ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಮೂಲತಃ ಕೆ. ಆರ್ .ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದ ಸುವರ್ಣ, ಬಸವೇಗೌಡ ದಂಪತಿ ಪುತ್ರಿ ಶ್ರೀರಕ್ಷಾ, ಕಾಲೇಜಿನ ಪಕ್ಕದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಎರಡು ವರ್ಷದಿಂದ ಪ್ರವೇಶ ಪಡೆದಿದ್ದಳು. ಬುಧುವಾರ ಪಾಲಕರು ನಿಲಯಕ್ಕೆ ಬಂದು ಮಗಳ ಯೋಗಕ್ಷೇಮ ವಿಚಾರಿಸಿ ತೆರಳಿದ ನಂತರ ಸಂಜೆ 5.30ರ ವೇಳೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಕಾರಣ ತಿಳಿದು ಬಂದಿಲ್ಲ. ಘಟನೆಯಿಂದ ನಿಲಯದ ವಿದ್ಯಾರ್ಥಿಗಳು ಆತಂಕಗೊಂಡಿದ್ದಾರೆ.