ಆಶಾ ಕಾರ್ಯಕರ್ತೆಯರು ಹಳ್ಳಿಗಳಿಗೆ ಭೇಟಿ ನೀಡಿದಾಗ ಜನರಿಗೆ ಬಿಸಿಲಿನ ಬೇಗೆ ಬಗ್ಗೆ ತಿಳಿಸಿ ಎಚ್ಚರ ವಹಿಸಬೇಕೆಂದು ತಿಳಿಸಬೇಕು. ಸಾಧ್ಯವಾದಷ್ಟು ಮನೆಗಳಲ್ಲಿ ಇರುವಂತೆ ತಿಳಿಸಿ. ರೈತರು, ಕಟ್ಟಡ, ಇತರ ಕಾಮಗಾರಿ ನಡೆಸುವ ಕಾರ್ಮಿಕರು ಬೆಳಗ್ಗೆ 11ರವರೆಗೆ ಮತ್ತು ಸಂಜೆ 4ರ ನಂತರ ಕೆಲಸ ಮಾಡಬೇಕು. ಹೊರಗೆ ಹೋಗಬೇಕಾದ ಅನಿವಾರ್ಯತೆ ಇದ್ದರೆ ಕೊಡೆ, ಪಾದರಕ್ಷೆ, ಟವಲ್, ತಂಪು ಕನ್ನಡಕ ಧರಿಸಬೇಕು. ಕಾಫಿ, ಟೀ, ಹೆಚ್ಚು ಸಕ್ಕರೆ ಅಂಶ ಇರುವ ಕಾಬೋರ್ನೇಟೆಡ್ ಪಾನೀಯ, ಮಧ್ಯ, ಸಿಗರೇಟ್ ಮತ್ತು ಬೀಡಿ ಸೇವನೆಯಿಂದ ದೂರವಿರಬೇಕು. ದೇಹದ ಉಷ್ಟಾಂಶ ನಿಯಂತ್ರಿಸಲು ಹೆಚ್ಚಾಗಿ ನೀರು, ಎಳೆನೀರು, ಮಜ್ಜಿಗೆ, ಹಣ್ಣಿನ ರಸ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳನ್ನು ಬಳಸಬೇಕು. ತೆಳುಬಣ್ಣದ ಹತ್ತಿಯ ಬಟ್ಟೆಗಳನ್ನು ಮಾತ್ರ ಧರಿಸಬೇಕು. ತೀವ್ರ ಬಳಲಿಕೆಯ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದರು.