ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಿ ಬೆಂಗಳೂರು ದಣ ವಿಧಾನ ಸಭಾ ೇತ್ರದ ಜಿಗಣಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಮುಖಂಡರಾದ ವಿನೋದ್, ಮುರಳಿ, ಮಧುಗೌಡ, ಜಿ.ಮಧು, ಹರ್ಷ, ಮಂಜುನಾಥ್ರೆಡ್ಡಿ, ಮಂಜುನಾಥ್, ಪಿಲ್ಲಪ್ಪ, ಯಾರಬ್ ಪಾಷ, ಗಣೇಶ್, ವಿನೋದ್, ಕುಶಾಲ್ ಮತ್ತಿತರರು ಭಾಗವಹಿಸಿದ್ದರು.
ಆನೇಕಲ್ : ಬೆಲೆ ಏರಿಕೆ ಹಾಗೂ ಕೇಂದ್ರ ಸರ್ಕಾರದ ಧೋರಣೆಗಳನ್ನು ಖಂಡಿಸಿ ಬೆಂಗಳೂರು ದಣ ವಿಧಾನ ಸಭಾ ೇತ್ರದ ಜಿಗಣಿ ವೃತ್ತದಲ್ಲಿ ಬುಧವಾರ ಜಿಗಣಿ ಪುರಸಭೆ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಿಗಣಿ ಪುರಸಭೆ ಸದಸ್ಯ ್ಯಾನ್ಸಿ ರಮೇಶ್ ಮಾತನಾಡಿ, ಭಾರತದ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರೋಅಥವಾ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪೋ ಎಂಬುದೇ ಗೊತ್ತಾಗುತ್ತಿಲ್ಲ. ದೇಶದ ವಿಷಯದಲ್ಲಿ ಮೋದಿ ಮೂಗು ತೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಪುರಸಭೆ ಸದಸ್ಯ ಆನಂದ್ ಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಹೇಳಿದ್ದರು. ಆದರೆ, ಇದುವರೆಗೆ ಒಬ್ಬರಿಗೆ ಉದ್ಯೋಗ ಕೊಟ್ಟಿಲ್ಲ. ಜತೆಗೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ 56 ರೂ ಇದ್ದ ಅಮೆರಿಕದ ಡಾಲರ್ ಈಗ 100 ರೂ. ಸನಿಹಕ್ಕೆ ತಲುಪಿದೆ. ಶೃಂಗಸಭೆಯಲ್ಲಿ ಚೀನಾ ತಯಾರಿಸಿದ ರೋಬೋ ನಾಯಿಯನ್ನು ತಂದು ಭಾರತದ್ದು ಎಂದು ಹೇಳಿ ವಿದೇಶದಲ್ಲಿ ಮಾನ ಮರ್ಯಾದೆ ಹರಾಜು ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಸಂಪಂಗಿರಾಜ್ ಮಾತನಾಡಿ, ದೇಶದಲ್ಲಿ ರೈತರು ಬೆಳೆದ ಪದಾರ್ಥಗಳನ್ನು ಅಮೆರಿಕಾಗೆ ಶೇ.20 ಸುಂಕ ಕೊಟ್ಟು ಮಾರಾಟ ಮಾಡಬೇಕು. ಅದೇ ಅಮೆರಿಕಾದ ವಸ್ತುಗಳು, ಆಹಾರ ಪದಾರ್ಥಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲು ಯಾವುದೇ ತೆರಿಗೆ ವಿಧಿಸುವುದಿಲ್ಲ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.