ಬಾಲ್ಯ ವಿವಾಹ ತಡೆಗೆ ಮುಂದಾಗಿ

ಬಾಲ್ಯ ವಿವಾಹ ತಡೆಯಲು ಮುಂದಾಗಿ: ಸುಗಂಧಾ ಕರೆ
ಬಾಲ್ಯ ವಿವಾಹ ತಡೆಯಲು ಮುಂದಾಗಿ: ಸುಗಂಧಾ ಕರೆ
Published on

ಪ್ರಮುಖ ಮುಖ್ಯಾಂಶಗಳು

  • ಬಾಲ್ಯ ವಿವಾಹ ತಡೆಗೆ ಮುಂದಾಗಿ
  • ಹಲಗಾದಲ್ಲಿ ನಡೆದ ಮಕ್ಕಳ ದೌರ್ಜನ್ಯ ವಿರೋಧಿ ದಿನಾಚರಣೆ
  • ಸುರಕ್ಷಿತ ಗ್ರಾಮ ಕೈಪಿಡಿ ಹಂಚಿಕೆ

ಬಾಲ್ಯವಿವಾಹ ಸಮಾಜಕ್ಕೆ ಮಾರಕ
| ಸಲಹೆಗಾರ್ತಿ ಸುಗಂಧಾ ಅಳ್ಳಟ್ಟಿ ಹೇಳಿಕೆ | ಮಕ್ಕಳ ಹಕ್ಕುಗಳ ಕುರಿತು ಜಾಗೃತಿ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:

ಮಕ್ಕಳ ಕಳ್ಳ ಸಾಗಾಣಿಕೆ ಹಾಗೂ ಬಾಲ್ಯವಿವಾಹ ಸಮಾಜಕ್ಕೆ ಮಾರಕವಾಗಿದೆ ,ಮಕ್ಕಳ ಮೇಲಿನ ದೌರ್ಜನ್ಯ, ಅತ್ಯಾಚಾರ, ಅಥವಾ ಯಾವುದೇ ರೀತಿಯ ಶೋಷಣೆ ಕಂಡು ಬಂದಲ್ಲಿ ತಕ್ಷಣ ಸಂಭಂದಿಸಿದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಶಕ್ತಿ ಸದನದ ಸಲಹೆಗಾರ್ತಿ ಸುಗಂಧಾ ಅಳ್ಳಟ್ಟಿ ಹೇಳಿದರು.
ತಾಲೂಕಿನ ಹಲಗಾ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈದಾರಾಬಾದ್ ಆಪರೇಷನ್ ರೆಡ್ ಅಲರ್ಟ, ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಇವರದು ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಮಕ್ಕಳ ಕಳ್ಳ ಸಾಗಾಣಿಕೆ, ಬಾಲ್ಯವಿವಾಹ, ಪೋಕ್ಸೋ ಕಾಯಿದೆ, ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಅವರು ಪ್ರದರ್ಶಿಸುವ ಕಾರ್ಯಕ್ರಮದಲ್ಲಿ.
ಕ್ಷೇತ್ರ ಸಂಯೋಜಕರಾದ ಶಂಕರ ಕತ್ತಿ ಮಾತನಾಡಿ ಮಕ್ಕಳ ಹಕ್ಕುಗಳು, ಶಿಕ್ಷಣದ ಹಾಗೂ ಸುರಕ್ಷಿತ ಬಾಲ್ಯ ನಿರ್ಮಾಣದಲ್ಲಿ ಕಡ್ಡಾಯ,ಶಿಕ್ಷಕರು ಮತ್ತು ಮಹತ್ವ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಇದ್ದೇ ವೇಳೆ ಮಕ್ಕಳಿಗೆ ಸುರಕ್ಷಿತ ಗ್ರಾಮ ಕೈಪಿಡಿಯನ್ನು ನೀಡಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಅಲಾಬಾದಿ,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ವೇತಾ ಡಿ.ಆರ್, ಕಾರ್ಯದರ್ಶಿ ಜೆ.ಎ ಫರ್ನಾಂಡಿಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net