ಹುಸ್ಕೂರು ಜಾತ್ರೆಗೆ ಕಠಿಣ ನಿಯಮ / ANEKAL

ಆನೇಕಲ್​ ತಾಲೂಕಿನ ಬೊಮ್ಮಸಂದ್ರ ಸಮೀಪದ ಎಸ್​ಎ್​ಎಸ್​ ಶಾಲೆಯಲ್ಲಿ ಸೋಮವಾರ ಹುಸ್ಕೂರು ಮದ್ದೂರಮ್ಮ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಎಲೆಕ್ಟ್ರಾನಿಕ್​ ಸಿಟಿ ಉಪವಿಭಾಗದ ಎಸಿಪಿ ಮಾಡಿ ಸತೀಶ್​, ಬೆಂಗಳೂರು ದಣ ಸಂಚಾರ  ಟಿಸಿಪಿ ಡಾ.ಗೋಪಾಲ್​.ಎಂ ಬ್ಯಾಕೋಡ್​, ಎಎಸ್​ಪಿ ವೆಂಕಟೇಶ ಪ್ರಸನ್ನ, ತಹಸೀಲ್ದಾರ್​ ಶಶಿಧರ್​ ಮಾಡ್ಯಾಳ್​, ತಾಪಂ ಇಒಮಂಜುನಾಥ್​, ಹೆಬ್ಬಗೋಡಿ ಪೊಲೀಸ್​ ಠಾಣ ಇನ್​ಸ್ಪೆಕ್ಟರ್​ ಸೋಮಶೇಖರ್​, ಮದ್ದೂರಮ್ಮ ದೇವಾಲಯ ಆಡಳಿತ ಮಂಡಳಿ ಅಧ್ಯ ಪಾಪಣ್ಣ  ಇದ್ದರು.
ಆನೇಕಲ್​ ತಾಲೂಕಿನ ಬೊಮ್ಮಸಂದ್ರ ಸಮೀಪದ ಎಸ್​ಎ್​ಎಸ್​ ಶಾಲೆಯಲ್ಲಿ ಸೋಮವಾರ ಹುಸ್ಕೂರು ಮದ್ದೂರಮ್ಮ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಎಲೆಕ್ಟ್ರಾನಿಕ್​ ಸಿಟಿ ಉಪವಿಭಾಗದ ಎಸಿಪಿ ಮಾಡಿ ಸತೀಶ್​, ಬೆಂಗಳೂರು ದಣ ಸಂಚಾರ ಟಿಸಿಪಿ ಡಾ.ಗೋಪಾಲ್​.ಎಂ ಬ್ಯಾಕೋಡ್​, ಎಎಸ್​ಪಿ ವೆಂಕಟೇಶ ಪ್ರಸನ್ನ, ತಹಸೀಲ್ದಾರ್​ ಶಶಿಧರ್​ ಮಾಡ್ಯಾಳ್​, ತಾಪಂ ಇಒಮಂಜುನಾಥ್​, ಹೆಬ್ಬಗೋಡಿ ಪೊಲೀಸ್​ ಠಾಣ ಇನ್​ಸ್ಪೆಕ್ಟರ್​ ಸೋಮಶೇಖರ್​, ಮದ್ದೂರಮ್ಮ ದೇವಾಲಯ ಆಡಳಿತ ಮಂಡಳಿ ಅಧ್ಯ ಪಾಪಣ್ಣ ಇದ್ದರು.
Published on
ಆನೇಕಲ್​ : ತಾಲೂಕಿನ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯ ತೇರುಗಳು 80 ಅಡಿಗೆ ಸೀಮಿತವಾಗಿ ಕಟ್ಟಬೇಕು ಎಂದು ಜಿಲ್ಲಾಧಿಕಾರಿ ಜಗದೀಶ್​ ಹೇಳಿದರು.
ಆನೇಕಲ್​ ತಾಲೂಕಿನ ಬೊಮ್ಮಸಂದ್ರ ಸಮೀಪದ ಎಸ್​ಎ್​ಎಸ್​ ಶಾಲೆಯಲ್ಲಿ ಸೋಮವಾರ ಹುಸ್ಕೂರು ಮದ್ದೂರಮ್ಮ ಜಾತ್ರೆ ಅಂಗವಾಗಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಾತ್ರೆ ಕುರಿತಂತೆ ಹಲವು ತೀರ್ಮಾನ ತೆಗೆದುಕೊಳ್ಳಲಾಯಿತು. ಕಳೆದ ಬಾರಿ ಹುಸ್ಕೂರು ಮದ್ದೂರಮ್ಮ ಜಾತ್ರೆಯ ವೇಳೆ ಎರಡು ತೇರುಗಳು ಬಿದ್ದು ಸಾವು ನೋವುಗಳು ಸಂಭವಿಸಿದ ಹಿನ್ನೆಲೆ ಹಲವು ವಿಚಾರಗಳ ಚರ್ಚೆ ನಡೆಯಿತು.
ತೇರು ಸಾಗುವ ಸಂದರ್ಭದಲ್ಲಿ ಯಾವುದೇ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ. ಕಳೆದ ವರ್ಷಎತ್ತರದ ತೇರು(ಕುರ್ಜು) ಬಿದ್ದು ಸಾವು ನೋವುಸಂಭವಿಸಿದಂತೆ ಮತ್ತೆ ಅಂಥ ಟನೆ ಮರುಕಳಿಸದಂತೆ ಕಟ್ಟೆಚ್ಚರ ನಿಯಮ ಪಾಲಿಸಲು ಪೊಲೀಸರು ಹಾಗೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿ ತಿಳಿಸಿದರು.
