ಹಂತ ಹಂತವಾಗಿ ರಸ್ತೆಗಳ ಅಭಿವೃದ್ಧಿಗೆ ಕ್ರಮ

ಕಾತರಕಿ-ಗುಡ್ಲಾನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು. ಜಿಪಂ ಮಾಜಿ ಸದಸ್ಯ ಗೂಳಪ್ಪ ಹಲಿಗೇರಿ, ಪ್ರಮುಖರಾದ ವೆಂಕನಗೌಡ್ರು ಹಿರೇಗೌಡ್ರು, ಹನುಮರೆಡ್ಡಿ ಹಂಗನಕಟ್ಟಿ, ಯಲ್ಲನಗೌಡ್ರು, ವಿರೂಪಾಕ್ಷಗೌಡ್ರು, ಸಜ್ಜನ್ ಶರಣಪ್ಪ, ನವೋದಯ ವಿರೂಪಣ್ಣ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿಕೆ
  • ಕಾತರಕಿ-ಗುಡ್ಲಾನೂರು ಮುಖ್ಯ ರಸ್ತೆ ಕಾಮಗಾರಿಗೆ ಭೂಮಿಪೂಜೆ
ಅಳವಂಡಿ: ಕ್ಷೇತ್ರದಲ್ಲಿ ದುರಸ್ತಿಯಲ್ಲಿರುವ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ತಿಳಿಸಿದರು.
ಕಾತರಕಿ ಗ್ರಾಮದಲ್ಲಿ ರಾಜ್ಯ ಹೆದ್ದಾರಿ 129ರಿಂದ ಕಾತರಕಿ-ಗುಡ್ಲಾನೂರು ಗ್ರಾಮಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ  ನೆರವೇರಿಸಿ ಮಾತನಾಡಿದರು.
ಕೊಪ್ಪಳ -ಹಿರೇಸಿಂದೋಗಿ ರಸ್ತೆ, ಹಲಿಗೇರಿ ಕ್ರಾಸ್- ಹಿರೇಸಿಂದೋಗಿ ರಸ್ತೆ ಅಭಿವೃದ್ಧಿ ಪಡಿಸಿದ್ದು, ಬೆಟಗೇರಿ ರಸ್ತೆ ಹಾಗೂ ಹಿರೇಸಿಂದೋಗಿ-ಕಾಟ್ರಳ್ಳಿ-ಕೋಳೂರು-ಕೊಪ್ಪಳ ರಸ್ತೆ, ಚಿಕ್ಕಸಿಂದೋಗಿ-ಗುನ್ನಲ್ಲಿ-ವರತಟ್ನಾಳ-ಮಂಗಳಾಪುರ ರಸ್ತೆ ಕಾಮಗಾರಿ ಪ್ರಗತಿಯಲ್ಲಿವೆ. ಬೆಟಗೇರಿ-ಹನಕುಂಟಿ ರಸ್ತೆಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭಗೊಳ್ಳಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು. 
ಪ್ರಮುಖರಾದ ಕೃಷ್ಣರೆಡ್ಡಿ ಗಲ್ಬಿ, ಯತ್ನಟ್ಟಿ ನಿಂಗಪ್ಪ, ನಾಗರಾಜ ಹುರಕಡ್ಲಿ, ಮಹಾಂತೇಶ ಅಂಗಡಿ, ಯಂಕಪ್ಪ ಕೊರಗಲ್, ಗವಿ ಬೇಳೂರು, ಕಾಸೀ ಕೋಳ್ಕರ, ಅಂದಪ್ಪ ಗುಡ್ಲಾನೂರು, ರಾಜು ಭೈರನ್‌ನವರ, ಸುಧೀರ, ಸಂತೋಷ ಬೂದಿಹಾಳ, ಮಲ್ಲು ಪೂಜಾರ್, ಅಕ್ಬರ್ ಪಲ್ಟಾನ್ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net