವೇಳೆ ವಿದ್ಯಾರ್ಥಿಗಳಿಂದ ವಚನ ಕಂಠಪಾಠ, ಭಾಷಣ ಮತ್ತು ವೇಷಭೂಷಣ ಸ್ಪರ್ಧೆ ಹಾಗೂ ಆದರ್ಶ ಶಿಕ್ಷಕರ ಸನ್ಮಾನ ಸಮಾರಂಭ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಕಿಶೋರ ವಾಲಿ, ನಿರ್ದೇಶಕರಾದ ಎಸ್. ಆರ್. ಪಾಟೀಲ, ಮಹೇಶ್ ಬಾಗೇವಾಡಿ, ಸುರೇಶ್ ಶೆಟ್ಟಿ, ಶ್ರೀಕಾಂತ್ ಪರಮನೆ, ದಿನೇಶ ಪಾಟೀಲ, ರಾಜೇಶ ಪಾಟೀಲ, ಪುಷ್ಪಾ ಕುರಬೇಟ, ವಿಜಯ ಶೆಟ್ಟಿ, ಸುವರ್ಣಾ ಪಟ್ಟಣಶೆಟ್ಟಿ, ಸಿಐಒ ಎಸ್.ಕೆ. ಅದನಾವರ್, ಮಹೇಶ್ ಶೆಟ್ಟಿ, ಸೂರಜ್ ಘೋಡಕೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net