ಸ್ಟಾರ್‌ಲಿಂಕ್‌ಗೆ ಸ್ವಾಗತ, ಆದರೆ ದೇಶದ ಕಾನೂನನ್ನು ಪಾಲಿಸಲೇಬೇಕು: ಎಲಾನ್ ಮಸ್ಕ್​ಗೆ ರಿಲಯನ್ಸ್ ತಿರುಗೇಟು | Reliance

ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸಂಪರ್ಕ ಒದಗಿಸುವ ಸ್ಟಾರ್‌ಲಿಂಕ್​ಗೆ ಅನುಮತಿ ನೀಡುವುದನ್ನು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತಡೆದಿದ್ದಾರೆ ಎಂಬ ವಿಶ್ವದ ನಂ.01 ಶ್ರೀಮಂತ ಎಲಾನ್ ಮಸ್ಕ್ ಆರೋಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಕಂಪನಿ, ಸ್ಟಾರ್‌ಲಿಂಕ್‌ಗೆ ಸ್ವಾಗತ, ಆದರೆ ಕಾನೂನನ್ನು ಪಾಲಿಸಲೇಬೇಕು ಎಂದು ತಿರುಗೇಟು ನೀಡಿದೆ.
ಎಲಾನ್ ಮಸ್ಕ್
ಎಲಾನ್ ಮಸ್ಕ್
Published on: 

ಮುಂಬೈ: ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸಂಪರ್ಕ ಒದಗಿಸುವ ಸ್ಟಾರ್‌ಲಿಂಕ್​ಗೆ ಅನುಮತಿ ನೀಡುವುದನ್ನು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ತಡೆದಿದ್ದಾರೆ ಎಂಬ ವಿಶ್ವದ ನಂ.01 ಶ್ರೀಮಂತ ಎಲಾನ್ ಮಸ್ಕ್ ಆರೋಪಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಕಂಪನಿ, ಸ್ಟಾರ್‌ಲಿಂಕ್‌ಗೆ ಸ್ವಾಗತ, ಆದರೆ ಕಾನೂನನ್ನು ಪಾಲಿಸಲೇಬೇಕು ಎಂದು ತಿರುಗೇಟು ನೀಡಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ರಿಲಯನ್ಸ್​, ಸ್ಟಾರ್‌ಲಿಂಕ್ ಸೇರಿದಂತೆ ಉಪಗ್ರಹ ಸಂವಹನ ಕ್ಷೇತ್ರದಲ್ಲಿನ ಪೈಪೋಟಿಯನ್ನು ಕಂಪನಿ ಸ್ವಾಗತಿಸುತ್ತದೆ. ಜಿಯೋ ಸೇರಿದಂತೆ ಪ್ರತಿಯೊಂದು ಸಂಸ್ಥೆಯೂ ಭಾರತದ ಜನರಿಗೆ ಸೇವೆ ಸಲ್ಲಿಸಬೇಕು ಹಾಗೂ ದೇಶದ ಕಾನೂನುಗಳು ಮತ್ತು ನೀತಿಗಳಿಗೆ ಬದ್ಧವಾಗಿರಬೇಕು ಎಂದು ಹೇಳಿದೆ.

ನೇರವಾರಿ ಎಲಾನ್ ಮಸ್ಕ್​ ಹೇಳಿಕೆ ಉಲ್ಲೇಖಿಸದಿದ್ದರೂ, ರಿಲಯನ್ಸ್ ಮತ್ತು ಭಾರತೀಯ ಮಾರುಕಟ್ಟೆಯ ಬಗ್ಗೆ ಇತ್ತೀಚಿನ ಹೇಳಿಕೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಸತ್ಯಗಳನ್ನು ಹೇಳಲು ಬಯಸುತ್ತೇವೆ. ಸ್ಟಾರ್‌ಲಿಂಕ್‌ನಂತೆಯೇ ಜಿಯೋ ಸಹ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಾಗಿನ ಯೋಜನೆಯೂ ಅಗತ್ಯ ಅನುಮತಿಗಳಿಗಾಗಿ ಕಾಯುತ್ತಿದೆ ಎಂದು ತಿಳಿಸಿದೆ.

Also Read
ರಾಹುಲ್ ಗಾಂಧಿಯವರು ಈ ದೇಶವನ್ನಾಳುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದಾರೆ: ಸ್ಮೃತಿ ಇರಾನಿ ವಾಗ್ದಾಳಿ | Smriti Irani
ಎಲಾನ್ ಮಸ್ಕ್

ಜನರ ಜೀವನವನ್ನು ಸುಧಾರಿಸುವಂತಹ, ದೇಶೀಯ ಅಥವಾ ಅಂತರರಾಷ್ಟ್ರೀಯ ಹೂಡಿಕೆ ಹಾಗೂ ನಾವೀನ್ಯತೆಗಳನ್ನು ಕಂಪನಿ ಸ್ವಾಗತಿಸುತ್ತದೆ. ದಾಗ್ಯೂ, ಎಲ್ಲಾ ಕಂಪನಿಗಳು ಭಾರತೀಯ ಕಾನೂನು ಮತ್ತು ನಿಯಮಾವಳಿಗಳಿಗೆ ಬದ್ಧವಾಗಿರಬೇಕು. ಭಾರತ ಸರ್ಕಾರವು ತಿಳಿಸಿರುವಂತೆ, ಭಾರತೀಯ ಅಥವಾ ವಿದೇಶಿ ಯಾರೇ ಆಗಲಿ ಪ್ರತಿಯೊಬ್ಬ ಅರ್ಜಿದಾರರಿಗೂ ಒಂದೇ ರೀತಿಯ ಪ್ರಕ್ರಿಯೆಯನ್ನು ಅನ್ವಯಿಸಲಾಗುತ್ತದೆ ಎಂದು ಪ್ರತಿಪಾದಿಸಿದೆ.

