ರೈಲ್ವೆ ್ಲೆ$ಓವರ್ ನಿರ್ಮಿಸಲು ಮನವಿ : ಹತ್ತಾರು ಗ್ರಾಮಗಳನ್ನು ಸಂಪರ್ಕಿಸುವ ಐವಿಸಿ (ಇನರ್ ಕನಕ್ಟಿವಿಟಿ ರೋಡ್) ರಸ್ತೆ ರಾಷ್ಟ್ರೀಯ ಹೆದ್ದಾರಿ ಸಂಪರ್ಕದ ಬಳಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ನಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ಮೊದಲಿಂದ ಇದ್ದ ರೈಲ್ವೆ ಹಳಿ ರಸ್ತೆಯನ್ನು ಮುಚ್ಚಿರುವುದರಿಂದ ಜನರು ಸುತ್ತಿಕೊಂಡು ಬರಲಾಗದೆ ರೈಲು ಹಳಿ ದಾಟಲು ಯತ್ನಿಸಿ ವರ್ಷಕ್ಕೆ ಇಬ್ಬರೂ ಮೂವರು ರೈಲಿಗೆ ಸಿಲುಕಿ ಮೃತಪಡುತ್ತಿದ್ದಾರೆ. ಮೂರು ವರ್ಷದ ಹಿಂದೆ 11 ವರ್ಷದ ಸಂಜಯ್ ಎಂಬಾತ ಇದೇ ರೀತಿ ಮೃತಪಟ್ಟಿದ್ದು, ಅಂದಿನಿಂದ ಇಂದಿನವರೆಗೂ ಇಲ್ಲಿ ಫೈಓವರ್ಗಾಗಿ ಕೇಂದ್ರಕ್ಕೆ, ರೈಲ್ವೇ ಇಲಾಖೆ, ಮಾನವಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿ ಒತ್ತಡ ಹಾಕುತ್ತಿದ್ದೇವೆ. ಇಲ್ಲಿ ಮೇಲ್ಸೇತುವೆಗೆ ಆದೇಶವಾಗಿದೆ ಎನ್ನುತ್ತಾರೆ, ಆದರೆ ಅಲ್ಲಿಯವರೆಗೂ ಇನ್ನೆಷ್ಟು ಜೀವಗಳು ಬಲಿಯಾಗುತ್ತವೆಯೋ ಎಂದು ಟಿ.ಹೋಸಹಳ್ಳಿಯ ಸಂತೋಷ್ ಅಸಮಾಧಾನ ಹೊರಹಾಕಿದರು.