ಹಲವು ನಿಯಮಗಳು : ಮುಖ್ಯವಾಗಿ ಕಳಸ ಬಾವುಟ ಸೇರಿ 80 ಅಡಿ ಎತ್ತರದ ತೇರು ತರ ವಿನ್ಯಾಸದಂತೆ ಇರಬೇಕು. ಎತ್ತುಗಳ&ಬಂಡಿಗಳನ್ನು ಕಟ್ಟುವ ವಿಚಾರದಲ್ಲಿ ಸೌಹಾರ್ದ ಮೆರೆಯಬೇಕು. ರಥದ ಗಾಲಿ ನಿಯಂತ್ರಿಸುವ ಕಡಾಣಿಗಳು, ನಟ್ಟು ಬೋಲ್ಟು ಬಿಗಿಯಾಗಿರುವುದನ್ನು ಗಮನಿಸಬೇಕು, ಕುರ್ಜುಗಳು ನಿಗದಿತ ನಿಧಾನ ವೇಗ ಕಾಪಾಡಿಕೊಂಡು ಪ್ರತಿ ಕುರ್ಜು ಬರುವ ಸಮಯದ ಅಂತರ ಹೆಚ್ಚಿರಬೇಕು. ರಥದಲ್ಲಿ ಮೂವರಷ್ಟೇ ಇರಬೇಕು. ರಥದಿಂದ 25 ಅಡಿ ಅಂತರದಲ್ಲಿ ಭಕ್ತರಿರಬೇಕು. ತೇರಿನ ಹಿಂದೆ&ಮುಂದೆ ಕ್ರೇನ್​ ಇರಬೇಕು.ರಸ್ತೆಯಲ್ಲಿ ವಿದ್ಯುತ್​ ತಂತಿ, ಮರಗಳ ಅಡ್ಡ ಇಲ್ಲದಿರುವ ಮಾರ್ಗದಲ್ಲಿ ಚಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ರಥದ ಮೇಲಿನ ತುದಿಯಿಂದ ನಾಲ್ಕು ಕಡೆ ನೈಲಾನ್​ ದಪ್ಪ ಹಗ್ಗ ಕಟ್ಟಿ ಗಾಳಿಯ ವೇಗಕ್ಕೆ ತಕ್ಕಂತೆರಥ ವಾಲದಂತೆ ಗಟ್ಟಿಮುಟ್ಟಾದ ವ್ಯಕ್ತಿಗಳನ್ನು ನೇಮಿಸಬೇಕು ಸೂಚಿಸಲಾಗಿದೆ.
ರಥ ಕಟ್ಟುವ ಗ್ರಾಮಸ್ಥರು ಲೋಕೋಪಯೋಗಿ, ಬೆಸ್ಕಾಂ, ಅರಣ್ಯ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲೂಕು ಕಚೇರಿಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯಲು ಹೆಬ್ಬಗೋಡಿಯ ಪೊಲೀಸ್​ ಠಾಣೆಯಲ್ಲಿ ಏಕ ಗವಾಯನ್ನು ತೆರೆಯಲಾಗಿದ್ದು. ಜಾತ್ರೆಯ 15 ದಿನ ಮುಂಚಿತವಾಗಿ ಪಡೆಯಬೇಕು ಎಂದು ಡಿಸಿ ತಿಳಿಸಿದರು.ಎಲೆಕ್ಟ್ರಾನಿಕ್​ ಸಿಟಿ ಉಪವಿಭಾಗದ ಡಿಸಿಪಿ ನಾರಾಯಣ ಮಾತನಾಡಿ, ಜಾತ್ರೆಗೆ ಯಾವುದೇ ಅಡೆತಡೆಗಳು ಎದುರಾಗಬಾರದು ಎಂದು ಕೆಲವು ಕ್ರಮ ತೆಗೆದುಕೊಂಡಿದ್ದು, ಸಹಕಾರ ನೀಡಬೇಕು ಎಂದರು.
ಗಮನ ಸೆಳೆದಿದ್ದ ವಿಜಯವಾಣಿ : ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಕಳೆದ ಬಾರಿ ನಡೆದ ಅವಡಗಳ ಬಗ್ಗೆ "ವಿಜಯವಾಣಿ' ವರದಿ ಮಾಡಿತ್ತು. ಈ ಬಾರಿ 80 ಅಡಿಗಳಿಗೆ ತೇರುಗಳು ಸೀಮಿತ ಎಂದು ಗಮನ ಸೆಳೆದಿತ್ತು. ಅಂತೆಯೇ, ಈಗ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳು ಅದೇ ರೀತಿ ತೀರ್ಮಾನ ಮಾಡಿದ್ದಾರೆ.

ಭಕ್ತರಿಗೆ ಊಟ,ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಟ್ರಾಫಿಕ್​ ಸಮಸ್ಯೆ ಎದುರಾಗದಂತೆ ಪೊಲೀಸರೊಂದಿಗೆ ಸ್ಥಳಿಯರ ಸಹಕಾರ ಸೇರಿದಂತೆ ಜಿಲ್ಲಾಧಿಕಾರಿಗಳ ನಿರ್ದೇಶನವನ್ನು ಪಾಲಿಸಿ, ತೇರನ್ನು ಸೀಮಿತಗೊಳಿಸಿದ ಅಂತರಕ್ಕೆ ಕಟ್ಟಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net