ಎಲಾನ್ ಮಸ್ಕ್ ಹೇಳಿದ್ದೇನು?

ಅಕ್ಟೋಬರ್ 09ರಂದು ಎಕ್ಸ್​ನಲ್ಲಿ ಪೋಸ್ಟ್ ಹಾಕಿದ್ದ ಮಸ್ಕ್, ಭಾರತದಲ್ಲಿ 'ಸ್ಟಾರ್‌ಲಿಂಕ್' ಸೇವೆಯನ್ನು ದುರದೃಷ್ಟವಶಾತ್, ಭಾರತೀಯರ ಮೇಲೆ ತಮ್ಮ ಏಕಸ್ವಾಮ್ಯದ ಹಿಡಿತವನ್ನು ಕಾಯ್ದುಕೊಳ್ಳುವ ಸಲುವಾಗಿ ಕೆಲವು ಪ್ರಭಾವಿ ಉದ್ಯಮಿಗಳು ತಡೆಯುತ್ತಿದ್ದಾರೆ. ಅವರು ಯಾರೆಂದು ನೀವು ಊಹಿಸಬಹುದು... ಇದು ಭಾರತದ ಜನರ ವಿರುದ್ಧ ಎಸಗುವ ಅಪರಾಧವಾಗಿದೆ ಎಂದು ಹೇಳಿದ್ದರು.

ಬಳಿಕ ಮತ್ತೊಂದು ಪೋಸ್ಟ್​ನಲ್ಲಿ, ವಿಶ್ವದ 165ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಲೈಸನ್ಸ್​ ಪಡೆದಿರುವ ಸ್ಟಾರ್‌ಲಿಂಕ್​, ಪ್ರತಿಯೊಂದು ನಿಯಮ ಮತ್ತು ಷರತ್ತುಗಳನ್ನು ಪಾಲಿಸಲು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದರೂ, ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಯಾಕಿನ್ನೂ ಆಗಿಲ್ಲ? ಲೈಸೆನ್ಸ್ ಕಥೆಯೇನು ಎಂದು ಪ್ರಶ್ನಿಸಿದ್ದರು.

Also Read
ಅಮೆರಿಕ-ಪಾಕ್ ನಡುವೆ ಯುದ್ಧ ನಡೆದ್ರೆ, ನಾವು ಪಾಕಿಸ್ತಾನದ ಪರ ನಿಲ್ಲುತ್ತೇವೆ: ವಿವಾದದ ಕಿಡಿ ಹೊತ್ತಿಸಿದ ಬಿಜೆಪಿ ರಾಜ್ಯಾಧ್ಯಕ್ಷ | BJP State President
ಎಲಾನ್ ಮಸ್ಕ್

ಮುಂದುವರೆದು, ಸಂಸ್ಥೆಗಳೊಂದಿಗೆ ವರ್ಷಗಳ ಕಾಲ ಮಾತುಕತೆ ನಡೆಸಿ, ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿದ ಹೊರತಾಗಿಯೂ, ಭಾರತದಲ್ಲಿ ಇನ್ನೂ ನಮ್ಮ ಸ್ಟಾರ್​ಲಿಂಕ್​ ತನ್ನ ವಾಣಿಜ್ಯ ಸೇವೆಗಳನ್ನು ಆರಂಭಿಸಲು ಕಾಯುವಂತ ಪರಿಸ್ಥಿತಿ ಎದುರಾಗಿದೆ. ಏಕೆ ಲೈಸನ್ಸ್​ಗೆ ಇಷ್ಟೊಂದು ವಿಳಂಬ? ಇಲ್ಲಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಯಾರು, ಮುಖೇಶ್ ಅಂಬಾನಿ ಅವರೇ? ಅಂಬಾನಿ ಏನು ಭಾರತದ ರಿಯಲ್​ ಒಡೆಯನಾ? ಎಂದು ನೇರವಾಗಿ ಆರೋಪ ಮಾಡಿದ್ದರು.

ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತಕ್ಕೆ ಸ್ವಾಗತ ಎಲಾನ್​. ಇನ್ನೂ ಒಬ್ಬರು ಸಿಗುವವರೆಗೂ ನೀವು ಕಾಯಬೇಕು ಎಂದು ಟ್ವೀಟ್​ ಮಾಡಿದ್ದರು. ಇದಕ್ಕೆ ರಿಟ್ವೀಟ್ ಮಾಡಿದ್ದ ಮಸ್ಕ್, ಥ್ಯಾಂಕ್ಯೂ ರಾಹುಲ್, ಆದ್ರೆ ಇದು ನಿಜಕ್ಕೂ ಆಂತಕಕಾರಿ ಎಂದು ಹೇಳಿದ್ದರು (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net