ಆರೆಸ್ಸೆಸ್​-ಮೋದಿ ಜಪ ಬಿಟ್ಟು ಜಿಲ್ಲೆಯತ್ತ ಗಮನಹರಿಸಿ

ಡಾ.ಸುಧಾ ಹಾಲಕಾಯಿ
ಡಾ.ಸುಧಾ ಹಾಲಕಾಯಿ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಪ್ರಿಯಾಂಕ್​ಗೆ ಡಾ.ಹಾಲಕಾಯಿ ಕಿವಿಮಾತು
  • ಗೃಹ ಸಚಿವರ ನಿರ್ಲಕ್ಷ್ಯ ಧೋರಣೆಗೆ ಕಿಡಿ
ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡೋತಿ ವಸತಿಶಾಲೆ 60 ಮಕ್ಕಳು ಅಸ್ವಸ್ಥರಾಗಲು ಅನ್ನ ಬೇಯದಿರುವುದು ಕಾರಣ ಎಂಬ ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆ ದುರದೃಷ್ಟಕರ ಮತ್ತು ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಡಾ.ಸುಧಾ ಹಾಲಕಾಯಿ ಕಿಡಿಕಾರಿದ್ದಾರೆ.
ಅಕ್ಕಿ ಬೇಯಿತೆ ಅಥವಾ ಬೇಯಲಿಲ್ಲವೇ ಎಂಬುದು ಮುಖ್ಯವಲ್ಲ. ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥರಾಗಿದ್ದು ಏಕೆ ಎಂಬುದನ್ನು ಸರ್ಕಾರ ಪತ್ತೆಹಚ್ಚಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಮುಖ್ಯ. ಪ್ರತಿ ವಿದ್ಯಾರ್ಥಿ ಜೀವವೂ ಅಮೂಲ್ಯ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿಯಾಗಬಾರದು. ಆದರೆ ಜಿಲ್ಲೆಯ ಹಾಸ್ಟೆಲ್​ಗಳ ಸ್ಥಿತಿಗೆ ಸ್ವತ- ಗೃಹ ಸಚಿವ ಪ್ರಿಯಾಂಕ್​ ಕ್ಷೇತ್ರದ ದಂಡೋತಿ ಗ್ರಾಮದ ಘಟನೆ ಕನ್ನಡಿ ಹಿಡಿದಂತಿದೆ ಎಂದು ತಿಳಿಸಿದ್ದಾರೆ.
ಪ್ರಿಯಾಂಕ್​ ಖರ್ಗೆ ನಿರಂತರವಾಗಿ ಆರ್​ಎಸ್​ಎಸ್​, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರ ಟೀಕೆ ಮಾಡುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಜಿಲ್ಲೆಯ ಜನರು ರಾಜಕೀಯ ವಾಗ್ವಾದ ಕೇಳಲು ಬಯಸುವುದಿಲ್ಲ, ಪ್ರಗತಿ ಬಯಸುತ್ತಾರೆ. ಪ್ರಗತಿಗಾಗಿ ಪ್ರಿಯಾಂಕ್​ ಎಂಬ ಘೋಷಣೆ ಎಲ್ಲಿ ಎಂದು ಪ್ರಶ್ನಿಸಿದ್ದಾರೆ.
ವಿದ್ಯಾರ್ಥಿಗಳು ಹಾಸ್ಟೆಲ್​ಗಳಲ್ಲಿ ಆಹಾರ ಸೇವಿಸಲು ಹೆದರುವಂತಾಗಿದೆ. ಮಕ್ಕಳನ್ನು ಸರ್ಕಾರಿ ವಸತಿನಿಲಯಗಳಿಗೆ ಸೇರಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಚಿವ ಪ್ರಿಯಾಂಕ್​ ಖರ್ಗೆ ತಮ್ಮ ವರ್ತನೆ ಬದಲಿ ಮಾಡಿಕೊಳ್ಳಲಿ, ಜಿಲ್ಲೆಯ ಕಡೆಗೆ ಗಮನ ಹರಿಸಲಿ. ಮುಖ್ಯಮಂತ್ರಿಗಳು ಕಲಬುರಗಿಗೆ ಭೇಟಿ ನೀಡಿದಾಗ ನಿರೀಸಿದ್ದ ಅಭಿವೃದ್ಧಿ ಯೋಜನೆ, ಸಮಸ್ಯೆಗಳ ಪರಿಹಾರದ ಭರವಸೆಗಳು ಕಾಣಿಸಲಿಲ್ಲ. ಸ್ವಾಗತ, ಹಾರಗಳು ಮತ್ತು ಪೋಸ್ಟರ್​ಗಳ ರಾಜಕೀಯವೇ ಹೆಚ್ಚಾಗಿತ್ತು. ಕನಕಪುರವನ್ನು ಬೆಂಗಳೂರಿಗೆ ಸಂಪರ್ಕಿಸುವ ಮಹತ್ವಾಕಾಂೆಯ ಅಭಿವೃದ್ಧಿ ಯೋಜನೆಗಳು ನಡೆಯುತ್ತಿವೆ. ಮತ್ತೊಂದೆಡೆ ಕಲಬುರಗಿ ಜಿಲ್ಲೆ ಅಭಿವೃದ್ಧಿಯ ಹಲವು ಸೂಚ್ಯಂಕಗಳಲ್ಲಿ ಹಿಂದುಳಿದಿದೆ ಇದನ್ನು ಸಿಎಂ ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net