ತುರುವೇಕೆರೆ :ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿ ವಾಡಲು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಪಾದಿಸಿ ತಾಲೂಕಿನ ಒಳಮೀಸಲಾತಿ ಹೋರಾಟ ಸಮಿತಿ, ವಾದಾರ ಮಹಾಸಭಾ ಸೇರಿದಂತೆ ವಿವಿಧ ಸಂ-ಸಂಸ್ಥೆಗಳು ಸರ್ಕಾರಿ ಕಾರ್ಯಕ್ರಮಕ್ಕೆ ಗೈರಾಗಿ ಪ್ರತ್ಯೇಕವಾಗಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಮ್ ಜನ್ಮ ದಿನವನ್ನು ಆಚರಿಸಲಾಯಿತು.
ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಕೆಲವು ನಿಮಿಷಗಳ ಕಾಲ ಪಟ್ಟಣದ ಬಾಣಸಂದ್ರ ವೃತ್ತದಲ್ಲಿ ತಮಟೆ ಬಾರಿಸುವ ಮೂಲಕ ಚಳವಳಿ ವಾಡಲಾಯಿತು.
ಸಾಹಿತಿ ಕೃಷ್ಣಮೂರ್ತಿ ಬೆಳಗೆರೆ ಮಾತನಾಡಿ, ಅಸ್ಪೃಶ್ಯತೆ ಇಲ್ಲದ ಗ್ರಾಮ ಇಲ್ಲವೇ ಇಲ್ಲ. ಪ್ರಪಂಚವೇ ಅಂಬೇಡ್ಕರ್ ಅವರನ್ನು ಗುರು ಸ್ಥಾನದಲ್ಲಿ ಪೂಜಿಸುತ್ತಿದ್ದರೂ ಅವರು ಜೀವಂತವಿದ್ದ ಕಾಲದಲ್ಲಿ ಅವರನ್ನು ದೇಶದ್ರೋಹಿಯಂತೆ ಕಾಣುತ್ತಿತ್ತು. ಅಂಬೇಡ್ಕರ್ ವ್ಯಕ್ತಿಯಲ್ಲ. ಅವರೊಬ್ಬ ಮಹಾ ವಾನವತಾವಾದಿ. ಎಲ್ಲರನ್ನೂ ಸವಾನವಾಗಿ ನೋಡಬೇಕೆಂದು ಪ್ರತಿಪಾದಿಸಿದವರು ಎಂದರು.
ವಾಜಿ ಶಾಸಕ ಮಸಾಲಾ ಜಯರಾಮ್ ವಾತನಾಡಿ, ರಾಜ್ಯ ಸರ್ಕಾರ ದಲಿತರ ಮಧ್ಯೆ ಹೊಡೆದಾಡುವ ನೀತಿಯನ್ನು ಅನುಸರಿಸುತ್ತಿದೆ. ಅಂಬೇಡ್ಕರ್‌ಅವರ ಕನಸಾಗಿದ್ದ ಸವಾನತೆಯ ಮನೋಭಾವಕ್ಕೆ ಈ ಸರ್ಕಾರ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ. ದುರಾವರ್ತನೆಯಿಂದ ಈ ಸರ್ಕಾರ ವರ್ತಿಸುತ್ತಿದೆ ಎಂದು ದೂರಿದರು.