

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವವರು ಈ ದೇಶವನ್ನು ಆಳುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ್ದಾರೆ. ಅದನ್ನು ಈಡೇರಿಸಿಕೊಳ್ಳಲು ಅವರು ಕಾನೂನನ್ನು ಉಲ್ಲಂಘಿಸಬಹುದೇ? ಹಿಂಸಾಚಾರವನ್ನು ಪ್ರಚೋದಿಸಬಹುದೇ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ ವಿರುದ್ಧ ವಿರೋಧ ಪಕ್ಷದ ಪ್ರತಿಭಟನೆಗಳ ಕುರಿತು ಎನ್ಡಿಎಟಿ ಸಂದರ್ಶನದಲ್ಲಿ ಮಾತನಾಡಿರುವ ಅವರು, ರಾಹುಲ್ ಗಾಂಧಿ ಸರ್ಕಾರದೊಂದಿಗೆ ಮಾತನಾಡಲು ಬಯಸುವುದಿಲ್ಲ. ಬದಲಾಗಿ ಮೊಬಾಕ್ರಸಿ(ಜನಸಮೂಹದ) ಮೂಲಕ ಆಡಳಿತವನ್ನೇ ಬದಲಾಯಿಸಲು ಬಯಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
2025ರಲ್ಲಿ ರಾಹುಲ್ ಗಾಂಧಿಯವರು ಇನ್ನು ಮುಂದೆ ನಾನು ಬಿಜೆಪಿ ವಿರುದ್ಧ ಹೋರಾಡುವುದಿಲ್ಲ, ಬದಲಾಗಿ ಇಂಡಿಯನ್ ಸ್ಟೇಟ್ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದ್ದರು. ಇಂಡಿಯನ್ ಸ್ಟೇಟ್ ಎಂದರೇನು? ಎಲ್ಲರಿಗೂ ತಿಳಿದಿದೆ. ಈಗ ಅವರು ಭಾರತದ ರಾಷ್ಟ್ರದ ವಿರುದ್ಧ ಯುದ್ಧ ಮಾಡಲು ಬಯಸುತ್ತಾರೆ. ಸಂಸತ್ತಿನ ಸದಸ್ಯರಾಗಿದ್ದು, ಬೀದಿ ಹೋರಾಟವನ್ನು ಆರಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದಲ್ಲ ಪ್ರಜಾಪ್ರಭುತ್ವವನ್ನು ಯಾರು ಖಚಿತಪಡಿಸುತ್ತಾರೆ? ಭಾರತದ ಚುನಾವಣಾ ಆಯೋಗ. ರಾಹುಲ್ ಗಾಂಧಿ ನಿರಂತರವಾಗಿ ಯಾರ ಮೇಲೆ ದಾಳಿ ಮಾಡುತ್ತಿದ್ದಾರೆ? ಭಾರತದ ಚುನಾವಣಾ ಆಯೋಗ. ಅದರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆದ್ರೆ ಇಂದು ಸಂಜೆ ಅವರ ತಂಡ ಪತ್ರಿಕಾಗೋಷ್ಠಿ ನಡೆಸಿ ನಮ್ಮ ಕಾರ್ಯಸೂಚಿ ಆಡಳಿತ ಬದಲಾವಣೆ ಮಾಡೋದು ಎಂದು ತಿಳಿಸಿದೆ ಎಂದು ಹೇಳಿದ್ದಾರೆ.
ಮತ ಕಳ್ಳತನದ ವಿರುದ್ಧ ಪುರಾವೆ ನೀಡಲು ರಾಹುಲ್ ಗಾಂಧಿಯವರು ಬಯಸುವುದಿಲ್ಲ ಎಂದಿರುವ ಇರಾನಿ, ಯಾಕಂದರೆ ಅವರ ಬಳಿ ಯಾವುದೇ ಪುರಾವೆಗಳಿಲ್ಲ. ಆದರೆ ಅವರು ಸರ್ಕಾರದೊಂದಿಗೆ ಮಾತುಕತೆ ನಡೆಸಲು ಮತ್ತು ಮಾತನಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).