ಸೂರ್ಯನಿಗೇ ಬೀದಿ ದೀಪಗಳ ಸವಾಲು!

Street lights challenge the sun itself!
Street lights challenge the sun itself!
Published on
ಪಾತಪಾಳ್ಯ: ರೇಚನಾಯನಪಲ್ಲಿ ಗ್ರಾಮದಲ್ಲಿ ತಿಂಗಳಿನಿಂದ ನಿರಂತರವಾಗಿ ಹಗಲಲ್ಲಿ ಬೀದಿ ದೀಪಗಳು ಬೆಳಗುತ್ತಿವೆ. ಇವುಗಳನ್ನು ನೋಡಿ ಹಲವು ಬಾರಿ ಸ್ಥಳಿಯರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
"

ರೇಚನಾಯಕನಪಲ್ಲಿ ಗ್ರಾಮದಲ್ಲಿ ವಿದ್ಯುತ್​ ಕಂಬಗಳಿಗೆ ಡಿಪಿ ಸ್ವಿಚ್​ ಅಳವಡಿಸಿದರೆ ಪೋಲಾಗುತ್ತಿರುವ ವಿದ್ಯುತ್​ ನಿಯಂತ್ರಿಸಬಹುದು.

> ಮದ್ದಿರೆಡ್ಡಿ, ಸ್ಥಳಿಯ

ನಾರೇಮದ್ದೇಪಲ್ಲಿ ಗ್ರಾಪಂ ವ್ಯಾಪ್ತಿಯ ರೇಚನಾಯಕನಹಳ್ಳಿಯಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, 600ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗಲ್ಲಿಗೊಂದರಂತೆ ಗ್ರಾಮದಲ್ಲಿ 30ಕ್ಕೂ ಹೆಚ್ಚು ವಿದ್ಯುತ್​ ಕಂಬ ಅಳವಡಿಸಿದ್ದು, ಪ್ರತಿಯೊಂದು ಕಂಬಕ್ಕೂ ವಿದ್ಯುತ್​ ಬಲ್ಬ್​ ಅಳವಡಿಸಲಾಗಿದೆ. ವಿದ್ಯುತ್​ ಕಂಬಗಳಿಗೆ ಡಿಪಿ ಸ್ವಿಚ್​ ಅಳವಡಿಸದ ಕಾರಣ ಬೀದಿ ದೀಪಗಳು ಹಗಲಲ್ಲೂ ಬೆಳಗಿ ವಿದ್ಯುತ್​ ಪೋಲಾಗುತ್ತಿದೆ. ಇದರಿಂದ ಗ್ರಾಪಂ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.
"

ರೇಚನಾಯಕನಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ವಿದ್ಯುತ್​ ಕಂಬಗಳಿಗೆ ಡಿಪಿ ಸ್ವಿಚ್​ ಅಳವಡಿಸಲು ಕ್ರಮ ತೆಗೆದುಕೊಳ್ಳಲಾಗುವುದು.

> ಶಂಕರಪ್ಪ, ಪಿಡಿಒ, ಗ್ರಾಪಂ ನಾರೇಮದ್ದೇಪಲ್ಲಿ

ಪ್ರತಿ ದಿನ ಪಂಚಾಯಿತಿ ಅಧಿಕಾರಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ, ಗಮನ ಹರಿಸುತ್ತಿಲ್ಲ. ಪೋಲಾಗುತ್ತಿರುವ ವಿದ್ಯುತ್​ ನಿಯಂತ್ರಿಸಿದರೆ ಗ್ರಾಮ ಪಂಚಾಯಿತಿಗೆ ಆಗುತ್ತಿರುವ ಆರ್ಥಿಕ ಹೊರೆ ಕಡಿಮೆಯಾಗಿ ಸಿಬ್ಬಂದಿ ವೇತನ ನೀಡಲು ಅನುಕೂಲವಾಗುತ್ತದೆ. ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿಗಳು ವಿದ್ಯುತ್​ ಕಂಬಗಳಿಗೆ ಡಿಪಿ ಸ್ವಿಚ್​ ಅಳವಡಿಸಿ ವಿದ್ಯುತ್​ ಪೋಲಾಗದಂತೆ ನಿಯಂತ್ರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net