ಮಾದಕ ವಸ್ತುಗಳಿಂದ ದೂರವಿರಿ

ನಗರದ ಖುರೇಶಿ ಮೊಹಲ್ಲಾ ಶಾಲೆಯಲ್ಲಿ ಶನಿವಾರ ಸಂಭ್ರಮ ಶನಿವಾರ ಕಾರ್ಯಕ್ರಮದಲ್ಲಿ ಮಕ್ಕಳು ಕಿರು ನಾಟಕ ಪ್ರದರ್ಶಿಸಿದರು.
ನಗರದ ಖುರೇಶಿ ಮೊಹಲ್ಲಾ ಶಾಲೆಯಲ್ಲಿ ಶನಿವಾರ ಸಂಭ್ರಮ ಶನಿವಾರ ಕಾರ್ಯಕ್ರಮದಲ್ಲಿ ಮಕ್ಕಳು ಕಿರು ನಾಟಕ ಪ್ರದರ್ಶಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಗುರು ಸೋನಾ ಸುಕುಮಾರಿ ಸಲಹೆ
  • ಸುರಪುರದಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮ
ಸುರಪುರ : ಪ್ರತಿಯೊಬ್ಬರೂ ಮಾದಕ ವಸ್ತುಗಳಿಂದ ದೂರ ಇರಬೇಕು ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಸೋನಾ ಸುಕುಮಾರಿ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖುರೇಶಿ ಮೊಹಲ್ಲಾದಲ್ಲಿ ಸಂಭ್ರಮ ಶನಿವಾರ ಕಾರ್ಯಕ್ರಮ ನಿಮಿತ್ತ ಮಾದಕ ವಸ್ತುಗಳ ದುರುಪಯೋಗ ಮತ್ತು ತಡೆಗಟ್ಟುವಿಕೆ ಕುರಿತು ಮಕ್ಕಳಿಗೆ ಕಿರು ನಾಟಕದ ಮೂಲಕ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾದಕ ವಸ್ತುಗಳು ನಮ್ಮ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತವೆ. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬವಲ್ಲದೆ ಸಮಾಜದ ಮೇಲು ಕೆಟ್ಟ ಪರಿಣಾಮ ಬೀರುತ್ತದೆ. ಇವುಗಳ ಸೇವನೆಯಿಂದ ವ್ಯಕ್ತಿಯ ಮೆದುಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುವುದರ ಜತೆಗೆ ಸಾಮಾಜಿಕ ಬದುಕಿಗೆ ಮಾರಕವಾಗುತ್ತದೆ. ಇಂತಹ ಮಾದಕ ವ್ಯಸನಗಳಿಂದ ನಾವೆಲ್ಲರೂ ಸದಾ ದೂರವಿರಬೇಕು ಎಂದು ಕಿವಿಮಾತು ಹೇಳಿದರು.
ಶಾಲಾ ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ವ್ಯಸನ ಮತ್ತು ಅದರ ದುಷ್ಪರಿಣಾಮಗಳ ಕುರಿತು ಮನ ಮುಟ್ಟುವಂತಹ ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ಇದಲ್ಲದೆ ಮಾದಕ ವಸ್ತುಗಳು ಸಮಾಜ ಮತ್ತು ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಚಿತ್ರಕಲೆ ಚಟುವಟಿಕೆಗಳು ಸಹ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಸಾಮುವೇಲ್, ಮಮತಾ ಪುರಾಣಿಕಮಠ, ರೇಣುಕಾದೇವಿ, ಉರ್ದು ಶಾಲೆಯ ಅಬ್ದುಲ್ ರೆಹಮಾನ್ ಸೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net