ಕಲಾಮಂದಿರ ನಿರ್ಮಾಣಕ್ಕೆ ಕ್ರಮ

ಕೆ.ಎಂ.ದೊಡ್ಡಿಯಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದಿಂದ ಆಯೋಜಿಸಿದ್ದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕದಲೂರು ಉದಯ್,  ಸಂದರ್ಶ, ಹರೀಶ್ ಬಾಬು,  ಎ.ಎಸ್. ರಾಜೀವ್ ಅವರನ್ನು ಸಂಘದಿಂದ ಗೌರವಿಸಲಾಯಿತು. ತೊರೆಚಾಕನಹಳ್ಳಿ ಶಂಕರೇಗೌಡ,  ಪುಟ್ಟರಾಮು, ಕಳ್ಳಿಮೆಳ್ಳೆದೊಡ್ಡಿ ಸಿದ್ದರಾಜು, ಪ್ರಸನ್ನ, ಡಿ.ಎ.ಕೆರೆ ಮಹೇಶ್ ಇತರರು ಇದ್ದರು.
ಕೆ.ಎಂ.ದೊಡ್ಡಿಯಲ್ಲಿ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದಿಂದ ಆಯೋಜಿಸಿದ್ದ ನಾಟಕೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಕದಲೂರು ಉದಯ್, ಸಂದರ್ಶ, ಹರೀಶ್ ಬಾಬು, ಎ.ಎಸ್. ರಾಜೀವ್ ಅವರನ್ನು ಸಂಘದಿಂದ ಗೌರವಿಸಲಾಯಿತು. ತೊರೆಚಾಕನಹಳ್ಳಿ ಶಂಕರೇಗೌಡ, ಪುಟ್ಟರಾಮು, ಕಳ್ಳಿಮೆಳ್ಳೆದೊಡ್ಡಿ ಸಿದ್ದರಾಜು, ಪ್ರಸನ್ನ, ಡಿ.ಎ.ಕೆರೆ ಮಹೇಶ್ ಇತರರು ಇದ್ದರು.
Published on
ಕೆ.ಎಂ.ದೊಡ್ಡಿ: ಚಿಕ್ಕರಸಿನಕೆರೆ ಹೋಬಳಿಯಲ್ಲಿ ಕಲೆಯ ಆರಾಧಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಲಾಮಂದಿರ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಶಾಸಕ ಕದಲೂರು ಉದಯ್ ಭರವಸೆ ನೀಡಿದರು.

ಇಲ್ಲಿನ ಅಲಭುಜನಹಳ್ಳಿ ರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ಪಕ್ಕ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದ ಸಂಘ, ಸಿ.ಎ.ಕೆರೆ ಹೋಬಳಿ ರಂಗಭೂಮಿ ಚಾರಿಟಬಲ್ ಸೇವಾ ಟ್ರಸ್ಟ್ , ರಾಜ್ಯ ಮಟ್ಟದ ನಿರ್ದೇಶಕರ ಕಲಾ ಟ್ರಸ್ಟ್ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ, ಸಂಕ್ರಾಂತಿ ಸಂಭ್ರಮ ಹಾಗೂ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ, ಪೌರಾಣಿಕ ಮತ್ತು ಸಾಮಾಜಿಕ ನಾಟಕೋತ್ಸವದಲ್ಲಿ ಮಾತನಾಡಿದರು.

ಮದ್ದೂರು ಮತ್ತು ಚಿಕ್ಕರಸಿನಕೆರೆ ಹೋಬಳಿಯಲ್ಲಿ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಿಗೆ ಜೀವ ತುಂಬಲು ಕಲಾವಿದರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದು, ಕಲಾವಿದರನ್ನು ಪ್ರೋತ್ಸಾಹಿಸುವುದು ನನ್ನ ಕರ್ತವ್ಯ. ಅವರ ಕಲೆಗೆ ಒಂದು ಶಾಶ್ವ್ವತ ನೆಲೆ ರೂಪಿಸುವುದು ಅತ್ಯಗತ್ಯವಾಗಿದ್ದು ಕಲಾಮಂದಿರ ನಿರ್ಮಾಣಕ್ಕೆ ಕ್ರಮ ವಹಿಸುತ್ತೇನೆ ಎಂದರು.

ಈ ವೇಳೆ ಶಾಸಕ ಕದಲೂರು ಉದಯ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನಮುಲ್ ನಿರ್ದೇಶಕ ಹರೀಶ್ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ರಾಜೀವ್ ಅವರನ್ನು ಕಲಾವಿದ ಸಂಘದಿಂದ ಅಭಿನಂದಿಸಲಾಯಿತು. ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದ ಸಂಘ ತೊರೆಚಾಕನಹಳ್ಳಿ ಶಂಕರೇಗೌಡ, ಸದಸ್ಯರಾದ ದೇವರಹಳ್ಳಿ ಪುಟ್ಟರಾಮು, ಕಳ್ಳಿಮೆಳ್ಳೆದೊಡ್ಡಿ ಸಿದ್ದರಾಜು, ಪ್ರಸನ್ನ, ಡಿ.ಎ.ಕೆರೆ ಮಹೇಶ್, ರಾಜು, ಗುರುದೇವರಹಳ್ಳಿ ಮಾದೇಗೌಡ, ಹುಲಿಗೆರೆಪುರ ಮಲ್ಲೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net