ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ ಸಲ್ಲ

ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ನಡೆದ ಭತಗುಣಕಿ ಹಾಗೂ ಬೂದಿಹಾಳ ಗ್ರಾಮದ ವಿವಿಧ ಕಾಮಗಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಬಿ.ಎಂ. ಕೋರೆ, ಎಂ.ಆರ್. ಪಾಟೀಲ, ಶಾಹಾಜಿ ಮಿಸಾಳೆ ಇತರರಿದ್ದರು.
ಇಂಡಿ ತಾಲೂಕಿನ ಭತಗುಣಕಿ ಗ್ರಾಮದಲ್ಲಿ ನಡೆದ ಭತಗುಣಕಿ ಹಾಗೂ ಬೂದಿಹಾಳ ಗ್ರಾಮದ ವಿವಿಧ ಕಾಮಗಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಬಿ.ಎಂ. ಕೋರೆ, ಎಂ.ಆರ್. ಪಾಟೀಲ, ಶಾಹಾಜಿ ಮಿಸಾಳೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಯಶವಂತರಾಯಗೌಡ ಪಾಟೀಲ ಬೇಸರ
  • ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ
ಹೊರ್ತಿ: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ವಿರುದ್ಧ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಭತಗುಣಕಿ ಗ್ರಾಮದಲ್ಲಿ ನಡೆದ ಭತಗುಣಕಿ ಹಾಗೂ ಬೂದಿಹಾಳ ಗ್ರಾಮದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಸ್ಥಗಿತಗೊಂಡಿವೆ. ಜಲಧಾರೆ ಹಾಗೂ ಜೆಜೆಎಂ ಹಣ ಇನ್ನೂ ಬಾಕಿ ಇದೆ. ಅವುಗಳ ಅನುದಾನ ನೀಡಿದರೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಬಡವರಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ ಎಂದು ಹೇಳಿದರು.
ಕ್ಷೇತ್ರದ ಎಲ್ಲ ಗ್ರಾಮಗಳ ರಸ್ತೆಗಳನ್ನು ಅಗಲೀಕರಣ ಹಾಗೂ ಡಾಂಬರೀಕರಣ ಮಾಡಿದ್ದೇನೆ. ಅನೇಕ ಗ್ರಾಮಗಳಿಗೆ ರಸ್ತೆ ಕಾಮಗಾರಿ ಚಾಲನೆ ನೀಡಲಾಗುತ್ತಿದೆ. ನಮ್ಮ ಕ್ಷೇತ್ರಕ್ಕೆ ರೇವಣಸಿದ್ಧೇಶ್ವರ ನೀರಾವರಿ ಯೋಜನೆಯಿಂದ ಸಮಗ್ರ ನೀರಾವರಿ ಯೋಜನೆ ಆಗುತ್ತದೆ. ಮೂಲ ಸೌಕರ್ಯ ಒದುಗಿಸುವ ನಿಟ್ಟಿನಲ್ಲಿ ನಾನು ನಿರಂತರವಾಗಿ ಕೆಲಸ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡ ಎಂ.ಆರ್. ಪಾಟೀಲ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಹಲವು ಕಾಮಗಾರಿಗಳಿಗೆ ವಿಳಂಬವಾಗಿದೆ. ಆದರೂ ಕ್ಷೇತ್ರದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.
ಬಿ.ಎಂ. ಕೋರೆ, ಎಂ.ಆರ್. ಪಾಟೀಲ, ಶಾಹಾಜಿ ಮಿಸಾಳೆ, ಭೀಮಣ್ಣ ಕೌವಲಗಿ, ನೀಲಕಂಠ ರೂಗಿ, ಸಣ್ಣಪ್ಪ ತಳವಾರ, ಬಿಸಿ ಸಾಹುಕಾರ, ಧನರಾಜ ಮುಜಗೂಂಡ, ಶಾಹು ಸಿಂದೆ, ಜಾವಿದ್ ಮೋಹಿನ್, ಗಂಗಾಧರ ತೆಲಸಂಗ, ಶಿವಗೂಂಡಪ್ಪಗೌಡ ಪಾಟೀಲ, ರಾಜೇಶ ಹೂಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net