

ಬೆಂಗಳೂರು: ರಾಜ್ಯದಲ್ಲಿ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಕುರಿತು ಪ್ರಮುಖ ಆರೋಪಿಗಳನ್ನು ಬಂಧಿಸಲು ಕಮಿಷನರ್ ಎರಡು ದಿನ ಸಮಯ ಕೇಳಿದ್ದಾರೆ. ನೋಡೋಣ ಏನು ಮಾಡುತ್ತಾರೆ. ಬಂಧಿಸದಿದ್ರೆ ಮತ್ತೆ ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶುಕ್ರವಾರ(ಅ. 16) ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಿನ್ನೆ ನಾನೇ ಪ್ರಕರಣದ ಬಗ್ಗೆ ನನ್ನನ್ನೇ ತನಿಖೆ ಮಾಡಿ ಎಂದು ಕಮಿಷನರ್ ಆಫೀಸ್ಗೆ ಹೋಗಿದ್ದೆ. ನಮ್ಮ ಹುಡುಗರನ್ನ ಕರೆದುಕೊಂಡು ಹೋಗಿ ಘಟನೆಯನ್ನು ಬೇರೆ ಕಡೆ ತಿರುಗಿಸಲು ನೋಡುತ್ತಿದ್ದಾರೆ. ಅದಕ್ಕೆ ನಾನು ಹೇಳಿದ್ದು ನಾನು ರೇವಣ್ಣ ಅಲ್ಲ ಅಂತ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ಸಿಎಂ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಅಲ್ಲಿ ಸಿದ್ದರಾಮಯ್ಯ ಅವರಿಗೆ ಕ್ಷೇಮ ವಿಚಾರಿಸಿದ್ದಾರೋ, ಇಲ್ಲ ಕ್ಷಮೆ ಕೇಳಿದ್ರೋ ಎನೋ ಗೋತಿಲ್ಲ ಎಂದಿದ್ದಾರೆ.
ಇದೇ ವೇಳೆ ನಿರುದ್ಯೋಗಿ ಸಚಿವ, ಅವರ ಮಾತಿಗೆ ಕಿಮ್ಮತ್ತಿಲ್ಲ ಎಂಬ ಗೃಹಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಿಮ್ಮತ್ತು ಇದೆಯೋ ಇಲ್ವೋ ಎಂದು ಇವರಿಗೆ ಕನಸಿನಲ್ಲಿ ಬಂದು ಹೇಳಿದ್ರಾ? ಸಿದ್ದಾರ್ಥ ಟ್ರಸ್ಟ್ ವಿಚಾರವಾಗಿ ಖರ್ಗೆಯವರು ಯಾಕೆ ಮೋದಿಯವರು ಬಳಿ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವನಾದ ಎರಡು ವರ್ಷಗಳಲ್ಲೇ ಬಿಹೆಚ್ಎಎಲ್ ಕಾರ್ಖಾನೆಯನ್ನು 200 ಕೋಟಿ ಲಾಭವಿದ್ದದ್ದನ್ನು, 1,500 ಕೋಟಿ ಹೆಚ್ಚಾಗುವಂತೆ ಮಾಡಿದ್ದೇನೆ. ಸ್ಟೀಲ್ ಆಥಾರಿಟಿ 3,500 ಕೋಟಿ ರೂ. ಲಾಭ ಆಗ್ತಿದೆ. ಮುಂದಿನ ವರ್ಷಕ್ಕೆ 10,000 ಕೋಟಿ ರೂ. ಟಾರ್ಗೆಟ್ ಕೊಟ್ಟಿದ್ದೇನೆ. ನಿಮ್ಮಿಂದ ಕಲಿಬೇಕಾಗಿಲ್ಲ. ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪಿಸಿದ ನೀವು, ಹೀಗೇನೂ ಮಾಡ್ತಿದ್ದೀರಿ. ಹೊಸ ಸಿಎಂ ನೈಸ್, ಬಿಡದಿ ಲೂಟಿ ಇದೇ ನಿಮ್ಮ ಟಾಸ್ಕ್ ಆಗಿದೆ ಎಂದು ಕಿಡಿಕಾರಿದ್ದಾರೆ.
ಕೆಪಿಎಸ್ಸ್ಸಿಯಲ್ಲಿ ಹಗರಣ ನಡೆದಿದ್ದು, ಯುವಕರ ಉದ್ಯೋಗ ಸೃಷ್ಟಿಯನ್ನು ಹಾಳು ಮಾಡಲಾಗಿದೆ. 24 ಇಂಜಿನಿಯರ್ಸ್ ನೇಮಕಾತಿಯಲ್ಲಿ 10 ಅಭ್ಯರ್ಥಿಗಳು ಅಕ್ರಮ ನೇಮಕಾತಿ ಆಗಿಲ್ಲವೇ?, ನಿಮ್ಮ ಯೋಗ್ಯತೆಗೆ ಇದುವರೆಗೂ ಅದರ ಬಗ್ಗೆ ಪ್ರಾಮಾಣಿಕ ತನಿಖೆಗೆ ಮಾಡಿಸಲಾಗಿಲ್ಲ. ಪಶುವೈದ್ಯಕೀಯ ಅಭ್ಯರ್ಥಿಗಳ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಅಧಿಕಾರ ದುರ್ಬಳಕೆ ಮಾಡಿ ಎಲ್ಲವನ್ನು ತಿರುಚುವ ಕೆಲಸ ಮಾಡ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಮಾಡಿದಂತವರಿಗೆ ರಕ್ಷಣೆ ಕೊಡ್ತಿದ್ದೀರಿ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಹುಡುಗರ ಮೇಲೆ ಅನುಮಾನ ವ್ಯಕ್ತಪಡಿಸ್ತೀರಾ ಅಧಿಕಾರಿಗಳು ಅನವಶ್ಯಕವಾಗಿ ಸಮಸ್ಯೆ ಸೃಷ್ಟಿ ಮಾಡಿದ್ರೆ ಮುಂದೆ ಅನುಭವಿಸ್ತೀರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಹೆಚ್ಡಿಕೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಮೀರ್ ಮಂತ್ರಿ ಮಾಡಲು ಸಿದ್ದರಾಮಯ್ಯ ಬೇಡ ಎಂದಿದ್ದರು. ಸದ್ಯಕ್ಕೆ ಸಿಕ್ಕಿರುವ ಇನ್ನೊಂದು ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಡೆಲ್ಲಿಗೆ ಹೋದಾಗ ಜಮೀರ್ ನ ಮಂತ್ರಿ ಸ್ಥಾನದಿಂದ ತೆಗೆಯಿರಿ ಎಂದಿದ್ದಾರೆ. ಇದೇ ಕಾರಣಕ್ಕೆ ಜಮೀರ್ ಅವರೇ ಸ್ಟಿಂಗ್ ಮಾಡಿ ಹೊರಗೆ ಬಿಟ್ಟಿರಬಹುದು ಎಂದು ಕೌಂಟರ್ ನೀಡಿದ್ದಾರೆ.